ಎಲ್ಲವೂ ಚೆನ್ನಾಗಿತ್ತು, ಪ್ರಿಯಕರನ ಜೊತೆ ಹೋಟೆಲ್ ರೂಮ್ ಗೆ ತೆರಳಿದ, ನಂತರ ಒಂದು ವಾಟ್ಸಪ್ ಸ್ಟೇಟಸ್ ನಿಂದ ಆಕೆಯ ಪರಿಸ್ಥಿತಿ ಏನಾಗಿದೆ ಗೊತ್ತೇ??

167

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ನಾವು ಹಲವಾರು ಚಿತ್ರವಿಚಿತ್ರವಾದಂತಹ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿರುತ್ತೇವೆ. ಇಂದಿನ ವಿಚಾರದಲ್ಲಿ ಕೂಡ ಅದೇ ರೀತಿಯ ಒಂದು ಸುದ್ದಿಯನ್ನು ಹೇಳಲು ಹೊರಟಿದ್ದೇವೆ. ಹೌದು ಗಾಯತ್ರಿ ಎನ್ನುವ ಕೇರಳದ ತಿರುವನಂತಪುರಂ ಮೂಲದ ಹುಡುಗಿಯೊಬ್ಬಳು ನಿರ್ಜೀವ ಸ್ಥಿತಿಯಲ್ಲಿ ರೂಮೊಂದರಲ್ಲಿ ಸಿಕ್ಕಿದ್ದಾಳೆ. ಹೌದು ಗೆಳೆಯರೆ ಈಕೆಯ ಮರಣದ ಹಿನ್ನೆಲೆಯಲ್ಲಿ ಈಕೆಯ ಬಾಯ್ಫ್ರೆಂಡ್ ಪ್ರವೀಣ್ ಎನ್ನುವವನನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಪೊಲೀಸರಿಗೆ ಶರಣಾದ ನಂತರ ಪ್ರವೀಣ ಅಂದು ರಾತ್ರಿ ಏನು ನಡೆಯಿತು ಎನ್ನುವುದನ್ನು ಸವಿವರವಾಗಿ ಹೇಳಿದ್ದಾನೆ.

ಅಂದು ರಾತ್ರಿ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಇದ್ದ ಕಾರಣದಿಂದಾಗಿ ಹೋಟೆಲ್ ರೂಮ್ ನಲ್ಲಿ ಬಗೆಹರಿಸಿಕೊಳ್ಳುವ ವಿಚಾರಕ್ಕಾಗಿ ಬರಲು ಹೇಳಿದನಂತೆ. ಆದರೆ ಭಿನ್ನಾಭಿಪ್ರಾಯ ಎನ್ನುವುದು ಹೋಟೆಲ್ ರೂಂಗೆ ಬಂದ ನಂತರ ಇಬ್ಬರ ನಡುವೆ ತಾರಕಕ್ಕೇರಿ ಅಲ್ಲಿ ಆಕೆ ಮರಣಹೊಂದಿದ್ದಾಳೆ ಎನ್ನುವುದಾಗಿ ಹೇಳಿದ್ದನಂತೆ. ಆದರೆ ಇಲ್ಲಿ ಮತ್ತೊಂದು ವಿಚಾರ ಕೂಡ ಈಗ ಬಯಲಿಗೆ ಬಂದಿದೆ. ಅದೇನೆಂದರೆ ಇಬ್ಬರೂ ಕೂಡ ಪ್ರೀತಿಸುತ್ತಿರುವ ವಿಚಾರ ಗಾಯತ್ರಿಯ ಮನೆಯವರಿಗೆ ತಿಳಿದಿದೆ. ಗಾಯತ್ರಿ ಪ್ರವೀಣ್ ಕರೆದ ತಕ್ಷಣವೇ ರೂಮಿಗೆ ಹೋಗಿದ್ದಳು. ರೂಮಿಗೆ ಹೋದ ನಂತರ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯದ ಚರ್ಚೆಗಳು ಹೆಚ್ಚಾಗಿದ್ದವು.

ಯಾಕೆಂದರೆ ಪ್ರವೀಣ್ ಈ ಸಂಬಂಧವನ್ನು ಕಡಿದುಕೊಳ್ಳಲು ಪ್ರಯತ್ನಿಸಿದ್ದ. ಈಗಾಗಲೇ ಆತನಿಗೆ ಮದುವೆ ಆಗಿರುವುದೇ ಇದಕ್ಕೆ ಕಾರಣ ಎನ್ನುವುದಾಗಿ ತಿಳಿದುಬಂದಿದೆ. ಆದರೆ ಗಾಯತ್ರಿ ಮಾತ್ರ ಆತನನ್ನು ಬಿಟ್ಟುಕೊಡಲು ಸಿದ್ದರಿರಲಿಲ್ಲ. ಇಷ್ಟು ಮಾತ್ರವಲ್ಲದೆ ಆಕೆ ಅವರಿಬ್ಬರ ಮದುವೆ ಫೋಟೋವನ್ನು ವಾಟ್ಸಪ್ ಸ್ಟೇಟಸ್ ನಲ್ಲಿ ಕೂಡ ಹಾಕಿದ್ದಳು. ಇದರಿಂದ ಕುಪಿತನಾದ ಪ್ರವೀಣ್ ಆಕೆಯನ್ನು ಮುಗಿಸಿದ್ದ. ನಂತರ ಆಕೆಯ ಫೋನ್ ನಿಂದ ಸ್ಟೇಟಸ್ ಅನ್ನು ಫೇಸ್ಬುಕ್ ಶೇರ್ ಮಾಡಿಕೊಂಡು ಲವ್ ಯು ಎಂಬುದಾಗಿ ಬರೆದಿದ್ದ. ನಂತರ ಏನು ಮಾಡುವುದೆಂದು ತಿಳಿಯದೆ ವಕೀಲರ ಬಳಿ ಹೋಗಿ ಶರಣಾಗಿದ್ದ. ನಂತರ ವಕೀಲರು ಪೊಲೀಸರ ಬಳಿ ಶರಣಾಗುವಂತೆ ಹೇಳಿದ್ದಾರೆ. ಅಲ್ಲಿ ಹೋಗಿ ಕಥೆ ತಿರುಚಲು ಪ್ರಯತ್ನಿಸಿದ್ದರು ಆದರೆ ತನಿಖೆ ನಂತರ ಎಲ್ಲ ಸತ್ಯಗಳು ಕೂಡ ಹೊರಬಂದಿವೆ. ಈಗಾಗಲೇ ಪ್ರವೀಣ್ ನ್ಯಾಯಾಂಗ ಶಿಕ್ಷೆಗೆ ಒಳಗಾಗಿದ್ದಾನೆ. ಈ ಪ್ರಕರಣದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