ಅಲ್ಲೂ ಅರ್ಜುನ ಪತ್ನಿ ಸ್ನೇಹ ರವರ ಫೋಟೋಗೆ ಷಾಕಿಂಗ್ ಕಾಮೆಂಟ್ ಮಾಡಿದ ಸಮಂತಾ, ನೆಟ್ಟಿಗರು ಶಾಕ್ ಆಗಿದ್ದು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಅಲ್ಲು ಅರ್ಜುನ್ ಪತ್ನಿ ಸ್ನೇಹಾ ರೆಡ್ಡಿ ಸೋಶಿಯಲ್ ಮೀಡಿಯಾದಲ್ಲಿ ಫ್ಯಾನ್ ಫಾಲೋಯಿಂಗ್ ಬಗ್ಗೆ ವಿಶೇಷವಾಗಿ ಹೇಳಬೇಕಾಗಿಲ್ಲ. ಅವರು ಸಾಮಾಜಿಕ ಜಾಲತಾಣಗಳಲ್ಲಿ ನಿರಂತರವಾಗಿ ಸಕ್ರಿಯವಾಗಿರುತ್ತಾರೆ. ಹಾಗಾಗಿ ಅವರ ಅನುಯಾಯಿಗಳೂ ಕೂಡ ಅಗಾಧ ಪ್ರಮಾಣದಲ್ಲಿ ಹೆಚ್ಚಾಗುತ್ತಿದ್ದಾರೆ. ಸ್ನೇಹಾ ರೆಡ್ಡಿ ಆಗಾಗ್ಗೆ ತನ್ನ ಮಗಳು ಮತ್ತು ಮಗನ ಜೊತೆಗಿನ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ತಾಣಗಳಲ್ಲಿ ಹಂಚಿಕೊಳ್ಳುತ್ತಾರೆ.
ವಿಶೇಷವಾಗಿ ಹೆಚ್ಚಿನ ಸಂಖ್ಯೆಯ ಪಾಲೋವರ್ಸ್ ಗಳನ್ನು ಅವರು ಹೊಂದಿರುವುದು ಇನ್ಸ್ಟಾಗ್ರಾಮ್ ನಲ್ಲಿ. ಸ್ನೇಹಾರೆಡ್ಡಿ ಇತ್ತೀಚೆಗೆ ಹಂಚಿಕೊಂಡಿರುವ ಮಲ್ಹೋತ್ರಾ ವಿನ್ಯಾಸಗೊಳಿಸಿದ ಕಪ್ಪು ಸೀರೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತಿದ್ದರು. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಅವರ ಪತ್ನಿ ಸ್ನೇಹಾ ರೆಡ್ಡಿ ಕೂಡ ತುಂಬಾ ಸ್ಟೈಲಿಶ್ ಆಗಿದ್ದಾರೆ. ಕಾಲಕಾಲಕ್ಕೆ ಇತ್ತೀಚಿನ ಟ್ರೆಂಡಿ ಫ್ಯಾಷನ್ ಬಟ್ಟೆಗಳನ್ನು ಅನುಸರಿಸುವುದು, ಆ ಪ್ಯಾಶನ್ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡುವುದು ಕಾಮನ್.

ಸ್ನೇಹಾರೆಡ್ಡಿ ಇತ್ತೀಚೆಗೆ ಪಾರದರ್ಶಕ ಕಪ್ಪು ಸೀರೆಯಲ್ಲಿ ತೆಗೆದ ಫೋಟೋಗಳನ್ನು ತಮ್ಮ ಇನ್ಸ್ಟಾದಲ್ಲಿ ಹಂಚಿಕೊಂಡಿದ್ದಾರೆ. ಸಮಂತಾ ಅವರ ಸ್ಟೈಲಿಸ್ಟ್ ಪ್ರೀತಮ್ ಜುಕಲ್ಕರ್ ಸ್ನೇಹಾಗೆ ಸ್ಟೈಲಿಂಗ್ ಮಾಡಿದ್ದಾರೆ. ಇನ್ನು ಸ್ನೇಹಾ ರೆಡ್ಡಿಯ ಈ ಫೋಟೊಗಳನ್ನು ನೋಡಿ ಸ್ವತಃ ಸಮಂತಾ ಕೂಡ ಹಾಟ್ ಎಂದು ಕಮೆಂಟ್ ಮಾಡಿದ್ದಾರೆ. ಸದ್ಯ ಈ ಕಮೆಂಟ್ ನ ಸ್ಕೀನ್ ಶಾಟ್ ಎಲ್ಲಾಕಡೆ ಹರಿದಾಡುತ್ತಿದೆ. ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಿತ್ರದಲ್ಲಿ ಸಮಂತಾ ವಿಶೇಷ ಹಾಡಿನಲ್ಲಿ ಕಾಣಿಸಿಕೊಂಡಿದ್ದು ಗೊತ್ತೇ ಇದೆ. ಪುಷ್ಪಾ ಸಿನಿಮಾದ ಮೊದಲ ದಿನವೇ ಸ್ನೇಹಾ ರೆಡ್ಡಿ ಪತಿಯೊಂದಿಗೆ ಆರ್ ಟಿಸಿ ಕ್ರಾಸ್ ರೋಡ್ ಥಿಯೇಟರ್ ಗೆ ಹೋಗಿ ಸಿನಿಮಾ ವೀಕ್ಷಿಸಿದ್ದು ಕೂಡ ಸುದ್ದಿಯಾಗಿತ್ತು.