ಬಿಗ್ ನ್ಯೂಸ್: ದೇಶವೇ ಖುಷಿ ಪಡುವ ಸುದ್ದಿ, ಮೊದಲ ದಿನವೇ ರೆಕಾರ್ಡ್ ಬ್ರೇಕಿಂಗ್ ಕಲೆಕ್ಷನ್ ಮಾಡಿದ ರಾಧೇಶ್ಯಾಮ್, ಎಷ್ಟು ಕೋಟಿ ಗೊತ್ತೇ??

55

ನಮಸ್ಕಾರ ಸ್ನೇಹಿತರೇ ಪ್ರಭಾಸ್ ಹಾಗೂ ಪೂಜಾ ಹೆಗ್ಡೆ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ರಾಧೇಶ್ಯಾಮ್ ಚಿತ್ರ ನಿನ್ನೆಯಷ್ಟೇ ವಿಶ್ವಾದ್ಯಂತ ಸಾವಿರಾರು ಸಿನಿಮಾ ಥಿಯೇಟರ್ ಗಳಲ್ಲಿ ಅದ್ದೂರಿಯಾಗಿದೆ. ನಿರೀಕ್ಷೆಯಂತೆ ವಿಶ್ವದಾದ್ಯಂತ ಚಿತ್ರಮಂದಿರಗಳಲ್ಲಿ ರಾಧೇಶ್ಯಾಮ್ ಚಿತ್ರ ಅದ್ದೂರಿಯಾಗಿ ಓಪನಿಂಗ್ ಅನ್ನು ಕೂಡ ಪಡೆದುಕೊಂಡಿದೆ.

ಇದು ಅನಿರೀಕ್ಷಿತ ಸಮಯವಾಗಿದ್ದು ದೊಡ್ಡ ಬಜೆಟ್ ಸಿನಿಮಾಗಳು ಬಿಡುಗಡೆ ಆಗುವುದು ಅನುಮಾನದ ವಿಚಾರವಾಗಿತ್ತು. ಆದರೆ ರೆಬಲ್ ಸ್ಟಾರ್ ಪ್ರಭಾಸ್ ರವರ ರಾಧೇಶ್ಯಾಮ್ ಚಿತ್ರತಂಡ ಧೈರ್ಯಮಾಡಿ ಸಿನಿಮಾವನ್ನು ಬಿಡುಗಡೆ ಮಾಡಿದೆ. ಕೆಲವರು ಸಿನಿಮಾವನ್ನು ಇಷ್ಟಪಟ್ಟರೆ ಇನ್ನು ಕೆಲವರು ಆವರೇಜ್ ಎನ್ನುವುದಾಗಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಸಿನಿಮಾದ ಕುರಿತಂತೆ ಪ್ರೇಕ್ಷಕರ ಅಭಿಪ್ರಾಯಗಳು ಏನೇ ಇರಲಿ ಆದರೆ ಎಲ್ಲರೂ ಕೂಡ ಸಿನಿಮಾವನ್ನು ಮೊದಲ ದಿನವೇ ನೋಡಿದ್ದಾರೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಯಾಕೆಂದರೆ ಮೊದಲ ದಿನದ ಕಲೆಕ್ಷನ್ ಅನ್ನು ನೋಡಿದರೆ ಖಂಡಿತವಾಗಿ ಇದು ಸಾಬೀತಾಗುತ್ತಿದೆ.

ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಪ್ರಭಾಸ್ ರವರು ಭವಿಷ್ಯವನ್ನು ನೋಡುವ ವ್ಯಕ್ತಿಯಾಗಿದ್ದು ರೋಮ್ಯಾಂಟಿಕ್ ಸೀನ್ ಗಳು ಕೂಡ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಚಿತ್ರ ಅದ್ದೂರಿಯಾಗಿ ಮೂಡಿ ಬಂದಿರುವುದು ಪ್ರತಿಯೊಂದು ಫ್ರೇಮ್ಗಳಲ್ಲಿ ಕೂಡ ಕಂಡುಬರುತ್ತಿದೆ. ಇನ್ನು ಚಿತ್ರದ ಕಲೆಕ್ಷನ್ ವಿಚಾರದಲ್ಲಿ ಕೂಡ ಸಿನಿಮಾ ಹಿಂದೆ ಬಿದ್ದಿಲ್ಲ. ಹೌದು ರೆಬೆಲ್ ಸ್ಟಾರ್ ಪ್ರಭಾಸ್ ರವರ ಸಿನಿಮಾ ಎಂದರೆ ಬಾಕ್ಸಾಫೀಸ್ ನಲ್ಲಿ ಕೋಟಿ ಕೋಟಿ ಕಲೆಕ್ಷನ್ ಹರಿದು ಬರುವುದರಲ್ಲಿ ಯಾವುದೇ ಅನುಮಾನವಿಲ್ಲ. ಮೊದಲ ದಿನವೇ ವಿಶ್ವಾದ್ಯಂತ ರಾಧೇಶ್ಯಾಮ್ ಚಿತ್ರ ಬರೋಬ್ಬರಿ 79 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಲಾಕ್ಡೌನ್ ಅನಂತರದಲ್ಲಿ ಮೊದಲ ದಿನ ಅತ್ಯಂತ ಹೆಚ್ಚು ಬಾಕ್ಸಾಫೀಸ್ ಕಲೆಕ್ಷನ್ ಮಾಡಿರುವ ಚಿತ್ರಗಳಲ್ಲಿ ರಾಧೇಶ್ಯಾಮ್ ಚಿತ್ರ ಅಗ್ರಗಣ್ಯ ವಾಗಿ ಮೂಡಿಬಂದಿದೆ. ನೀವು ಕೂಡ ರಾಧೇಶ್ಯಾಮ್ ಚಿತ್ರವನ್ನು ವೀಕ್ಷಿಸಿದ್ದರೆ ನಿಮ್ಮ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಶೇರ್ ಮಾಡಿ