ಸಾಮಾಜಿಕ ಜಾಲತಾಣಗಳಲ್ಲಿ ಸಿಹಿ ಸುದ್ದಿ ಹಂಚಿಕೊಂಡ ನಟಿ ಖುಷ್ಬು, ಶುಭ ಹಾರೈಸಿದ ಅಭಿಮಾನಿಗಳು. ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ 90ರ ದಶಕದಲ್ಲಿ ಮಿಂಚಿನಂತಹ ಹಲವಾರು ನಟಿಯರಲ್ಲಿ ನಮಗೆ ತಟ್ಟನೆ ನೆನಪಾಗುವುದು ನಟಿ ಖುಷ್ಬೂ ಸುಂದರ್ ಅವರು. ಖುಷ್ಬು ರವರು ಯಾವುದೇ ಪಾತ್ರವನ್ನು ಕೂಡ ನೀಡಿದರೆ ನಟಿಸಬಲ್ಲಂತಹ ನಟಿಯಾಗಿದ್ದರು. ಕನ್ನಡದಲ್ಲಿ ಕೂಡ ಅಂದಿನ ಕಾಲದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಸೇರಿದಂತೆ ಹಲವಾರು ಜನ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಂಡಂತಹ ಅದ್ಭುತ ನಟಿ. ಸದ್ಯಕ್ಕೆ ಆಗೊಮ್ಮೆ-ಈಗೊಮ್ಮೆ ಸಿನಿಮಾಗಳಲ್ಲಿ ಕಾಣಿಸಿಕೊಂಡರು ಕೂಡ ಸಂಪೂರ್ಣವಾಗಿ ತಮ್ಮನ್ನು ತಾವು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ.
ಸದ್ಯಕ್ಕೆ ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದು ಸುಖವಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಒಂದು ಕಾಲದಲ್ಲಿ ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮಿಳು ತೆಲುಗು ಚಿತ್ರರಂಗಗಳಲ್ಲಿ ಕೂಡ ಖುಷ್ಬು ರವರ ಬೇಡಿಕೆಯನ್ನುವುದು ಆಕಾಶದ ಮಟ್ಟದಲ್ಲಿತ್ತು. ಇವರು ಇತ್ತೀಚೆಗೆ ಫಿಟ್ನೆಸ್ ನಲ್ಲಿ ಕೂಡ ಸಾಕಷ್ಟು ಧ್ಯಾನವನ್ನು ವಹಿಸಿದ್ದು ದೈಹಿಕ ಕಸರತ್ತುಗಳನ್ನು ಕೂಡ ಮಾಡುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಕೂಡ ಸಕ್ರಿಯವಾಗಿದ್ದು ಆಗಾಗ ತಮ್ಮ ಹಾಗೂ ಕುಟುಂಬಕ್ಕೆ ಸಂಬಂಧಿಸಿದ ಫೋಟೋ ವಿಡಿಯೋಗಳನ್ನು ಅಪ್ಲೋಡ್ ಮಾಡುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ ಅಭಿಮಾನಿಗಳೊಂದಿಗೆ ಸಂತೋಷದ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಹೌದು ಗೆಳೆಯರೇ ಆ ಗುಡ್ ನ್ಯೂಸ್ ಇನ್ನೇನೂ ಅಲ್ಲ ಖುಷ್ಬೂ ಹಾಗೂ ನಿರ್ಮಾಪಕ ಸುಂದರ ಇಬ್ಬರು ಕೂಡ ಮದುವೆಯಾಗಿ ಇದ್ದಾಗಲೇ 22 ವರ್ಷಗಳು ಸಂಪೂರ್ಣಗೊಂಡಿದೆ. ಈ ಕುರಿತಂತೆ ಖುಷ್ಬೂ ತಮ್ಮ ಸೋಶಿಯಲ್ ಮೀಡಿಯಾ ಗಳಲ್ಲಿ ಮದುವೆ ಸಂದರ್ಭದಲ್ಲಿ ತೆಗೆದ ಫೋಟೋ ಹಾಗೂ ಇಂದಿನ ಸಮಯದಲ್ಲಿ ತೆಗೆದಂತಹ ಫೋಟೋ ಎರಡನ್ನು ಪೋಸ್ಟ್ ಮಾಡಿ ತಮ್ಮ ಸಂತೋಷವನ್ನು ಹಂಚಿಕೊಂಡಿದ್ದಾರೆ. ನೀವು ಕೂಡ ಕಾಮೆಂಟ್ ಬಾಕ್ಸ್ನಲ್ಲಿ ಅವರಿಗೆ ಮದುವೆ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಬಹುದು.