ಬದಲಾಯಿತು ಪ್ಲಾನ್, ಇದ್ದಕ್ಕಿದ್ದ ಹಾಗೆ ನಡುರಾತ್ರಿ ಅಪ್ಪು ಸಮಾಧಿಗೆ ಹೊರಡುವ ಪ್ಲಾನ್ ಮಾಡಿದ ಅಶ್ವಿನಿ, ಯಾಕೆ ಅಂತೇ ಗೊತ್ತೇ?? ಯಾವಾಗ ಗೊತ್ತೇ??

563

ನಮಸ್ಕಾರ ಸ್ನೇಹಿತರೇ ದೊಡ್ಡಮನೆಯ ಕಿರಿಯ ಮಗ ನಾಡಿನ ಸಮಸ್ತ ಕನ್ನಡಿಗರನ್ನೆಲ್ಲ ಅಗಲಿ ಬಾರದ ಲೋಕಕ್ಕೆ ಹೋಗಿರುವುದನ್ನು ಇಂದಿಗೂ ಕೂಡ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆಗಾಗ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಫೋಟೋ ಹಾಗೂ ಸಾಂಗ್ ಗಳನ್ನು ಟಿವಿ ಅಥವಾ ಮೊಬೈಲ್ನಲ್ಲಿ ನೋಡಿದಾಗಲೆಲ್ಲ ಕಣ್ಣೀರು ಎನ್ನುವುದು ಉಮ್ಮಳಿಸಿ ಬರುತ್ತದೆ. ನಿಜಕ್ಕೂ ಕೂಡ ಅವರು ಇಲ್ಲ ಎನ್ನುವ ದುಃಖವನ್ನು ಭರಿಸುವಂತಹ ಶಕ್ತಿ ದೇವರು ಕೊಡುವುದಕ್ಕೂ ಕೂಡ ಸಾಧ್ಯವಿಲ್ಲ.

ಕೇವಲ ಅವರ ನಟನೆಯನ್ನು ನೋಡಿ ಅವರನ್ನು ಹಚ್ಚಿಕೊಂಡಿದ್ದ ಅಭಿಮಾನಿಗಳಾದ ನಮಗೆ ಇಷ್ಟೊಂದು ದುಃಖವಾಗಿ ಇರಬೇಕಾದರೆ, ಇನ್ನು ಅವರನ್ನು ಚಿಕ್ಕಂದಿನಿಂದಲೂ ಕೂಡ ನೋಡಿ ಅವರ ಜೊತೆಗೆ ಬೆಳೆದಂತಹ ಅಕ್ಕ ಅಣ್ಣಂದಿರಿಗೆ 22 ವರ್ಷಗಳಿಂದ ಅವರ ಜೊತೆಗೆ ಜೀವನದ ಪ್ರತಿಯೊಂದು ಏಳುಬೀಳುಗಳಲ್ಲಿ ಜೊತೆಯಾದ ಅಂತಹ ಅವರ ಧರ್ಮಪತ್ನಿ ಅಶ್ವಿನಿ ಪುನೀತ್ ರಾಜಕುಮಾರ್ ರವರಿಗೆ ಅವರ ಮಕ್ಕಳಿಗೆ ಎಷ್ಟೊಂದು ದುಃಖವಾಗಿ ಇರಬೇಡ ನೀವೇ ಅಂದಾಜಿಸಿ. ಇನ್ನು ಅವರ ಮರಣದ ನಂತರ ಅವರು ಮಾಡಿರುವ ಸಹಾಯದಿಂದ ಅದೆಷ್ಟು ಜೀವಗಳು ಕೂಡ ಉಳಿದಿದ್ದವು. ಅಸಹಾಯಕರ ಜೀವನವು ಕೂಡ ಉಳಿದಿತ್ತು.

