2 ವರ್ಷಗಳ ನಂತರ ಮೊದಲ ಫೋಟೋಶೂಟ್ ಮಾಡಿಸಿದ ಕರುನಾಡ ಅತ್ತಿಗೆ ಮೇಘನಾ, ಅಭಿಮಾನಿಗಳಂತೂ ಫುಲ್ ಕುಶ್. ಹೇಗಿದೆ ಗೊತ್ತೇ ಫೋಟೋಸ್??

5,719

ನಮಸ್ಕಾರ ಸ್ನೇಹಿತರೇ ನಟಿ ಮೇಘನಾ ರಾಜ್ ರವರು ಕನ್ನಡದವರೇ ಆಗಿದ್ದರು ಕೂಡ ಅವರು ನಟಿಯಾಗಿ ಪಾದಾರ್ಪಣೆ ಮಾಡಿದ್ದು ಮಲಯಾಳಂ ಚಿತ್ರರಂಗದ ಮೂಲಕ. ಇನ್ನು ಚಿತ್ರರಂಗ ಎನ್ನುವುದು ಅವರಿಗೆ ಹೊಸದಾಗಿರಲಿಲ್ಲ ಯಾಕೆಂದರೆ ಅವರ ತಂದೆ ಸುಂದರರಾಜ್ ಹಾಗೂ ತಾಯಿ ಪ್ರಮೀಳಾ ಜೋಷಾಯ್ ಇಬ್ಬರೂ ಕೂಡ ಕನ್ನಡ ಚಿತ್ರರಂಗದಲ್ಲಿ ಹಲವಾರು ವರ್ಷಗಳಿಂದ ಪೋಷಕ ನಟರಾಗಿ ಕಾಣಿಸಿಕೊಂಡು ಬಂದವರು. ಹೀಗಾಗಿ ಚಿತ್ರರಂಗ ಏನು ಎನ್ನುವುದನ್ನು ಅವರು ಚಿಕ್ಕವಯಸ್ಸಿನಿಂದಲೇ ನೋಡಿಕೊಂಡು ಬಂದವರು.

ಚಿತ್ರರಂಗದಲ್ಲಿ ಸಕ್ರಿಯರಾಗಿರುವಾಗಲೇ ಚಿರು ಸರ್ಜಾ ರವರನ್ನು ಪ್ರೀತಿಸಿ ಮದುವೆಯಾಗುತ್ತಾರೆ. ಎಲ್ಲ ಸರಿಯಾಗಿದೆ ಎನ್ನುವಷ್ಟರಲ್ಲಿ ಚಿರು ಸರ್ಜಾ ರವರು ಅಕಾಲಿಕವಾಗಿ ನಮ್ಮನ್ನು ಆಗಲಿದ್ದಾರೆ ಎನ್ನುವುದು ನಿಮಗೆ ತಿಳಿದಿದೆ. ಒಂಟಿಯಾಗಿ ತನ್ನ ಮಗನನ್ನು ನೋಡಿಕೊಳ್ಳುವ ಜವಾಬ್ದಾರಿ ಮೇಘನರಾಜ್ ರವರ ಮೇಲೆ ಬೀಳುತ್ತದೆ. ಒಂಟಿಯಾಗಿದ್ದರೂ ಕೂಡ ಹಿಂಜರಿಯದೆ ತನ್ನ ಮಗನಿಗಾಗಿ ಮತ್ತೆ ಬಣ್ಣದ ಲೋಕಕ್ಕೆ ಕಾಲಿಡುತ್ತಾರೆ ಮೇಘನಾರಾಜ್. ಎರಡು ಸಿನಿಮಾಗಳನ್ನು ಕೂಡ ಈಗಾಗಲೇ ಒಪ್ಪಿಕೊಂಡಿದ್ದಾರೆ.

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಾರಂಭವಾಗಿರುವ ಡ್ಯಾನ್ಸಿಂಗ್ ಚಾಂಪಿಯನ್ಸ್ ಎನ್ನುವ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಕೂಡ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಡ್ಯಾನ್ಸಿಂಗ್ ಚಾಂಪಿಯನ್ಸ್ ಕಾರ್ಯಕ್ರಮದಲ್ಲಿ ಪ್ರತಿವಾರ ಕೂಡ ವಿಶೇಷ ವಿಭಿನ್ನವಾದ ಬಟ್ಟೆಯಲ್ಲಿ ಮೇಘನರಾಜ್ ಅವರು ಕಾಣಿಸಿಕೊಳ್ಳುತ್ತಾರೆ ಎನ್ನುವುದು ನಮಗೆಲ್ಲಾ ಗೊತ್ತಿದೆ. ಈ ವಾರದ ಸಂಚಿಕೆಯಲ್ಲಿ ರೆಟ್ರೋ ವಿಭಾಗವಿದೆ ಇದೇ ಕಾರಣಕ್ಕಾಗಿ ಮೇಘನಾ ರಾಜ್ ರವರು ವಿಂಟೇಜ್ ಬಟ್ಟೆಯನ್ನು ಧರಿಸಿ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಹೌದು ಕಪ್ಪು ಶರ್ಟ್ ಹಾಗೂ ಕೆಂಪು ಸ್ಕರ್ಟ್ ನಲ್ಲಿ ಮಾಡರ್ನ್ ಶೈಲಿಯಲ್ಲಿ ಮೇಘನಾರಾಜ್ ಫೋಟೋಶೂಟ್ ಮಾಡಿಸಿಕೊಂಡು ಫೋಟೋವನ್ನು ಅಪ್ಲೋಡ್ ಮಾಡಿದ್ದಾರೆ. ಇದು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸಂಚಲನ ಮೂಡಿಸಿದ್ದು ನೀವು ಕೂಡ ಈ ಫೋಟೋಗಳನ್ನು ನೋಡಬಹುದಾಗಿದೆ.