ಅಪ್ಪನ ಜೊತೆ ಆಡುತ್ತಿರುವ ಮಗಳು ವಿಡಿಯೋ ಹಂಚಿಕೊಂಡ ಅಮೃತಾ ರಾಮಮೂರ್ತಿ, ಹೇಗಿದೆ ಗೊತ್ತೇ ಮುದ್ದಾದ ವಿಡಿಯೋ??

591

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಸ್ಯಾಂಡಲ್ ವುಡ್ ನಲ್ಲಿ ಸಾಕಷ್ಟು ಕಲಾವಿದರು ವಿವಾಹವಾಗಿದ್ದಾರೆ. ಅದರಲ್ಲೂ ಕಿರುತೆರೆಯಲ್ಲಿ ನಟ ನಟಿಯರೇ ಪ್ರೀತಿಸಿ ಮದುವೆಯಾಗುತ್ತಿರುವುದು ವಿಶೇಷ. ಲಾಕ್ ಡೌನ್ ಸಮಯದಲ್ಲಿ ಸದ್ದಿಲ್ಲದೇ ಹಲವು ವಿವಾಹಗಳು ಆಗಿಹೋಗಿವೆ. ಅವುಗಳಲ್ಲಿ ಕೆಲವರು ಸದ್ಯ ಅಪ್ಪ ಅಮ್ಮ ಆಗಿ ಭಡ್ತಿಯನ್ನೂ ಪಡೆದಿದ್ದಾರೆ. ಅಂಥವರಲ್ಲಿ ನಟ ರಾಘು ಹಾಗೂ ನಟಿ ಅಮೃತ ಜೋಡಿ ಕೂಡ ಒಂದು.

ಹೌದು ಕಲರ್ಸ್ ಕನ್ನಡದಲ್ಲಿ ಪ್ರಸಾರವಗುವ ನಮ್ಮನೆಯುವರಾಣಿ ಧಾರಾವಾಹಿಯಲ್ಲಿ ನಟಿಸುತ್ತಿರುವ ರಾಘು ಹಾಗೂ ಕುಲವಧು ಧಾರಾವಾಹಿಯಲ್ಲಿ ನಟಿಸುತ್ತಿದ್ದ ನಟಿ ಅಮೃತಾ ಇತ್ತೀಚಿಗೆ ಪುಟ್ಟ ರಾಜಕುಮಾರಿ ಹುಟ್ಟಿದ ಸಂಭ್ರಮದಲ್ಲಿದ್ದಾರೆ. ನಟ ರಾಘು ತನ್ನ ಬಿಡುವಿನ ಸಮಯದಲ್ಲೆಲ್ಲಾ ತನ್ನ ಮಗಳ ಜೊತೆ ಸಮಯ ಕಳೆಯುತ್ತಾರೆ. ಈಗಾಗಲೇ ಅಪ್ಪ ಮಗಳು ಒಟ್ಟಿಗಿರುವ ಫೋಟೋ ಹಾಗೂ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಕಾಣಬಹುದು.

ಇದೀಗ ಅಪ್ಪ ಮಗಳ ಕ್ಯೂಟ್ ಆದ ವಿಡಿಯೋ ಒಂದನ್ನು ನಟಿ ಅಮೃತಾ ತಮ್ಮ ಇನ್ಸ್ಟಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ರಾಜಕುಮಾರಿಯ ಪುಟ್ಟ ಕೈಗಳು ಅಪ್ಪನ ಗಡ್ದವನ್ನು ಎಳೆಯುತ್ತಿರುವ ವಿಡಿಯೋ ನಿಜಕ್ಕೂ ತುಂಬಾನೇ ಮುದ್ದಾಗಿದೆ. ಮಗಳ ತುಂಟಾಟವನ್ನು ರಾಘು ಈಗಾಗಲೇ ಎಂಜಾಯ್ ಮಾಡಲು ಪ್ರಾರಂಭಿಸಿದ್ದಾರೆ. ಅಕ್ಟೋಬರ್ 21 ರಂದು ರಘು ಮತ್ತು ಅಮೃತಾ ತಮ್ಮ ಮೊದಲ ಹೆಣ್ಣು ಮಗುವನ್ನು ಪಡೆದಿದ್ದಾರೆ. ಹಾಗಾಗಿ ಮನೆಯಲ್ಲಿ ಸಂಭ್ರಮ ಇಮ್ಮಡಿಯಾಗಿದ್ದು ಇತ್ತೀಚಿಗಷ್ಟೇ ನಾಮಕರಣವನ್ನೂ ಮಾಡಿದ್ದಾರೆ. ಈ ಕಲಾವಿದರಿಬ್ಬರೂ ಪುನೀತ್ ರಾಜ ಕುಮಾರ್ ಅವರ ಅಭಿಮಾನಿಗಳಾಗಿದ್ದು, ಪುನೀತ್ ಅವರ ಹಿರಿಯ ಮಗಳು ಧೃತಿಯ ಹೆಸರನ್ನೇ ತಮ್ಮ ಮಗುವಿಗೂ ಇಟ್ಟಿದ್ದಾರೆ. ಕೆಲವೇ ಜನರ ಉಪಸ್ಥಿತಿಯ ಈ ಸಂದರ್ಭದ ಫೊಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಕಾಣಬಹುದು. ಹಾಗೆಯೇ ಅಪ್ಪ ಮಗಳ ವಿಡಿಯೋವನ್ನೂ ಕೂಡ ಸಾಕಷ್ಟು ಅಭಿಮಾನಿಗಳು ನೆಚ್ಚಿ ಖುಷಿಪಟ್ಟಿದ್ದಾರೆ.