ಪುನೀತ್ ರಾಜಕುಮಾರ್ ಎನ್ನುವ ಪುಣ್ಯಾತ್ಮ ನಿಂದಾಗಿ ಅದೆಷ್ಟೋ ಮಕ್ಕಳು ವಿದ್ಯಾಭ್ಯಾಸವನ್ನು ಪಡೆದವು. ಹಸಿವಿನಿಂದ ಪರದಾಡುತ್ತಿರುವ ಅವರಿಗೆ ಸ್ವಾವಲಂಬಿಯಾಗಿ ದುಡಿದು ತಿನ್ನುವಂತಹ ಶಕ್ತಿಯನ್ನು ಕೊಟ್ಟರು. ಆ ಭಗವಂತ ಹೇಗಿದ್ದಾನೆ ಎನ್ನುವ ಅರಿವು ನಮಗಿಲ್ಲ ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಮಾಡಿರುವಂತಹ ಕೆಲಸ ದೇವರ ಕೆಲಸಕ್ಕಿಂತ ಕಡಿಮೆಯಲ್ಲ. ಇನ್ನು ಅಪ್ಪು ಅವರು ಮರಣ ಹೊಂದಿದ ದಿನದಿಂದಲೂ ಕೂಡ ಇಂದಿನವರೆಗೂ ಅಶ್ವಿನಿ ಪುನೀತ್ ರಾಜಕುಮಾರ್ ಅವರು ಮಾಧ್ಯಮದ ಮುಂದೆ ಒಂದು ಮಾತನ್ನು ಕೂಡ ಆಡಿದ್ದಿಲ್ಲ. ಪುನೀತ್ ರಾಜಕುಮಾರ್ ರವರ ಕನಸಾಗಿರುವ ಪಿಆರ್ ಕೆ ಪ್ರೊಡಕ್ಷನ್ ಅನ್ನು ಮುಂದುವರಿಸಿಕೊಂಡು ಹೋಗಿ ಈಗಾಗಲೇ ಎರಡು ಸಿನಿಮಾಗಳನ್ನು ಬಿಡುಗಡೆ ಮಾಡಿದ್ದಾರೆ.

ಅಶ್ವಿನಿ ಪುನೀತ್ ರಾಜಕುಮಾರ್ ಅವರು ಈಗಾಗಲೇ ಪುನೀತ್ ರಾಜಕುಮಾರ್ ರವರು ಚಿತ್ರೀಕರಿಸಿರುವ ಗಂಧದಗುಡಿ ಡಾಕ್ಯುಮೆಂಟರಿ ಫಿಲ್ಮನ್ನು ಸಿನಿಮಾ ಥಿಯೇಟರುಗಳಲ್ಲಿ ಬಿಡುಗಡೆ ಮಾಡುವ ನಿರ್ಧಾರವನ್ನು ಕೂಡ ಮಾಡಿದ್ದಾರೇ. ಈಗಾಗಲೇ ಹಲವಾರು ಜನರ ಜೀವನೋಪಾಯದ ದಾರಿ ಕೂಡ ಆಗಿದ್ದಾರೆ. ಇದೇ ಮಾರ್ಚ್ 17ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಜನ್ಮ ದಿನದ ವಿಶೇಷವಾಗಿ ಅವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಬಿಡುಗಡೆಯಾಗಲಿದೆ. ಅಭಿಮಾನಿಗಳಂತೂ ತಮ್ಮ ಆರಾಧ್ಯದೈವ ನ ಜನ್ಮದಿನವನ್ನು ಹಬ್ಬದಂತೆ ಆಚರಿಸಲು ಸಿದ್ಧರಾಗಿ ನಿಂತಿದ್ದಾರೆ.

