ಇನ್ನು ನಾಲ್ಕು ದಿನಗಳಲ್ಲಿ ಬರುವ ಹೋಳಿ ದಿನದ ದಿನ ಬಣ್ಣದ ಜೊತೆ ಹಣ ಮನೆಗೆ ಬರ್ಬೇಕೆಂದ್ರೆ ಈ ಚಿಕ್ಕ ಕೆಲಸ ಮಾಡಿ ಸಾಕು. ಏನು ಮಾಡಬೇಕು ಗೊತ್ತೇ?
ನಮಸ್ಕಾರ ಸ್ನೇಹಿತರೇ, ದೇಶದ ರಂಗಿನ ಹಬ್ಬ ಹೋಳಿಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇವೆ. ಬಣ್ಣದೋಕುಳಿಯ ಈ ಹಬ್ಬ ಸಾಂಪ್ರದಾಯಕವಾಗಿ ದೇಶಾದ್ಯಂತ ಆಚರಿಸಲಾಗುವ ಹಬ್ಬ. ಇದೇ ತಿಂಗಳ ಮಾರ್ಚ್ 18ರಂದು ನಡೆಯುವ ಈ ಹಬ್ಬಕ್ಕೆ ಜನ ರಂಗಿನಾಟಕ್ಕೇ ಕಾಯುತ್ತಿದ್ದಾರೆ. ಪರಪರ ರಂಗನ್ನು ಎರಚಿಕೊಳ್ಳುವ ಈ ಹಬ್ಬ ಜ್ಯೋತಿಷ್ಯ ಮತ್ತು ವಾಸ್ತು ಪ್ರಕಾರ, ಈ ಮಂಗಳಕರ ದಿನದಂದು ಹೇಳಲಾಗುತ್ತದೆ. ಈ ದಿನ ಜೀವನದಲ್ಲಿ ಏನನ್ನಾದರೂ ಅಳವಡಿಸಿಕೊಂಡರೆ ಕೆಲವು ವಿಶೇಷ ವಾಸ್ತು ಕ್ರಮಗಳನ್ನು ಅಳವಡಿಸಿಕೊಳ್ಳುವುದು ಜೀವನದಲ್ಲಿ ಸಂತೋಷ, ಸಮೃದ್ಧಿ ಮತ್ತು ಸಂತೋಷವನ್ನು ತರುತ್ತದೆ. ಇದು ಸಾಲ ಮತ್ತು ಹಣಕ್ಕೆ ಸಂಬಂಧಿಸಿದ ತುಂಬಾ ಒಳ್ಳೆಯದು ಎಂದು ಹೇಳಲಾಗುತ್ತದೆ ಹೋಳಿ ಸಮಯದಲ್ಲಿ ಪಾಲಿಸಬೇಕಾದ ವಾಸ್ತು ಸಲಹೆಗಳು ಇಲ್ಲಿವೆ.

ಹೋಳಿಯ ದಿನ ಈ ಕೆಲಸ ಮ್ಡಿದ್ರೆ ವಾಸ್ತು ದೋಷ ನಿವಾರಣೆಯಾಗುತ್ತದೆ ಎಂದು ಹೇಳಲಾಗುತ್ತದೆ. ಮೊದಲಿಗೆ ಗಣೇಶನ ಪೂಜೆ : ಹೋಳಿ ದಿನದಂದು ಗಣಪತಿಗೆ ಪೂಜೆ ಮಾಡುವುದು ಅತ್ಯಂತ ಶ್ರೇಷ್ಠ ಪಾನೀಯಗಳನ್ನು ನೈವೇದ್ಯ ಮಾಡಿದರೆ ಕುಟುಂಬದಲ್ಲಿ ಸಂತೋಷವನ್ನು ತರುತ್ತದೆ ಎಂದು ನಂಬಲಾಗಿದೆ. ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ಫೋಟೋ : ಹೋಳಿ ಹಬ್ಬದಂದು ಮಲಗುವ ಕೋಣೆಯಲ್ಲಿ ರಾಧಾ-ಕೃಷ್ಣರ ಚಿತ್ರವನ್ನು ತೂಗುಹಾಕಬೇಕು. ಹೋಳಿಯ ದಿನ ಈ ಫೋಟೊಕ್ಕೆ ಬಣ್ಣಗಳು ಮತ್ತು ಹೂವುಗಳನ್ನು ಅರ್ಪಿಸಿ. ಹೀಗೆ ಮಾಡುವುದರಿಂದ ದಂಪತಿಗಳ ನಡುವೆ ಪ್ರೀತಿ, ಕುಟುಂಬದಲ್ಲಿ ಸಂತೋಷ ನೆಲೆಸುತ್ತದೆ.

