ಬಿಗ್ ಶಾಕ್: ಬಿಗ್ ಬಾಸ್ ನಲ್ಲಿ ಪ್ರೀತಿ ಮಾಡಿದ್ದ ದಿವ್ಯ, ಮದುವೆಯಾಗುತ್ತಾರೆ ಎಂದು ಕೊಂಡರೆ ಬ್ರೇಕ್ ಅಪ್ ಕುರಿತು ಹೇಳಿ, ಪ್ರೀತಿ ಮುರಿದುಕೊಂಡದ್ದು ಯಾಕೆ ಗೊತ್ತೇ??

3,769

ನಮಸ್ಕಾರ ಸ್ನೇಹಿತರೇ ಬಿಗ್ಬಾಸ್ ಎನ್ನುವುದು ಒಬ್ಬ ಸ್ಪರ್ಧಿಗೆ ಎಷ್ಟರ ಮಟ್ಟಿಗೆ ಜನಪ್ರಿಯತೆ ಕೊಡಿಸುತ್ತದೆ ಎನ್ನುವುದನ್ನು ನೀವು ಈಗಾಗಲೇ ಹಲವಾರು ಬಾರಿ ವೀಕ್ಷಿಸಿದ್ದೀರಿ. ಇಂದಿನ ಮಾತನಾಡಲು ಹೊರಟಿರುವುದು ಹಿಂದಿ ಬಿಗ್ ಬಾಸ್ ಓಟಿಟಿ ಕುರಿತಂತೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಈ ಬಾರಿಯ ಹಿಂದಿ ಬಿಗ್ ಬಾಸ್ ಓಟಿಟಿ ಯನ್ನು ಗೆದ್ದಿರುವುದು ದಿವ್ಯ ಅಗರ್ವಲ್ ಎಂದು. ಬಿಗ್ ಬಾಸ್ ಅನ್ನು ಗೆಲ್ಲುವ ಮೂಲಕ ಸಾಕಷ್ಟು ದೊಡ್ಡ ಮಟ್ಟದಲ್ಲಿ ಈಗ ಟ್ರೆಂಡಿಂಗ್ ಟಾಪಿಕ್ ಆಗಿದ್ದಾರೆ. ಇನ್ನು ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ದಿವ್ಯ ಅಗರ್ವಲ್ ಅವರು ತಮ್ಮ ಪ್ರಿಯಕರ ವರುಣ್ ರವರ ಬಗ್ಗೆ ಹೇಳುತ್ತಲೇ ಇದ್ದರು.

ಬಿಗ್ ಬಾಸ್ ಮನೆಯಿಂದ ಗೆದ್ದು ಹೊರಬಂದು ನಂತರ ಇಬ್ಬರೂ ಕೂಡ ಮದುವೆಯಾಗುತ್ತಾರೆ ಎನ್ನುವುದಾಗಿ ಎಲ್ಲರೂ ಅಂದು ಕೊಂಡಿದ್ದರು. ಆದರೆ ನಡೆದಿದ್ದೇ ಬೇರೆ. ಹೌದು ದಿವ್ಯ ಅಗರ್ವಲ್ ಹಾಗೂ ವರುಣ ಇಬ್ಬರೂ ಕೂಡ ಈಗ ಬ್ರೇಕಪ್ ಮಾಡಿಕೊಂಡಿದ್ದಾರೆ. ಇಷ್ಟೊಂದು ಚೆನ್ನಾಗಿದ್ದ ಜೋಡಿ ಸಡನ್ನಾಗಿ ಬ್ರೇಕ್ ಅಪ್ ಮಾಡಿಕೊಂಡಿರುವುದು ಕೂಡ ಅವರ ಅಭಿಮಾನಿಗಳಿಗೆ ಬೇಸರವನ್ನು ಮೂಡಿಸಿದೆ. ಮಧುರಿಮಾ ರಾಯ್ ಜೊತೆಗೆ ವರುಣ ರವರು ಲವ್ ಅಫೇರ್ ಹೊಂದಿದ್ದರು ಇದಕ್ಕೆ ಇಬ್ಬರು ಕೂಡ ಬ್ರೇಕ್ ಅಪ್ ಮಾಡಿಕೊಂಡಿದ್ದಾರೆ ಎಂಬುದಾಗಿ ಜನರು ಮಾತನಾಡಿಕೊಳ್ಳುತ್ತಿದ್ದಾರೆ.

ಇದಾದ ಬಳಿಕ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಘೋಷಣೆ ಮಾಡಿ ಬ್ರೇಕ್ಪ್ ಬಗ್ಗೆ ಮಾಹಿತಿ ನೀಡಿದ್ದಾರೆ. ತಡ ನಂತರವೂ ಕೂಡ ಟ್ರೊಲ್ ಮಾಡಿದ್ದಕೆ ವರುಣ್ ರವರ ಪರವಾಗಿ ಮಾತನಾಡಿ ದಿವ್ಯ ಅಗರ್ವಾಲ್ ರವರು ವರುಣ ರವರ ಕುರಿತಂತೆ ಹೇಳುತ್ತಾ ಅವರ ಕ್ಯಾರೆಕ್ಟರ್ ಬಗ್ಗೆ ನನಗೆ ಗೊತ್ತು ಅವರು ಪ್ರಾಮಾಣಿಕ ಅವರ ಕುರಿತಂತೆ ಏನನ್ನು ಹೇಳುವ ಧೈರ್ಯವನ್ನು ಮಾಡಬೇಡಿ ಎಂಬುದಾಗಿ ಹೇಳಿದ್ದಾರೆ. ಇದು ನನ್ನ ನಿರ್ಧಾರ ಇದರ ಕುರಿತಂತೆ ಮಾತನಾಡುವ ಹಕ್ಕು ಯಾರಿಗೂ ಇಲ್ಲ ಇಂತಹ ನಿರ್ಧಾರವನ್ನು ತೆಗೆದುಕೊಳ್ಳಲು ಧೈರ್ಯ ಬೇಕು ಎನ್ನುವುದಾಗಿ ಹೇಳಿದ್ದಾರೆ. ದಿವ್ಯ ಅಗರ್ವಾಲ್ ರವರ ಈ ನಿರ್ಧಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.