ಸರಿಯಾಗಿ ಮಾರ್ಚ್ 17ಕ್ಕೆ ಜೇಮ್ಸ್ ಬಿಡುಗಡೆ ಮಾಡಲು ಕಾರಣವೇನಂತೆ ಗೊತ್ತೇ?? ಹುಟ್ಟುಹಬ್ಬ ಅನ್ಕೊಂಡ್ರಾ, ಅಲ್ಲವೇ ಅಲ್ಲ. ಕಾರಣ ಕೇಳಿ ಕಣ್ಣೀರು ಹಾಕಿದ ಫ್ಯಾನ್ಸ್.

90

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಕೊನೆಯ ಚಿತ್ರವಾಗಿರುವ ಜೇಮ್ಸ್ ಇದೇ ಮಾರ್ಚ್ 17 ರಂದು ಬಿಡುಗಡೆಯಾಗಲಿದೆ. ಎಲ್ಲರೂ ಅಂದುಕೊಂಡಿರಬಹುದು ಪುನೀತ್ ರಾಜಕುಮಾರ್ ರವರ ಮರಣದ ನಂತರ ಅಭಿಮಾನಿಗಳಿಗೆ ಅವರ ಜನ್ಮದಿನದಂದು ಚಿತ್ರತಂಡ ಸಿನಿಮಾವನ್ನು ತೋರಿಸಲು ಬಿಡುಗಡೆ ಮಾಡುತ್ತದೆ ಎನ್ನುವುದಾಗಿ. ಯಾಕೆಂದರೆ ಈಗಾಗಲೇ ಚಿತ್ರವನ್ನು ಪಂಚ ಭಾಷೆಗಳಲ್ಲಿ ಬಿಡುಗಡೆ ಮಾಡಲು ಭರದಿಂದ ತಯಾರಿ ನಡೆಯುತ್ತಿವೆ.

ಇದೇ ಮಾರ್ಚ್ 13ರಂದು ಹೊಸಪೇಟೆಯಲ್ಲಿ ಚಿತ್ರದ ಪ್ರಿ ರಿಲೀಸ್ ಕಾರ್ಯಕ್ರಮವನ್ನು ನಡೆಸಲು ಕೂಡ ಚಿತ್ರದ ಸಂಪೂರ್ಣ ತಯಾರಿಯನ್ನು ಮಾಡಿಕೊಂಡಿದೆ. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮೆಗಾಸ್ಟಾರ್ ಚಿರಂಜೀವಿ ಹಾಗೂ ಜೂನಿಯರ್ ಎನ್ಟಿಆರ್ ಆಗಮಿಸಲಿದ್ದಾರೆ ಎಂಬ ಸುದ್ದಿಗಳು ಕೂಡ ಬಲವಾಗಿವೆ. ಈಗಾಗಲೇ ಚಿತ್ರದ ಟ್ರೈಲರ್ ಚಿತ್ರದ ಕ್ವಾಲಿಟಿ ಯನ್ನು ಸಾಬೀತುಪಡಿಸಿದೆ. ಇನ್ನು ಚಿತ್ರ ಬಿಡುಗಡೆಯಾಗಿ ಬಾಕ್ಸಾಫೀಸ್ ನಲ್ಲಿ ಸದ್ದು ಮಾಡೋದಷ್ಟೆ ಬಾಕಿ ಉಳಿದಿರುವುದು. ಹಾಗಿದ್ದರೆ ಮಾರ್ಚ್ 17ಕ್ಕೆ ಬಿಡುಗಡೆ ಮಾಡಲು ಚಿತ್ರತರ ನಿರ್ಧರಿಸಿದ್ದೇಕೆ ಎಂಬುದನ್ನು ತಿಳಿಯೋಣ ಬನ್ನಿ.

ಹೌದು ಸ್ವತಃ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಚಿತ್ರವನ್ನು 17ಕ್ಕೆ ಬಿಡುಗಡೆ ಮಾಡಿ ಎಂಬುದಾಗಿ ಅವರು ಬದುಕಿದ್ದಾಗ ಹೇಳಿದ್ದರಂತೆ. ಇದಕ್ಕಾಗಿಯೇ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದೇವೆ ಎಂಬುದಾಗಿ ಚಿತ್ರದ ನಿರ್ದೇಶಕ ನಾಗಿರುವ ಬಹುದ್ದೂರ್ ಚೇತನ್ ರವರು ಹೇಳಿಕೊಂಡಿದ್ದಾರೆ. ಕೊನೆಯ ಬಾರಿಗೆ ಮಾರ್ಚ್ 17 ರಂದು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಜನುಮದಿನದ ಶುಭ ಸಂದರ್ಭದಲ್ಲಿ ಅವರ ಕೊನೆಯ ಸಿನಿಮಾವನ್ನು ನೋಡಲು ಎಲ್ಲರೂ ಕಾತರರಾಗಿದ್ದಾರೆ. ಜೇಮ್ಸ್ ಚಿತ್ರದ ಕುರಿತಂತೆ ನಿಮ್ಮ ನಿರೀಕ್ಷೆಗಳನ್ನು ತಪ್ಪದೆ ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.