ನಿಮ್ಮ ಮನೆ ಟಿವಿಯಲ್ಲಿಯೂ ದೂಳೆಬ್ಬಿಸಲು ಸಿದ್ದವಾದ ರಶ್ಮಿಕಾ, ಪುಷ್ಪ ಕನ್ನಡದಲ್ಲಿ ಪ್ರಸಾರ, ಯಾವಾಗ, ಯಾವ ಚಾನೆಲ್ ಗೊತ್ತೇ?? ಯಾರ್ಯಾರು ಕಾಯ್ತಾ ಇದ್ದೀರಾ??

1,472

ನಮಸ್ಕಾರ ಸ್ನೇಹಿತರೇ ಇತ್ತೀಚಿನ ಸಮಯದಲ್ಲಿ ಅತ್ಯಂತ ಹೆಚ್ಚು ಸದ್ದು ಮಾಡಿರುವ ಭಾರತೀಯ ಚಿತ್ರವೆಂದರೆ ಅದು ಅಲ್ಲು ಅರ್ಜುನ್ ಹಾಗೂ ರಶ್ಮಿಕ ಮಂದಣ್ಣ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಚಿತ್ರದ ಮೊದಲ ಭಾಗ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಹೌದು ಗೆಳೆಯರೇ ಯಾಕೆಂದರೆ ಬಾಕ್ಸಾಫೀಸ್ ನಲ್ಲಿ ಪುಷ್ಪ ಚಿತ್ರ 350 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದ್ಯಾವುದು ದೊಡ್ಡ ವಿಚಾರ ಎಂದು ಕೇಳಬಹುದು. ಅಲ್ಲೂ ಕೂಡ ಒಂದು ಕಾರಣವಿದೆ ಏನೆಂದರೆ ಈ ಮಹಾಮಾರಿಯ ಸಂದರ್ಭದಲ್ಲಿ ಯಾರೂ ಕೂಡ ಚಿತ್ರಮಂದಿರಕ್ಕೆ ಕಾಲಿಡಲು ಹಿಂದೆ ಮುಂದೆ ನೋಡುತ್ತಿದ್ದಾರೆ.

ಆ ಸಂದರ್ಭದಲ್ಲಿ ಪುಷ್ಪ ಚಿತ್ರತಂಡ ಧೈರ್ಯಮಾಡಿ ಸಿನಿಮಾವನ್ನು ಪಂಚ ಭಾಷೆಗಳಲ್ಲಿ ಬಿಡುಗಡೆ ಮಾಡಿತ್ತು. ನಿಜವಾಗಲೂ ಈ ಗೆಲುವು ಎನ್ನುವುದು ಸಾಮಾನ್ಯ ಪರಿಸ್ಥಿತಿಗೆ ಲೆಕ್ಕಹಾಕಿದರೆ ಸಾವಿರಾರು ಕೋಟಿ ಮೌಲ್ಯ ಎಂದು ಹೇಳಬಹುದಾಗಿದೆ. ಕಷ್ಟಕರ ಪರಿಸ್ಥಿತಿ ಇದ್ದರೂ ಕೂಡ ಪುಷ್ಪ ಚಿತ್ರದ ಗೆಲುವು ಈ ಮಟ್ಟಿಗೆ ನಡೆದಿದೆ ಎಂದರೆ ಎಲ್ಲವೂ ಸರಿಯಾಗಿದ್ದರೆ ಬಾಹುಬಲಿ ದಾಖಲೆಯನ್ನು ಕೂಡ ಮೀರಿಸಬಹುದಾಗಿತ್ತು ಎಂದು ಸಿನಿಮಾ ಪಂಡಿತರು ಲೆಕ್ಕಾಚಾರ ಹಾಕಿದ್ದಾರೆ.

ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ನವರ ಪಾತ್ರವು ಕೂಡ ವ್ಯಾಪಕವಾಗಿ ಜನಮೆಚ್ಚುಗೆಯನ್ನು ಪಡೆದುಕೊಂಡಿದ್ದು ಚಿತ್ರದ ಗೆಲುವಿಗೆ ಅವರು ಕೂಡ ಕಾರಣರಾಗಿದ್ದಾರೆ. ಸದ್ದಿನಲ್ಲೇ ರಶ್ಮಿಕ ರವರ ಕನ್ನಡದ ಅಭಿಮಾನಿಗಳಿಗೆ ಸಂತೋಷಕರ ಸುದ್ದಿ ಸಿಗಲಿದೆ. ಹೌದು ಅದೇನೆಂದರೆ ಚಿತ್ರಮಂದಿರಗಳಲ್ಲಿ ದಾಖಲೆಯ ಮೇಲೆ ದಾಖಲೆಯನ್ನು ಸೃಷ್ಟಿಸಿರುವ ಪುಷ್ಪ ಚಿತ್ರ ಟೆಲಿವಿಷನ್ ಅಲ್ಲಿ ಪ್ರಸಾರವಾಗಲಿದೆ. ಹೌದು ಸ್ಟಾರ್ ಸುವರ್ಣ ವಾಹಿನಿಯಲ್ಲಿ ಇದೇ ಮಾರ್ಚ್ ತಿಂಗಳಲ್ಲಿ ಪ್ರಸಾರ ಕಾಣುವ ಎಲ್ಲಾ ಸಾಧ್ಯತೆಗಳು ದಟ್ಟವಾಗಿದೆ. ದಿನಾಂಕ ಇನ್ನೂ ನಿಗದಿಯಾಗಿಲ್ಲ ಆದರೆ ಅತಿ ಶೀಘ್ರದಲ್ಲೇ ಪ್ರಸಾರವಾಗಲಿದೆ ಎಂಬುದಾಗಿ ಮೂಲಗಳು ತಿಳಿಸಿವೆ. ಚಿತ್ರಮಂದಿರಗಳಲ್ಲಿ ಸಿನಿಮಾವನ್ನು ಮಿಸ್ ಮಾಡಿಕೊಂಡವರಿಗೆ ಇದು ಸುವರ್ಣವಕಾಶ ಆಗಿದೆ.