ಯಪ್ಪಾ ಹೀಗೂ ಇರ್ತಾರ?? ಬರೋಬ್ಬರಿ 20 ಕೋಟಿ ನೀಡುತ್ತೇನೆ ಮದುವೆಯಾಗಿ ಎಂದ ಹುಡುಗಿ, ನಟ ಕಾರ್ತಿಕ್ ಮಾಡಿದ್ದೇನು ಗೊತ್ತೇ??

71

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಹೊಸ ಯುವ ಉದಯೋನ್ಮುಖ ಪ್ರತಿಭೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲಿ ಇಂದು ನಾವು ಮಾತನಾಡಲು ಹೊರಟಿರುವ ಯುವ ಉದಯೋನ್ಮುಖ ನಟ ಕೂಡ ಒಬ್ಬರು ಎಂದರೆ ತಪ್ಪಾಗಲಾರದು. ಹೌದು ನಾವು ಮಾತನಾಡುತ್ತಿರುವುದು ಕಾರ್ತಿಕ್ ಆರ್ಯನ್ ರವರ ಕುರಿತಂತೆ. ಹಲವಾರು ವರ್ಷಗಳ ಹಿಂದೆ ಹೋದರೆ ಈ ವ್ಯಕ್ತಿ ಯಾರು ಎನ್ನುವುದು ತಿಳಿದಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಥಟ್ಟನೆ ಜನಪ್ರಿಯತೆಗೆ ಬಂದಿದ್ದಾರೆ.

ಇನ್ನು ಹಲವಾರು ವರ್ಷಗಳ ಹಿಂದೆ ಅಕ್ಷಯ್ ಕುಮಾರ್ ನಟಿಸಿರುವ ಸೂಪರ್ ಹಿಟ್ ಸಿನಿಮಾ ಭೂಲ್ ಭುಲೈಯ್ಯಾ ಸಿನಿಮಾದ ಎರಡನೇ ಭಾಗದಲ್ಲಿ ಕಾರ್ತಿಕ್ ಆರ್ಯನ್ ರವರು ನಾಯಕನಾಗಿ ಆಯ್ಕೆಯಾಗಿದ್ದಾರೆ. ಇನ್ನು ಅಲ್ಲು ಅರ್ಜುನ್ ನಟನೆಯ ಸೂಪರ್ ಹಿಟ್ ತೆಲುಗು ಚಿತ್ರ ಅಲ ವೈಕುಂಠ ಪುರಂಲೋ ನ ಹಿಂದಿ ರಿಮೇಕ್ ಚಿತ್ರವಾಗಿರುವ ಶಹಜಾದ ದಲ್ಲಿ ಕೂಡ ಕಾರ್ತಿಕ ಆರ್ಯನ್ ಅವರು ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ. ಇನ್ನು ಇತ್ತೀಚಿನ ದಿನಗಳಲ್ಲಿ ಕಾರ್ತಿಕ್ ಆರ್ಯನ್ ಸುದ್ದಿಯಾಗುತ್ತಿರುವುದು ಬೇರೆ ವಿಚಾರಕ್ಕೆ.

ಇತ್ತೀಚೆಗಷ್ಟೇ ಕಾರ್ತಿಕ್ ಆರ್ಯನ್ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿದ್ದರು. ಈ ಪೋಸ್ಟಿನ ಕಾಮೆಂಟ್ನಲ್ಲಿ ಒಬ್ಬ ಫೀಮೇಲ್ ಅಭಿಮಾನಿ ಕೇಳಿದ ಪ್ರಶ್ನೆ ಈಗ ದೊಡ್ಡ ಸಂಚಲನಕ್ಕೆ ಕಾರಣವಾಗಿದೆ. ಇದಕ್ಕಿಂತಲೂ ದೊಡ್ಡ ಸುದ್ದಿಯಾಗುತ್ತಿರುವುದು ಪ್ರಶ್ನೆಗೆ ಕಾರ್ತಿಕ್ ಆರ್ಯನ್ ಕೊಟ್ಟಂತಹ ಉತ್ತರ. ಹೌದು ಕಾಮೆಂಟ್ನಲ್ಲಿ ಮಹಿಳಾ ಅಭಿಮಾನಿಯೊಬ್ಬರು ಕಾರ್ತಿಕ್ ಆರ್ಯನ್ ರವರಿಗೆ 20 ಕೋಟಿ ಕೊಡ್ತೀನಿ ನನ್ನನ್ನು ಮದುವೆಯಾಗುತ್ತೀರಾ ಎಂಬುದಾಗಿ ಪ್ರಪೋಸಲ್ ಇಟ್ಟಿದ್ದಾರೆ. ಇದಕ್ಕೆ ಜಾಣ್ಮೆಯಿಂದ ಉತ್ತರ ನೀಡಿರುವ ಕಾರ್ತಿಕ್ ಆರ್ಯನ್ ಅವರು ಯಾವಾಗ ಎಂಬುದಾಗಿ ಹಾಸ್ಯಸ್ಪದವಾಗಿ ಉತ್ತರ ನೀಡಿದ್ದಾರೆ. ಈ ಹಿಂದೆ ಕಾರ್ತಿಕ್ ಆರ್ಯನ್ ಹಾಗೂ ಅನನ್ಯ ಪಾಂಡೆ ಮತ್ತು ಸಾರಾ ಅಲಿಖಾನ್ ರವರ ನಡುವೆ ಟ್ರಯಾಂಗಲ್ ಲವ್ ಸ್ಟೋರಿ ಕೂಡ ಕೇಳಿಬಂದಿತ್ತು.