ಆಲಿಯಾ ಭಟ್ ಮದುವೆಯಾಗುತ್ತಿರುವ ರಣಬೀರ್ ಬಗ್ಗೆ ಷಾಕಿಂಗ್ ಹೇಳಿಕೆ ನೀಡಿದ ಪೂಜಾ ಹೆಗ್ಡೆ, ಎಲ್ಲರಿಗೂ ಯಾಕೆ ಅವರೇ ಬೇಕು ಗೊತ್ತೇ??

94

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ರಾಜ್ಯದ ಕರಾವಳಿ ಪ್ರದೇಶದಿಂದ ಪರಭಾಷೆಗಳಲ್ಲಿ ಹಲವಾರು ನಟ ಹಾಗೂ ನಟಿಯರ ನಟಿಸುತ್ತಿದ್ದಾರೆ. ಅವರಲ್ಲಿ ಪೂಜಾ ಹೆಗ್ಡೆ ಕೂಡ ಒಬ್ಬರು. ಹಿಂದಿ ಚಿತ್ರರಂಗದಿಂದ ತಮ್ಮ ನಟನೆಯನ್ನು ಪ್ರಾರಂಭಿಸಿ ಈಗಾಗಲೇ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಬಹು ಬೇಡಿಕೆಯ ಟಾಪ್ ನಟಿಯಾಗಿ ಕಾಣಿಸಿಕೊಂಡಿದ್ದಾರೆ. ಯಾರ ಬೆಂಬಲವೂ ಇಲ್ಲದೆ ತಮ್ಮ ಸ್ವಂತ ಪ್ರತಿಭೆ ಹಾಗೂ ಪರಿಶ್ರಮದ ಮೂಲಕ ಪೂಜಾ ಹೆಗ್ಡೆಯವರು ಸಾಧಿಸಿರುವ ಸಾಧನೆ ನಿಜಕ್ಕೂ ಕೂಡ ಎಲ್ಲರೂ ಮೆಚ್ಚುವಂತದ್ದು.

ಹಿಂದಿ ತಮಿಳು ತೆಲುಗು ಯಾವುದೇ ಭಾಷೆಯನ್ನು ತೆಗೆದುಕೊಂಡರೂ ಕೂಡ ಪೂಜಾ ಹೆಗ್ಡೆ ರವರಿಗೆ ಬೇಡಿಕೆಯನ್ನು ವುದು ಕಡಿಮೆಯಾಗಿಲ್ಲ, ಆಗುವುದಿಲ್ಲ ಎನ್ನುವಂತಿದೆ. ಸದ್ಯಕ್ಕೆ ತೆಲುಗು ಚಿತ್ರರಂಗದ ರೆಬಲ್ ಸ್ಟಾರ್ ಡಾರ್ಲಿಂಗ್ ಪ್ರಭಾಸ್ ರವರ ಬಹುನಿರೀಕ್ಷಿತ ಪಂಚಭಾಷಾ ಚಿತ್ರವಾಗಿರುವ ರಾಧೇಶ್ಯಾಮ್ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದು ಚಿತ್ರ ಇದೇ ತಿಂಗಳಲ್ಲಿ ಬಿಡುಗಡೆಯಾಗುವುದಕ್ಕೆ ಸಜ್ಜಾಗಿ ನಿಂತಿದೆ. ಇನ್ನು ಈ ಚಿತ್ರದ ಬಿಡುಗಡೆ ಹಿನ್ನೆಲೆಯಲ್ಲಿ ಹಲವಾರು ಮಾಧ್ಯಮಗಳಿಗೆ ಸಂದರ್ಶನವನ್ನು ಕೂಡ ನೀಡುತ್ತಿದ್ದಾರೆ.

ಇದೇ ಸಂದರ್ಭದಲ್ಲಿ ಆಲಿಯಾ ಭಟ್ ರವರ ಬಾಯ್ಫ್ರೆಂಡ್ ಆಗಿರುವ ರಣಬೀರ್ ಕಪೂರ್ ಅವರ ಕುರಿತಂತೆ ಮಾತನಾಡಿ ಸುದ್ದಿಯಾಗುತ್ತಿದ್ದಾರೆ. ಅಷ್ಟಕ್ಕೂ ಪೂಜಾ ಮಾತನಾಡಿರುವುದು ಏನು ಎಂಬುದನ್ನು ತಿಳಿಯೋಣ ಬನ್ನಿ. ಹೌದು ಪೂಜ ಹೆಗ್ಡೆಯವರು ಮಾತನಾಡಿರುವುದು ಇನ್ನೇನಲ್ಲ ಹಿಂದಿ ಚಿತ್ರರಂಗದಲ್ಲಿ ಯಾರ ಜೊತೆಗೆ ನಟಿಸಲು ಬಯಸುತ್ತೀರಾ ಎನ್ನುವ ಪ್ರಶ್ನೆಗೆ ರಣಬೀರ್ ಕಪೂರ್ ಅವರ ಜೊತೆಗೆ ಎನ್ನುವುದಾಗಿ ಉತ್ತರ ನೀಡಿದ್ದಾರೆ, ಇದನ್ನು ಕಂಡ ನೆಟ್ಟಿಗರು ಪ್ರತಿ ನಟಿಗೂ ಅವರ ಜೊತೆ ಸಿನಿಮಾ ಮಾಡ್ಬೇಕು ಎನಿಸುತ್ತದೆ, ಆಮೇಲೆ ಪ್ರೀತಿಯಾಗುತ್ತದೆ ಯಾಕೆ ಎಂದಿದ್ದಾರೆ ಹಾಗೂ ಆತನ ಸೌಂದರ್ಯವೇ ಇದಕ್ಕೆ ಕಾರಣವೇ ಎಂದಿದ್ದಾರೆ. ಇನ್ನು ತಮಿಳಿನಲ್ಲಿ ಯಾರ ಜೊತೆಗೆ ನಟಿಸುತ್ತೀರಿ ಎಂದು ಕೇಳಿದಾಗ ಧನುಶ್ ರವರ ಜೊತೆಗೆ ನಟಿಸಲು ಇಷ್ಟಪಡುತ್ತೇನೆ ಎಂಬುದಾಗಿ ಉತ್ತರಿಸಿದ್ದಾರೆ. ಈಗಾಗಲೇ ಹಲವಾರು ಸಿನಿಮಾಗಳಲ್ಲಿ ಪೂಜಾ ನಟಿಸುತ್ತಿದ್ದು ಇನ್ನೂ ಹಲವಾರು ಸಿನಿಮಾಗಳು ಅವರ ಕೈಯಲ್ಲಿದೆ. ರಾಧೇಶ್ಯಾಮ್ ಚಿತ್ರ ಸದ್ಯದಲ್ಲಿ ಬಿಡುಗಡೆಯಾಗಲಿದ್ದು ಎಲ್ಲರ ನಿರೀಕ್ಷೆ ಇದೆ ಚಿತ್ರದತ್ತ ನೆಟ್ಟಿದೆ.