ಸೂರ್ಯ ದೇವನ ಆರಾಧನೆ : ಹೋಳಿ ದಿನದಂದು ಮುಖ್ಯ ದ್ವಾರದ ಹೊರಗೆ ಸೂರ್ಯನ ಫೋಟೊವನ್ನು ಹಾಕಬೇಕು. ಇದರಿಂದ ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗುತ್ತದೆ. ಉದ್ಯೋಗ ಮತ್ತು ವ್ಯವಹಾರಕ್ಕೆ ಸಂಬಂಧಿಸಿದ ಯಾವುಏ ಸಮಸ್ಯೆಗಳಿದ್ದರೂ ನಿವಾರಣೆಯಾಗುತ್ತದೆ. ಮನೆಯಲ್ಲಿ ಗಿಡ ಬೆಳೆಸುವುದು : ಹೋಳಿ ದಿನದಂದು ಮನೆಯಲ್ಲಿ ಮನಿ ಪ್ಲಾಂಟ್ ಮತ್ತು ತುಳಸಿ ಗಿಡವನ್ನು ನೆಡುವುದು ಮಂಗಳಕರ. ಹೀಗೆ ಮಾಡುವುದರಿಂದ ಯಾವುದೇ ಗ್ರಹದೋಷಗಳಿದ್ದರೂ ನಿವಾರಣೆಯಾಗುತ್ತದೆ.
ನರಸಿಂಹ ಸ್ತೋತ್ರ ಪಠಣೆ : ಹೋಳಿ ಹಬ್ಬದಂದು ನರಸಿಂಹ ಸ್ತೋತ್ರವನ್ನು ಪಠಿಸಿದ್ರೆ ನರಸಿಂಹ ನಮ್ಮನ್ನು ರಕ್ಷಿಸುತ್ತಾನೆಂದು ನಂಬಲಾಗಿದೆ. ಅಲ್ಲದೆ ಹೋಳಿ ದಹನದ ವೇಳೆ ಆ ಅಗ್ನಿಗೆ ತೆಂಗಿನಕಾಯಿಯನ್ನು ಅರ್ಪಿಸಿದರೆ ಸಾಲದ ಬಾಧೆಯಿಂದ ಮುಕ್ತಿ ಸಿಗುತ್ತದೆ. ಕಾಮ ದಹನ: ಮನೆಯಲ್ಲಿ ಯಾರಾದರೂ ಅನಾರೋಗ್ಯದಿಂದ ಬಳಲುತ್ತಿದ್ದರೆ, ಕಾಮ ದಹನದ ಭಸ್ಮವನ್ನು ಅವರ ದೇಹಕ್ಕೂ ಹಾಸಿಗೆಗೂ ಹಾಕಿ. ಇದರಿಂದ ಅವರ ದೀರ್ಘಕಾಲದ ಕಾಯಿಲೆಗಳು ಕೊಂಚವಾದರೂ ವಾಸಿಯಾಗುತ್ತದೆ.

ಶಿವಲಿಂಗಕ್ಕೆ ಗೋಮತಿ ಚಕ್ರವನ್ನು ಅರ್ಪಿಸುವುದು: ವ್ಯಾಪಾರ ವ್ಯವಹಾರದಲ್ಲಿ ಪ್ರಗತಿಯಾಗಬೇಕೆಂದರೆ, ಹೋಳಿ ದಿನದಂದು ಶಿವಲಿಂಗದ ಮೇಲೆ 21 ಗೋಮತಿ ಚಕ್ರವನ್ನು ಅರ್ಪಿಸಿ, “ಓಂ ನಮೋ ದಂಡಾಯ ಸ್ವಾಹಾ” ಎಂಬ ಮಂತ್ರವನ್ನು ಪಠಿಸಿ. ಇದು ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ಶ್ಲೋಕದ ಸಾಲುಗಳು.
ಅದೃಷ್ಟದ ಬಣ್ಣಗಳು : ಹೋಳಿ ಹಬ್ಬದ ಅಂದ್ರೆ ಬಣ್ಣಗಳ ಹಬ್ಬ. ಈ ದಿನ ಕೆಂಪು, ಗುಲಾಬಿ, ಹಸಿರು, ಕಿತ್ತಳೆ, ಹಳದಿ ಮುಂತಾದ ಬಣ್ಣಗಳನ್ನು ಮಂಗಳಕರವೆಂದು ಹೇಳಲಾಗುತ್ತದೆ. ಈ ಬಣ್ಣಗಳು ಸಕಾರಾತ್ಮಕತೆಯ ಸಂಕೇತ. ಅದೇ ಕಪ್ಪು, ಕಂದು ಮತ್ತು ಗಾಢ ಬಣ್ಣಗಳು ನಕಾರಾತ್ಮಕತೆಯನ್ನು ಹರಡುವುದರಿಂದ ಅಂಥ ಬಣ್ನಗಳನ್ನು ಬಳಸದೇ ಇರುವುದು ಉತ್ತಮ.