ಐಪಿಎಲ್ ಆರಂಭಕ್ಕೂ ಮುನ್ನವೇ ತಂಡಗಳಿಗೆ ಶಾಕ್ ನೀಡಿದ ಬಿಸಿಸಿಐ, ಮತ್ತಷ್ಟು ಕಳೆಗುಂದಲಿದೆಯೇ ಈ ಬಾರಿಯ ಐಪಿಎಲ್. ಟೂರ್ನಿ ಮುಗಿಸುವ ಪ್ಲಾನ್ ಎಂದ ನೆಟ್ಟಿಗರು.

256

ನಮಸ್ಕಾರ ಸ್ನೇಹಿತರೇ ಅಂತು-ಇಂತು ಮೆಗಾ ಹರಾಜು ಮುಗಿದಿದ್ದು ಈ ಬಾರಿಯ ಟಾಟಾ ಐಪಿಎಲ್ 2022 ಇದೇ ಮಾರ್ಚ್ 26 ರಿಂದ ಪ್ರಾರಂಭವಾಗಲಿದೆ. ಕ್ರಿಕೆಟ್ ಅಭಿಮಾನಿಗಳು ಈ ಬಾರಿಯ ಐಪಿಎಲ್ ಕ್ರಿಕೆಟ್ ಹಬ್ಬವನ್ನು ವೀಕ್ಷಿಸಲು ಕಾತರರಾಗಿ ಕುಳಿತಿದ್ದಾರೆ. ಈಗಾಗಲೇ ತಿಳಿದಿರುವಂತೆ ಈ ಬಾರಿಯ ಐಪಿಎಲ್ ಪಂದ್ಯಾವಳಿಗಳು ಕೇವಲ ಮುಂಬೈ ನಾಲ್ಕು ಕ್ರೀಡಾಂಗಣಗಳಲ್ಲಿ ನಡೆಯಲಿವೆ ಎಂಬುದಾಗಿ ಈಗಾಗಲೇ ಬಿಸಿಸಿಐ ಸೂಚಿಸಿದೆ.

ಇನ್ನು ಈ ಬಾರಿಯ ಇಂಡಿಯಾ ಹಾಗೂ ಶ್ರೀಲಂಕಾ ನಡುವಣ ಸರಣಿಯ ಪಂದ್ಯಗಳಿಂದ ಹೊರಗುಳಿದಿರುವ ಆಟಗಾರರ ಐಪಿಎಲ್ ತಂಡಗಳು ಅವರನ್ನು ತರಬೇತಿ ಶಿಬಿರಗಳಿಗೆ ಆಹ್ವಾನ ಮಾಡಲು ಎದುರು ನೋಡುತ್ತಿದ್ದರು. ಆದರೆ ಫ್ರಾಂಚೈಸಿಗಳ ಈ ಆಸೆಗೆ ಬಿಸಿಸಿಐ ತಣ್ಣೀರನ್ನು ಎನಿಸಿದೆ ಎಂಬುದಾಗಿ ಕೇಳಿಬರುತ್ತಿದೆ. ಅಷ್ಟಕ್ಕೂ ಫ್ರಾಂಚೈಸಿಗಳು ಈ ಕುರಿತಂತೆ ಬೇಸರ ವಾಗಲು ಕಾರಣ ಏನು ಬಿಸಿಸಿಐ ಮಾಡಿರುವುದಾದರೂ ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಬಿಸಿಸಿಐ ಈಗಾಗಲೇ ಭಾರತ ಹಾಗೂ ಶ್ರೀಲಂಕಾ ಸರಣಿಯಿಂದ ಹೊರಗುಳಿದಿರುವ ಭಾರತೀಯ ಆಟಗಾರರನ್ನು ನೇರವಾಗಿ ಫ್ರಾಂಚೈಸಿಗಳು ನಡೆಸುತ್ತಿರುವ ತರಬೇತಿ ಶಿಬಿರಕ್ಕೆ ಹೋಗುವುದಕ್ಕೆ ಒಪ್ಪಿಗೆಯನ್ನು ನೀಡಿಲ್ಲ.

ಬೆಂಗಳೂರಿನಲ್ಲಿ ಎನ್ ಸಿಎ ಕ್ಯಾಂಪಿನಲ್ಲಿ ವಿವಿಎಸ್ ಲಕ್ಷ್ಮಣ್ ರವರ ನೇತೃತ್ವದಲ್ಲಿ ನಡೆಸುತ್ತಿರುವ ಆಟಗಾರರ ಫಿಟ್ನೆಸ್ ಹಾಗೂ ಯೋಯೋ ಟೆಸ್ಟ್ನಲ್ಲಿ ಪಾಸಾದವರು ಮಾತ್ರ ತಂಡಗಳ ತರಬೇತಿ ಶಿಬಿರಕ್ಕೆ ಹೋಗುವಂತಹ ಅನುಮತಿಯನ್ನು ಪಡೆದಿರುತ್ತದೆ ಎಂಬುದಾಗಿ ಬಿಸಿಸಿಐ ಸ್ಪಷ್ಟೀಕರಿಸಿದೆ. ಹೀಗಾಗಿ ಎಲ್ಲಾ ಆಟಗಾರರು ಈ ಟೆಸ್ಟ್ನಲ್ಲಿ ಪಾಸಾಗಲೇ ಬೇಕಾಗಿದೆ. ಆಗ ಮಾತ್ರವೇ ಐಪಿಎಲ್ನಲ್ಲಿ ಆಟವಾಡಲು ಸಾಧ್ಯವಾಗಿದೆ. ಕೆ ಎಲ್ ರಾಹುಲ್ ಶಾರ್ದುಲ್ ಠಾಕೂರ್ ಸೂರ್ಯಕುಮಾರ್ ಯಾದವ್ ವೆಂಕಟೇಶಯ್ಯ ಭುವನೇಶ್ವರ್ ಕುಮಾರ್ ಹೀಗೆ ಹಲವಾರು ಆಟಗಾರರು ಈಗಾಗಲೇ ಕ್ಯಾಂಪ್ ನಲ್ಲಿದ್ದಾರೆ. ಅತಿಶೀಘ್ರದಲ್ಲೇ ಹಾರ್ದಿಕ್ ಪಾಂಡ್ಯ ಕೂಡ ಎನ್ ಸಿಎ ಕ್ಯಾಂಪನ್ನು ಸೇರಲ್ಲಿದ್ದಾರೆ. ಬಿಸಿಸಿಐ ವಿಧಿಸಿರುವ ಈ ಹೊಸ ನಿಯಮದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.