ಶಿವಣ್ಣ ಹೇಳಿದಂತೆ ಪುನೀತ್ ರಾಜಕುಮಾರ್ ಅವರು ಹುಟ್ಟಿದ್ದು ರಾಜನಾಗಿ ಬೆಳೆದಿದ್ದು ರಾಜನಾಗಿ ಹೋಗಿದ್ದು ಕೂಡ ರಾಜನಾಗಿಯೇ. ಇನ್ನು ಅಭಿಮಾನಿಗಳು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ದೈಹಿಕವಾಗಿ ಇಲ್ಲದಿದ್ದರೂ ಕೂಡ ಅವರ ಜನ್ಮದಿನವನ್ನು ಅವರ ಕಂಠೀರವ ಸ್ಟುಡಿಯೋದ ಸಮಾಧಿ ಬಳಿ ಆಚರಿಸಲು ಸಿದ್ಧರಾಗಿದ್ದಾರೆ. ಬೃಹತ್ ಕೇಕನ್ನು ತರಿಸುವ ಮೂಲಕ ಅಭಿಮಾನಿಗಳು ಅದ್ದೂರಿಯಾಗಿ ಅಪ್ಪು ಬಾಸ್ ಜನ್ಮ ದಿನವನ್ನು ಆಚರಿಸಲು ಸಿದ್ಧರಾಗಿದ್ದಾರೆ. ಇಷ್ಟು ಮಾತ್ರವಲ್ಲದೆ ಅಭಿಮಾನಿಗಳಿಗೆ ಅನ್ನಸಂತರ್ಪಣೆಯನ್ನು ಕೂಡ ಮಾಡಲಿದ್ದಾರೆ. ಜನವರಿ 16 ರ ಮಧ್ಯರಾತ್ರಿಯಿಂದ ಎಲ್ಲಾ ಸಂಭ್ರಮಾಚರಣೆಗಳು ಅಪ್ಪು ರವರ ಅನುಪಸ್ಥಿತಿಯ ನಡುವಲ್ಲು ಕೂಡ ಅಭಿಮಾನಿಗಳು ಆಚರಿಸುತ್ತಿರುವುದು ನಿಜಕ್ಕೂ ಸಂತೋಷಕರ ವಿಚಾರ. ಒಬ್ಬ ನಟ ಹೋದಮೇಲೆ ಕೂಡ ಇಷ್ಟು ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಹಾಗೂ ಪ್ರೀತಿಯನ್ನು ಪಡೆಯುತ್ತಿರುವುದು ಇದೇ ಮೊದಲು ಎಂದು ಹೇಳಬಹುದಾಗಿದೆ.

ಕೇವಲ ಅಭಿಮಾನಿಗಳು ಮಾತ್ರವಲ್ಲದೆ ಆ ದಿನ ಮಧ್ಯರಾತ್ರಿ ದೊಡ್ಮನೆ ಕುಟುಂಬಸ್ಥರು ಕೂಡ ಅಭಿಮಾನಿಗಳೊಂದಿಗೆ ಅಪ್ಪುವಿನ ಸಮಾಧಿ ಬಳಿ ಬರಲಿದ್ದಾರೆ. ಅಶ್ವಿನಿ ಪುನೀತ್ ರಾಜಕುಮಾರ್ ಶಿವಣ್ಣ ರಾಘಣ್ಣ ಗೀತಕ್ಕ ಸೇರಿದಂತೆ ಅಪ್ಪು ಅವರ ಮಕ್ಕಳು ಕೂಡ ಹಾಗೂ ಇನ್ನಿತರ ಕುಟುಂಬಸ್ಥರು ಕೂಡ ಉಪಸ್ಥಿತರಿರಲಿದ್ದಾರೆ. ಆದರೆ ಈ ಬಾರಿ ಅಪ್ಪು ಇಲ್ಲದೆ ಅವರ ಜನ್ಮ ದಿನಾಚರಣೆಯನ್ನು ಆಚರಿಸುವುದು ಅವರ ಪತ್ನಿಯಾಗಿರುವ ಅಶ್ವಿನಿ ಅವರಿಗೆ ಸೇರಿದಂತೆ ಎಲ್ಲರೂ ಕೂಡ ಒಂದು ಹಂತದ ದುಃಖವನ್ನು ತುಂಬುವುದಂತೂ ಸತ್ಯ.