ನಿಮ್ಮ ಫೋನ್ ನಲ್ಲಿ ಜಿಯೋ ನೆಟ್ವರ್ಕ್ ಸರಿಯಾಗಿ ಸಿಕ್ತ ಇಲ್ವಾ?? ಸ್ಪೀಡ್ ಕಡಿಮೆ ಇದೆಯಾ?? ಹಾಗಿದ್ದರೆ ಜಸ್ಟ್ ಹೀಗೆ ಮಾಡಿ ಸಾಕು, ಹುಡುಕಿಕೊಂಡು ಬರುತ್ತದೆ.
ನಮಸ್ಕಾರ ಸ್ನೇಹಿತರೇ, ಕೆಲವೊಮ್ಮೆ ಸ್ಮಾರ್ಟ್ ಫೋನ್ ಗಳಲ್ಲಿ ನೆಟ್ ವರ್ಕ್ ಸಮಸ್ಯೆಗಳು ಉಂಟಾಗುತ್ತವೆ. ಎಷ್ಟೋ ಸಲ ತುರ್ತುಪರಿಸ್ಥಿತಿ ಇದ್ದಾಗಲೇ ನೆಟ್ ವರ್ಕ್ ಕೈಕೊಡತ್ತೆ. ಬೇರೆಯವರ ಫೋನ್ ಗಳಲ್ಲಿ ಸ್ಪೀಡ್ ಆಗಿದ್ರೂ ನಮ್ಮ ಫೋನ್ ಗಳಲ್ಲಿ ನೆಟ್ ವರ್ಕ್ ನ ವೇಗ ಕಡಿಮೆ ಇರುತ್ತೆ. ಆಗ ಸಹಜವಾಗಿಯೇ ನಾವು ಬಳಸುತ್ತಿರುವ ಟೆಲಿಕಾಂ ಕಂಪನಿಗೆ ಬೈಕೊಳ್ತೇವೆ.
ಅದರಲ್ಲೂ ಹೆಚ್ಚಾಗಿ ಜಿಯೋ ಸಿಮ್ ಬಳಸುವ ಗ್ರಾಹಕರು ಜಿಯೋ ನೆಟ್ವರ್ಕ್ ನ್ನು ಬೈದುಕೊಳ್ತಾರೆ. ಆದರೆ ಇಲಿ ನೆಟ್ ವರ್ಕ್ ಸ್ಲೋ ಆಗುವುದಕ್ಕೆ ಕಂಪನಿಗಳೇ ಕಾರಣವಲ್ಲ. ಬೇರೆನ್ ಕಾರಣ ಗೊತ್ತಾ? ಮೊದಲನೆಯದಾಗಿ ಹೀಗೆ ನೆಟ್ವರ್ಕ್ ಸಮಸ್ಯೆ ಇದ್ರೆ, ನಿಮ್ಮ ಫೋನ್ ನಲ್ಲಿ ಎಪಿಎನ್ ಸೆಟ್ಟಿಂಗ್ ಸರಿಯಾಗಿಲ್ಲ ಅಂತ ಅರ್ಥ. ಇದರಿಂದ ನೆಟ್ ವರ್ಕ್ ಸ್ಲೋ ಆಗುವ ಸಾಧ್ಯತೆಗಳಿರುತ್ತವೆ. ಇದನ್ನು ಸೆಟ್ ಮಾಡಲು ಹೀಗೆ ಮಾಡಿ. ಮೊದಲು ಪೋನ್ ನಲ್ಲಿ ಸೆಟ್ಟಿಂಗ್ಸ್ ಆಯ್ಕೆಗೆ ಹೋಗಿ. ಅಲ್ಲಿ ಜಿಯೋ ಸಿಮ್ ಸ್ಲಾಟ್ ನಲ್ಲಿ ಎಪಿಎನ್ ನ್ನು ತೆರೆಯಿರಿ.

ಅಲ್ಲಿ ನಿಮಗೆ ರಿಸೆಟ್ ಬಟನ್ ಕಾಣಿಸುತ್ತದೆ. ಅಲ್ಲಿ ಮೊಬೈಲ್ ನೆಟ್ ವರ್ಕ್ ಆಯ್ಕೆ ಮಾಡಿ, ಅಲ್ಲಿ ಕಾಣುವ ಸಿಂ ಮತ್ತು ಮೊಬೈಲ್ ನೆಟ್ವರ್ಕ್ ಹೋಗಿ,ಜಿಯೋ 4 ಜಿ ಸಿಮ್ ಆಯ್ಕೆ ಮಾಡಿ. ಇಲ್ಲಿ ಡಿಪಾರ್ಟ್ ನಲ್ಲಿ ಇಂಟರ್ನೆಟ್ ಜಿಯೋ ನೆಟ್ ಎಂದು ಕಾಣಿಸುತ್ತದೆ. ಅದನ್ನು ಒತ್ತಿ ಅಲ್ಲಿ ಎಪಿಎನ್ ನಲ್ಲಿ ಜಿಯೋ ನೆಟ್ ಎಂದು ಆಯ್ಕೆ ಮಾಡಿ. ನಂತರ ಒಕೆ ಬಟನ್ ಒತ್ತಿದರೆ ನಿಮ್ಮ ನೆಟ್ವರ್ಕ್ ಕಾನ್ಫಿಗರೇಶನ್ ಆಗುತ್ತದೆ. ನೆಟ್ ವೇಗ ಹೆಚ್ಚಾಗುತ್ತದೆ. ಆದರೆ ಆಪಲ್ ಫೋನ್ ನಲ್ಲಿ ಇದು ಸಾಧ್ಯವಿಲ್ಲ.