ಮತ್ತೆ ವೈರಲ್ ಆಯಿತು ರಾಗಿಣಿ ಪ್ರಜ್ವಲ್ ರವರ ಡಾನ್ಸ್, ಎಷ್ಟು ಚೆಂದ ಡಾನ್ಸ್ ಮಾಡಿದ್ದಾರೆ ಗೊತ್ತೇ?? ಮೊದಲ ಬಾರಿಗೆ ತೋರಿಸ್ತೇವೆ.
ನಮಸ್ಕಾರ ಸ್ನೇಹಿತರೇ ಕೆಲವೊಂದು ಪ್ರತಿಭೆಗಳು ಸಿನಿಮಾಗಳಿಗೆ ಬಂದೇ ಜನಪ್ರಿಯ ರಾಗ ಬೇಕೆಂದಿಲ್ಲ. ಸೋಶಿಯಲ್ ಮೀಡಿಯಾದಲ್ಲಿ ಅವರ ಪ್ರತಿಭೆಯ ಅನಾವರಣವಾಗಿ ಅವರನ್ನು ಫಾಲೋ ಮಾಡುವಂತಹ ಹಲವಾರು ಅಭಿಮಾನಿಗಳು ಕೂಡ ಇರುತ್ತಾರೆ. ಇನ್ನು ನಾವು ಮಾತನಾಡಲು ಹೊರಟಿರುವುದು ಕನ್ನಡ ಚಿತ್ರರಂಗದ ಡೈನಾಮಿಕ್ ಸ್ಟಾರ್ ಆಗಿರುವ ದೇವರಾಜ್ರವರ ಪುತ್ರನಾಗಿರುವ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ರವರ ಪತ್ನಿಯಾಗಿರುವ ರಾಗಿಣಿ ರವರ ಕುರಿತಂತೆ. ಇದುವರೆಗೂ ರಾಗಿಣಿ ರವರು ಕೇವಲ ಒಂದು ಸಿನಿಮಾದಲ್ಲಿ ಕಾಣಿಸಿಕೊಂಡಿರಬಹುದು ಅಷ್ಟೇ.
ಪ್ರಜ್ವಲ್ ದೇವರಾಜ್ ರವರು ಹಾಗೂ ರಾಗಿಣಿ ರವರು ಚಿಕ್ಕವಯಸ್ಸಿನಿಂದಲೂ ಕೂಡ ಪ್ರೀತಿಸಿ ಎಲ್ಲರ ಸಮ್ಮುಖದಲ್ಲಿ ಎಲ್ಲರ ಒಪ್ಪಿಗೆ ಮೇರೆಗೆ ಮದುವೆಯಾದವರು. ಕನ್ನಡ ಚಿತ್ರರಂಗದ ಅತ್ಯಂತ ನೆಚ್ಚಿನ ಜೋಡಿಗಳಲ್ಲಿ ಇವರಿಬ್ಬರೂ ಕೂಡ ಶಾಮೀಲಾಗಿದ್ದಾರೆ. ಇನ್ನು ರಾಗಿಣಿ ರವರು ನೃತ್ಯ ಗಾರಿಕೆಯಲ್ಲಿ ಅಸಮಾನ್ಯ ಪ್ರತಿಭಾವಂತರಾಗಿದ್ದಾರೆ. ಈಗಾಗಲೇ ರಾಗಿಣಿ ಅವರು ನೃತ್ಯ ಕಲಿಕಾ ತರಬೇತಿ ಸಂಸ್ಥೆಯನ್ನು ಕೂಡ ತೆರೆದಿರುವುದು ನಿಮಗೆಲ್ಲರಿಗೂ ಗೊತ್ತಿರುವ ವಿಚಾರವಾಗಿದೆ. ಆಗಾಗ ರಾಗಿಣಿ ಅವರು ತಮ್ಮ ಪತಿಯ ಜೊತೆಗೆ ಅಥವಾ ತಾವು ಒಬ್ಬರೇ ನೃತ್ಯ ಮಾಡಿರುವ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಲೇ ಇರುತ್ತಾರೆ.
ಇತ್ತೀಚಿಗಷ್ಟೇ ಅವರ ಸಾಂಸ್ಕೃತಿಕ ನೃತ್ಯದ ವಿಡಿಯೋ ಒಂದು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿದ್ದು ಎಲ್ಲರೂ ಕೂಡ ಮೆಚ್ಚಿಕೊಂಡಿದ್ದಾರೆ. ಯಾವುದೇ ಪ್ರೊಫೆಷನಲ್ ನೃತ್ಯಪಟು ಗಿಂತ ಕಡಿಮೆ ಇಲ್ಲದಂತೆ ಪರಿಪಕ್ವವಾಗಿ ನೃತ್ಯವನ್ನು ಮಾಡುವ ರಾಗಿಣಿ ರವರಿಗೆ ಪ್ರತಿಯೊಂದು ಕಡೆಯಿಂದ ಮೆಚ್ಚುಗೆಯ ಮಹಾಪೂರವೇ ವ್ಯಕ್ತವಾಗುತ್ತಿದೆ. ವೈರಲ್ ಆಗಿರುವ ರಾಗಿಣಿ ಅವರ ನೃತ್ಯದ ವಿಡಿಯೋವನ್ನು ನೀವು ಕೂಡ ನೋಡಬಹುದಾಗಿದೆ. ವೀಡಿಯೋವನ್ನು ವೀಕ್ಷಿಸಿ ನಿಮ್ಮ ಅಭಿಪ್ರಾಯವೇನು ತಪ್ಪದೇ ಹಂಚಿಕೊಳ್ಳಿ.