ಬಿಡುಗಡೆಯಾದ ಎರಡನೇ ವಾರಕ್ಕೆ ಹೊರ ಬಿದ್ದ ರಾಮಾಚಾರಿ, ಧಾರವಾಹಿ ಉತ್ತಮ ಎಂದರು ಕೂಡ ಪ್ರೇಕ್ಷಕರಿಗೆ ಶಾಕ್. ನಡೆದ್ದದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ, ಜನರು ಯಾವ ಧಾರಾವಾಹಿಯನ್ನು ಎಷ್ಟು ಇಷ್ಟಪಡುತ್ತಾರೆ, ಎಷ್ಟು ನೋಡುತ್ತಾರೆ ಎನ್ನುವುದರ ಮೇಲೆ ಆ ಧಾರಾವಾಹಿಗಳ ಸ್ಥಾನಗಳು ನಿರ್ಧಾರವಾಗುತ್ತವೆ. ಟಿ ಆರ್ ಪಿಯಲ್ಲಿ ಈ ಬಾರಿ ಟಾಪ್ ಸ್ಥಾನದಲ್ಲಿದ್ದ ಧಾರಾವಾಹಿ ಮುಂದಿನ ವಾರವೂ ಟಾಪ್ ನಲ್ಲಿಯೇ ಇರುತ್ತೆ ಎಂದು ಹೇಳುವುದು ಕಷ್ಟ. ಒಂದು ಧಾರಾವಾಹಿಗಿಂತ ಇನ್ನೊಂದು ಧಾರಾವಾಹಿಯಲ್ಲಿ ಟ್ವಿಸ್ಟ್ ಗಳನ್ನು ನಿರ್ದೇಶಕರು ಕೊಟ್ಟರೆ ಆ ಧಾರಾವಾಹಿ ಟಾಪ್ ಗೆ ಬಂದುಬಿಡುತ್ತದೆ. ಈ ಬಾರಿಯೂ ಇಂಥದೊಂದು ಟ್ವಿಸ್ಟ್ ಕೊಟ್ಟು ಧಾರಾವಾಹಿಯೊಂದು ಟಾಪ್ ಸ್ಥಾನಕ್ಕೆ ಬಂದಿದೆ.

ಹೌದು ನಟಿ ಉಮಾಶ್ರೀ ಅಭಿನಯದ ಪುಟ್ಟಕ್ಕನ ಮಕ್ಕಳು ಧಾರಾವಾಹಿ ಜನರಿಗೆ ಅತೀ ಕಡಿಮೆ ಸಮಯದಲ್ಲಿ ಜನರಿಗೆ ಹತ್ತಿರವಾದ ಧಾರಾವಾಹಿ. ಹಾಗಾಗಿ ಟಿ ಆರ್ ಪಿಯ ಟಾಪ್ ಹತ್ತರಲ್ಲಿ ಮೊದಲನೇ ಸ್ಥಾನವನ್ನು ಧಾರಾವಾಹಿಯ ಆರಂಭದಿಂದ ಇಂದಿನವರೆಗೂ ಉಳಿಸಿಕೊಂಡು ಬಂದಿದೆ. ಸ್ನೇಹ ಹಾಗೂ ಕಂಠಿಯನ್ನು ವೀಕ್ಷಕರು ಬಹುವಾಗಿ ಮೆಚ್ಚಿಕೊಂಡಿದ್ದಾರೆ.
ಇನ್ನು ಎರಡನೇಯ ಸ್ಥಾನದಲ್ಲಿ ಗಟ್ಟಿಮೇಳ ಭದ್ರವಾಗಿ ಕೂತಿದೆ. ವೇದಾಂತ್ ಅಸಲಿ ತಾಯಿ ಯಾರು ಅಂತ ಗೊತ್ತಾಗಬಹುದು ಎನ್ನುವ ನಿರೀಕ್ಷೆಯಲ್ಲಿ ಗಟ್ಟಿಮೇಳ ಟಾಪ್ 2ಕ್ಕೆ ಬಂದಿದೆ. ಇನ್ನು ಎಜೆ ಲೀಲಾ ತಮ್ಮ ಕೋಳಿ ಜಗಳದಿಂದಲೇ ಒಂದೊಂದೇ ಸ್ಥಾನ ಮೇಲೆ ಬರುತ್ತಿದ್ದಾರೆ. ಹೌದು ಈ ಬಾರಿ ಮೂರನೇ ಸ್ಥಾನದಲ್ಲಿರುವುದು ಹಿಟ್ಲರ್ ಕಲ್ಯಾಣ.

ಹಾಗೆಯೇ ಜೊತೆಜೊತೆಯಲಿ ಧಾರಾವಾಹಿ ಆರಂಭವಾದಾಗ ಬಹುಬೇಗ ಫೇಮಸ್ ಆಗಿ ಮೊದಲನೆಯ ಸ್ಥಾನದಲ್ಲಿತ್ತು. ಆದರೆ ಇದೀಗ ನಾಲ್ಕನೇ ಸ್ಥನಕ್ಕೆ ತೃಪ್ತಿಪಟ್ಟುಕೊಂಡಿದೆ. ಆದರೆ ಇತ್ತೀಗಿನ ಟ್ವಿಸ್ಟ್ ಗಳು ಮುಂದಿನ ವಾರ ಜೊತೆಜೊತೆಯಲಿ ಧಾರಾವಾಹಿಯನ್ನು ಗೆಲ್ಲಿಸುವ ನಿರೀಕ್ಷೆಯಿದೆ. ಹಾಗೆಯೇ ಸತ್ಯ ಧಾರಾವಾಗಿ ಟಾಪ್ ಒಂದರಿಂದ ಕೆಳಗಿಳಿದು 5ನೇ ಸ್ಥಾನದಲ್ಲಿಯೇ ಕೂರುವಂತಾಗಿದೆ.
ಇದೆಲ್ಲದರ ಹೊರತಾಗಿ ಶಾಕಿಂಗ್ ಸಂಗತಿ ಎಂದರೆ ಸದ್ಯ ಸದ್ಯ ಆರಂಭವಾದ ರಾಮಾಚಾರಿ ಜನರಿಗೆ ಬಹಳ ಇಷ್ಟವಾಗಿದ್ದಾನೆ. ಆದ್ರೆ ಈ ಬಾರಿ ಏನಾಯ್ತೋ ಗೊತ್ತಿಲ್ಲ, ಟಾಪ್ 1-2 ನೇ ಸ್ಥಾನಕ್ಕೆ ಬರಬಹುದು ಎಂದುಕೊಂಡ ಜನರ ನಿರೀಕ್ಷೆ ಹುಸಿಯಾಗಿದೆ. ಕಳೆದವಾರ ಟಾಪ್ 5ರಲ್ಲಿದ್ದ ರಾಮಾಚಾರಿ ಇದೀಗ ಟಾಪ್ 5 ನಿಂದ ಹೊರಗುಳಿದಿದೆ. ಬಹಳ ಹಿಂದಿನಿಂದ ಪ್ರಸಾರವಾಗುತ್ತಿದ್ದ ಪಾರು ಧಾರಾವಾಹಿ ಪಾರು ಆದಿ ಮದುವೆಯಿಂದಾಗಿ ಮತ್ತೆ ನಾಲ್ಕನೇ ಸ್ಥಾನಕ್ಕೆ ಏರಿದೆ.