ಭಾರತೀಯ ಕ್ರಿಕೆಟ್ ಆಟಗಾರಿಗೆ ಮತ್ತೊಂದು ಶಾಕ್, ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡ ದ್ರಾವಿಡ್ -ಗಂಗೂಲಿ ಜೋಡಿ. ಏನು ಗೊತ್ತೇ??

31,910

ನಮಸ್ಕಾರ ಸ್ನೇಹಿತರೇ ಭಾರತ ಕ್ರಿಕೆಟ್ ತಂಡದ ಕೋಚ್ ಹಾಗೂ ಮ್ಯಾನೇಜ್ ಮೆಂಟ್ ಗೆ ಈಗ ಕಾಡುತ್ತಿರುವ ಅತಿ ದೊಡ್ಡ ಸಮಸ್ಯೆಯೆಂದರೇ ಅದು ಆಟಗಾರರ ಗಾಯದ ಸಮಸ್ಯೆ. ಒಂದಾದ ನಂತರ ಒಂದರಂತೆ ಹಲವಾರು ಯುವ ಆಟಗಾರರು ಫಿಟ್ ನೆಸ್ ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಗಾಯದ ಸಮಸ್ಯೆಯಿಂದ ಹಲವಾರು ಮಹತ್ವದ ಟೂರ್ನಿಗಳನ್ನು ತಪ್ಪಿಸಿಕೊಳ್ಳುತ್ತಿದ್ದಾರೆ. ಕಳೆದ ಒಂದು ವರ್ಷದಿಂದ ಕೇವಲ ಜಸಪ್ರಿತ್ ಬುಮ್ರಾ ಮಾತ್ರ ಗಾಯದ ಸಮಸ್ಯೆಯಿಂದ ಬಳಲಲಿಲ್ಲ.

ಅದರ ಹೊರತಾಗಿ ಬೇರೆಲ್ಲಾ ಆಟಗಾರರು ಗಾಯದ ಸಮಸ್ಯೆ ಕಾರಣ ಒಂದಲ್ಲಾ ಒಂದು ಸರಣಿಯನ್ನು ತಪ್ಪಿಸಿಕೊಂಡರು. ಮುಂದಿನ ಹನ್ನೆರಡು ತಿಂಗಳೊಳಗೆ ಮಹತ್ವದ ನಾಲ್ಕು ಐಸಿಸಿ ಟ್ರೋಫಿಯನ್ನು ಭಾರತ ಆಡಬೇಕಿರುವ ಕಾರಣ ಬಿಸಿಸಿಐ ಈಗ ಆಟಗಾರರ ಫಿಟ್ನೆಸ್ ಗೆ ಹೊಸ ಸೂತ್ರವೊಂದನ್ನು ಕಂಡು ಹಿಡಿದೆ. ಹೌದು ಗಾಯಗೊಂಡ ಆಟಗಾರರು ಹಾಗೂ ಫಿಟ್ ನೆಸ್ ಕಳೆದುಕೊಂಡ ಆಟಗಾರರಿಗೆ ಬೆಂಗಳೂರಿನ ಎನ್.ಸಿ.ಎ ಯಲ್ಲಿ ಪುನಶ್ಚೇತನ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿತ್ತು. ಅಲ್ಲಿ ಆಟಗಾರರು ಫಿಟ್ ನೆಸ್ ಕಾಯ್ದುಕೊಳ್ಳಲು ಎಲ್ಲಾ ರೀತಿಯ ಅಗತ್ಯ ಸಲಹೆ ನೀಡಲಾಗುತ್ತಿತ್ತು.

ಈಗ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹಾಗೂ ಕೋಚ್ ರಾಹುಲ್ ದ್ರಾವಿಡ್ ಮತ್ತೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಸದ್ಯ ಭಾರತ ತಂಡದ ಫಿಸಿಯೋ ಆಗಿರುವ ನಿತಿನ್ ಪಟೇಲ್ ರನ್ನು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ ಗೆ ವರ್ಗಾಯಿಸಲು ಮುಂದಾಗಿದೆ. ಕ್ರೀಡಾ ವೈದ್ಯಕೀಯ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ ಬಡ್ತಿ ನೀಡುವ ಸಾಧ್ಯತೆ ಸಹ ಇದೆ ಎಂದು ಹೇಳಲಾಗಿದೆ. ಇಲ್ಲಿ ನಿತಿನ್ ಪಟೇಲ್ ಗಾಯಗೊಂಡ ಆಟಗಾರರು ಗುಣಮುಖರಾಗಿ ಫಿಟ್ ನೆಸ್ ಕಾಯ್ದುಕೊಳ್ಳಲು ಸಲಹೆ ನೀಡುವುದರ ಜೊತೆಗೆ ಭವಿಷ್ಯದಲ್ಲಿ ಗಾಯಗೊಳ್ಳುವ ಸಮಸ್ಯೆಯಿಂದ ತಪ್ಪಿಸಿಕೊಳ್ಳುವುದರ ಬಗೆಗೆ ಸಲಹೆ ನೀಡಲಿದ್ದಾರೆ, ಅಷ್ಟೇ ಅಲ್ಲದೆ ಫಿಟ್ನೆಸ್ ಇಲ್ಲದೆ ತಂಡದಲ್ಲಿ ಇರಲು ಸಾಧ್ಯವಿಲ್ಲ ಎಂಬುದನ್ನು ಸ್ಪಷ್ಟ ಪಡಿಸಲು ಮುಂದಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ.