ಮದುವೆಗೂ ಮುನ್ನವೇ ಮಗು ಮಾಡಿಕೊಂಡು ಮದುವೆಯಾಗಿದ್ದ ಅಮಿ ಜಾಕ್ಸನ್ ಬ್ರೇಕ್ ಅಪ್, ಈಗ ಮಗುವಿನ ಜವಾಬ್ದಾರಿ ಯಾರಿಗಂತೆ ಗೊತ್ತೇ?? ಹೊಸ ನಟನ ಜೊತೆ ಪ್ರೀತಿ ಆರಂಭ.

20,472

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ನಟಿ ಅಮಿ ಜಾಕ್ಸನ್ ಬಗ್ಗೆ ಗೊತ್ತೇ ಇದೆ. ಆಮಿ ಜಾಕ್ಸನ್ ರವರು ಮೂಲತಹ ಬ್ರಿಟಿಷ್ ನವರು ಆಗಿದ್ದರೂ ಕೂಡ ಭಾರತೀಯ ಚಿತ್ರರಂಗದಲ್ಲಿ ನಟಿಸುವ ಮೂಲಕ ಅವರ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಆಮಿ ಜಾಕ್ಸನ್ ರವರು ತಮಿಳು-ಕನ್ನಡ ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಪ್ರೇಮ್ ನಿರ್ದೇಶನದ ದಿ ವಿಲನ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದರು.

ತಲಪತಿ ವಿಜಯ್ ರವರ ಥೆರಿ ಚಿಯಾನ್ ವಿಕ್ರಂ ರವರ ಐ ಅಕ್ಷಯ್ ಕುಮಾರ್ ಹಾಗೂ ಸೂಪರ್ ಸ್ಟಾರ್ ರಜನಿಕಾಂತ್ ಅವರ ರೋಬೋ 2‌.0 ಸಿನಿಮಾ ಗಳಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇನ್ನು ಆಮಿ ಜಾಕ್ಸನ್ ಅವರು ಮದುವೆಗೂ ಮುನ್ನ ಮಗುವಿಗೆ ತಾಯಿಯಾಗಿ ಕೂಡ ಸುದ್ದಿಯಾಗಿದ್ದರು ಎನ್ನುವುದು ನಿಮಗೆ ತಿಳಿದಿದೆ. ಹೌದು ಬ್ರಿಟನ್ ನ ಉದ್ಯಮಿಯಾಗಿರುವ ಜಾರ್ಜ್ ಪನಯೋಟು ರವರನ್ನು ಆಮಿ ಜಾಕ್ಸನ್ ಡೇಟ್ ಮಾಡುತ್ತಿದ್ದರು. ಮಗುವಿನ ಜನನದ ನಂತರ ಇಬ್ಬರು ಎಂಗೇಜ್ಮೆಂಟ್ ಕೂಡ ಮಾಡಿಕೊಂಡಿದ್ದರು. ಅಮಿ ಜಾಕ್ಸನ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಮ್ಮ ಮಗು ಹಾಗೂ ಜಾರ್ಜ್ ಫೋಟೋಸ್ ಕೂಡ ಶೇರ್ ಮಾಡಿಕೊಂಡಿದ್ದಾರೆ. ಆದರೆ ಕಳೆದ ವರ್ಷ ಇಬ್ಬರೂ ಕೂಡ ಬೇರೆಯಾಗಿದ್ದಾರೆ ಎನ್ನುವ ಸುದ್ದಿಗಳು ಕೇಳಿ ಬಂದಿವೆ.

ಯಾಕೆಂದರೆ ಜಾರ್ಜ್ ಫೋಟೋಸ್ ಎಲ್ಲವನ್ನೂ ಕೂಡ ಆಮಿ ಜಾಕ್ಸನ್ ರವರು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಹಾಗೂ ಬ್ರಿಟಿಷ್ ನಟನಾಗಿರುವ ಎಡ್ ವೆಸ್ಟ್ ವಿಕ್ ರವರೊಂದಿಗೆ ಈಗ ಸದ್ಯಕ್ಕೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಹಾಗಿದ್ದರೆ ಇಬ್ಬರೂ ಬೇರೆಯಾಗಿರುವುದರಿಂದ ಮಗುವಿನ ಜವಾಬ್ದಾರಿ ಹೊಣೆ ಯಾರು ಎಂಬುದಾಗಿ ಕುತೂಹಲ ಮೂಡಿದೆ. ಇದಕ್ಕೆ ಉತ್ತರ ಸಿಕ್ಕಿದ್ದು ಮಗು ಈಗ ತಾಯಿಯಾಗಿರುವ ಆಮಿ ಜಾಕ್ಸನ್ ಅವರ ಬಳಿಯೇ ಇದೆ. ಅಮಿ ಜಾಕ್ಸನ್ ರವರು ಸದ್ಯಕ್ಕೆ ಬ್ರಿಟಿಷ್ ನಟನೊಂದಿಗೆ ಡೇಟಿಂಗ್ ನಲ್ಲಿದ್ದು ಮುಂದಿನ ದಿನಗಳಲ್ಲಿ ಇವರು ಮದುವೆಯಾಗುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ. ಅಮಿ ಜಾಕ್ಸನ್ ರವರ ಈ ಘಟನೆ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಶೇರ್ ಮಾಡಿಕೊಳ್ಳಿ.