ಬಿಗ್ ನ್ಯೂಸ್: ಪರಮೇಶ್ವರ್ ಗುಂಡ್ಕಲ್ ರವರ ಜೊತೆ ಇದ್ದಕ್ಕಿದ್ದ ಹಾಗೆ ಕಿರುತೆರೆಗೆ ಕಾಲಿಟ್ಟ ಶಿವಣ್ಣ, ಕಲರ್ಸ್ ಕನ್ನಡ ಟಿಆರ್ಪಿ ಪಕ್ಕ ಮೇಲಕ್ಕೆ, ಯಾವ ಕಾರ್ಯಕ್ರಮ ಗೊತ್ತೇ??

1,223

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಅವರ ಎವರ್ಗ್ರೀನ್ ನಟ ಯಾರು ಎಂದು ಕೇಳಿದರೆ ಎಲ್ಲರೂ ಹೇಳುವ ಉತ್ತರ ಕರುನಾಡ ಚಕ್ರವರ್ತಿ ಶಿವಣ್ಣ ಎಂದು. ಎಲ್ಲರಿಗೂ ವಯಸ್ಸು ಹೆಚ್ಚಾಗುತ್ತ ಹೋದರೆ ಶಿವಣ್ಣನಿಗೆ ಮಾತ್ರ ವಹಿಸಿ ಕಡಿಮೆಯಾಗುತ್ತಾ ಹೋಗುತ್ತದೆ ಎಂಬುದಾಗಿ ಕನ್ನಡಚಿತ್ರರಂಗದಲ್ಲಿ ಮಾತಿದೆ.

ಇನ್ನೇನು ಕೆಲವೇ ವರ್ಷಗಳಲ್ಲಿ 60ರ ವಯಸ್ಸಿನ ಗಡಿಯನ್ನು ದಾಟಲು ಸಿದ್ಧರಾಗಿರುವ ಶಿವಣ್ಣ ಮೂವತ್ತರ ಹರೆಯದ ಯುವಕನಂತೆ ಕಾಣಿಸಿಕೊಳ್ಳುತ್ತಾರೆ. ಯುವರತ್ನ ಚಿತ್ರದಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಂಗೂ ನನ್ನ ಅಣ್ಣನಿಗೂ ವಯಸ್ಸು ಆಗುವುದಿಲ್ಲ ಎಂದು ಹೇಳುವ ಡೈಲಾಗನ್ನು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಸದ್ಯಕ್ಕೆ ಈಗಾಗಲೇ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಭಜರಂಗಿ-2 ಚಿತ್ರ ಬಾಕ್ಸಾಫೀಸ್ ನಲ್ಲಿ ಗೆದ್ದು ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಕೂಡ ಮಹತ್ತರವಾದ ಸಾಧನೆ ಮಾಡಿದೆ. ಸದ್ಯಕ್ಕೆ ಶಿವಣ್ಣ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಜೇಮ್ಸ್ ಚಿತ್ರಕ್ಕೆ ದ್ವಿತೀಯಾರ್ಧದಲ್ಲಿ ವಾಯ್ಸ್ ಡಬ್ ಮಾಡಿದ್ದಾರೆ.

ಇನ್ನು ವೇದ ಚಿತ್ರದಲ್ಲಿ ಶಿವಣ್ಣ ಬ್ಯುಸಿಯಾಗಿದ್ದಾರೆ ಇನ್ನು ಹಲವಾರು ಸಿನಿಮಾಗಳು ಶಿವಣ್ಣನ ಕೈಯಲ್ಲಿವೆ. ಬೈರಾಗಿ ಚಿತ್ರ ಬಿಡುಗಡೆಗೆ ಸಿದ್ಧವಾಗಿ ನಿಂತಿದೆ. ನಿಮಗೆ ಗೊತ್ತಿರುವ ಹಾಗೆ ಶಿವಣ್ಣನವರು ಹಲವಾರು ಕಿರುತೆರೆ ಕಾರ್ಯಕ್ರಮಗಳಿಗೆ ಕೂಡ ಅತಿಥಿಯಾಗಿ ಹಾಗೂ ನಿರೂಪಕನಾಗಿ ಕಾಣಿಸಿಕೊಂಡಿದ್ದಾರೆ. ಇತ್ತೀಚಿನ ದಿನವೂ ಕೂಡ ಶಿವಣ್ಣ ಕಿರುತೆರೆಯ ಕಾರ್ಯಕ್ರಮವೊಂದಕ್ಕೆ ಹೋಗಿದ್ದಾರೆ. ಹೌದು ಕಲರ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಅಂತಹ ಡ್ಯಾನ್ಸಿಂಗ್ ಚಾಂಪಿಯನ್ ಕಾರ್ಯಕ್ರಮಕ್ಕೆ ಅತಿಥಿಯಾಗಿ ಶಿವಣ್ಣ ಹೋಗಿದ್ದಾರೆ ಎಂಬುದನ್ನು ಮುಖ್ಯಸ್ಥರಾಗಿರುವ ಪರಮೇಶ್ವರ್ ಗುಂಡ್ಕಲ್ ಅವರು ಖಾತ್ರಿಪಡಿಸಿದ್ದಾರೆ. ಈ ಕಾರ್ಯಕ್ರಮದಲ್ಲಿ ವಿಜಯರಾಘವೇಂದ್ರ ಮೇಘನಾ ರಾಜ್ ರವರು ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದಾರೆ. ಈ ಕಾರ್ಯಕ್ರಮಕ್ಕೆ ಈಗಾಗಲೇ ಹಲವಾರು ಕನ್ನಡದ ಸ್ಟಾರ್ ನಟರು ಬಂದು ಹೋಗಿದ್ದು ಈಗ ಶಿವಣ್ಣನವರ ಸರದಿಯಾಗಿದೆ.