ಸರಿಗಮಪ ಕೇವಲ ಟಿಆರ್ಪಿ ಹಿಂದೆ ಬಿದ್ದಿತೆ?? ಬಡವಿ ಸಂಜನಾಗೆ ಮಾತ್ರ ಸರಿಗಮಪದಲ್ಲಿ ಮಣೆ, ಬೇರೆ ಸ್ಪರ್ದಿಗಳಿಗೆ ಯಾರು ಹೊಣೆ?? ನಡೆದ್ದದೇನು ಗೊತ್ತೇ??

260

ನಮಸ್ಕಾರ ಸ್ನೇಹಿತರೇ ಈ ರಿಯಾಲಿಟಿ ಶೋ ಟ್ರೆಂಡ್ ಭಾರತದಲ್ಲಿ ಪ್ರಾರಂಭವಾಗಿರುವುದು ಹಿಂದಿ ವಾಹಿನಿಗಳಲ್ಲಿ ಎಂಬುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ. ಹಿಂದಿ ರಿಯಾಲಿಟಿ ಶೋ ಕಾರ್ಯಕ್ರಮಗಳಲ್ಲಿ ಎಲ್ಲಾ ಪ್ರತಿಭೆಗಳಿಗೆ ವೇದಿಕೆಯನ್ನು ಒದಗಿಸಲಾಗುತ್ತದೆ. ಇಂದು ನಾವು ಮಾತನಾಡಲು ಹೊರಟಿರುವುದು ಹಿಂದಿ ಸರಿಗಮಪ ಕಾರ್ಯಕ್ರಮದ ಕುರಿತಂತೆ. ಅಲ್ಲೆಲ್ಲಾ ಪ್ರತಿಭೆಗಳಿಗೆ ಕೂಡ ಅವಕಾಶವೇನೋ ನೀಡಲಾಗುತ್ತದೆ ಆದರೆ ಬಡ ಪ್ರತಿಭೆಗಳಿಗೆ ಹೆಚ್ಚಿನ ಆಸಕ್ತಿಯನ್ನು ತೋರಿದರೆ ಪ್ರತಿಭೆಗಳಿಗೆ ಮಣೆ ಹಾಕುತ್ತಿಲ್ಲ ಎನ್ನುವ ಕೂಗುಗಳು ಕೂಡ ಕೇಳಿಬರುತ್ತಿವೆ. ಬಡ ಪ್ರತಿಭೆಗಳಿಗೆ ನೀಡುವ ಸೌಲಭ್ಯ ಹಾಗೂ ಸಪೋರ್ಟ್ ಗಳ ಕಾರಣದಿಂದಾಗಿ ಬೇರೆ ಸ್ಪರ್ಧಿಗಳಿಗೆ ಬೆಲೆ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ.

ಒಂದುವೇಳೆ ನೀವು ಹಿಂದಿ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಸರಿಗಮಪ ಕಾರ್ಯಕ್ರಮವನ್ನು ನೋಡಿದರೆ ಕಡಿತವಾಗಿ ನಾವು ಏನನ್ನು ಹೇಳಲು ಹೊರಟಿದ್ದೇವೆ ಎಂಬುದು ನೀವು ತಿಳಿದುಕೊಂಡಿರುತ್ತೀರಿ. ಹೌದು ನಾವು ಮಾತನಾಡುತ್ತಿರುವುದು ಸಂಜನಾ ಭಟ್ ಎನ್ನುವ ಸ್ಪರ್ಧಿಯ ಕುರಿತಂತೆ. ಅವರ ತಮ್ಮ ಮಗುವನ್ನು ಎತ್ತಿಕೊಂಡು ಹಾಡನ್ನು ಹಾಡಿ ಎಲ್ಲರ ಮನವನ್ನು ಗೆದ್ದಿದ್ದರು. ತಾವು ಎಷ್ಟು ಕಷ್ಟದಲ್ಲಿ ಬದುಕುತ್ತಿದ್ದೇವೆ ಎನ್ನುವ ವಿಚಾರವನ್ನು ಕೂಡ ವೇದಿಕೆಯಲ್ಲಿ ತಿಳಿಸಿದ್ದಾರೆ. ಹೀಗಾಗಿ ಅವರು ಬಂದ ದಿನದಿಂದಲೂ ಇಂದಿನವರೆಗೆ ಕಾರ್ಯಕ್ರಮದ ಟಿಆರ್ ಪಿ ಎನ್ನುವುದು ಗಗನಕ್ಕೇರಿದೆ. ಕಾರ್ಯಕ್ರಮಕ್ಕೆ ಬರುವ ಪ್ರತಿಯೊಬ್ಬ ಸೆಲೆಬ್ರಿಟಿ ಕೂಡ ಅವರನ್ನು ನೋಡಲು ಬಂದಿದ್ದೇವೆ ಎಂಬುದಾಗಿ ಹೇಳಿಕೊಳ್ಳುತ್ತಿದ್ದಾರೆ.

ಸಂಜನಾ ರವರು ವೇದಿಕೆಯ ಮೇಲೆ ಹಾಡನ್ನು ಹೇಳುವಾಗ ವೇದಿಕೆಯ ಕೆಳಭಾಗದಲ್ಲಿ ಪಕ್ಕದಲ್ಲಿ ಅವರ ಪತಿ ದೇವೇಂದ್ರ ಕೂಡ ಕುಳಿತು ಕೊಂಡಿರುತ್ತಾರೆ. ಪ್ರತಿ ಬಾರಿ ಕೂಡ ಅವರನ್ನು ಬೇರೆ ಬೇರೆ ವಿಚಾರಗಳಿಗಾಗಿ ಹಾಡು ಹಾಡಿದೆ ನಂತರ ವೇದಿಕೆ ಮೇಲೆ ಕರೆಸಿಕೊಂಡು ಮಾತನಾಡುತ್ತಾರೆ ಹಾಗೂ ಟಿ ಆರ್ ಪಿ ಗಾಗಿ ಬಳಸಿಕೊಳ್ಳುತ್ತಾರೆ ಎಂಬ ವೀಕ್ಷಕರ ಆರೋಪವೂ ಕೂಡ ಕೇಳಿಬಂದಿತ್ತು. ಇದು ಉಳಿದಿರುವ ಪ್ರತಿಭಾನ್ವಿತ ಪ್ರತಿಭೆಗಳ ಪ್ರತಿಭಾ ಪ್ರದರ್ಶನಕ್ಕೆ ಅಡ್ಡಿಯಾಗುತ್ತಿದೆ ಎಂಬುದಾಗಿ ಹೇಳಲಾಗುತ್ತಿದೆ. ಕಾರ್ಯಕ್ರಮದಲ್ಲಿ ಸಂಜನಾ ಭಟ್ ರವರಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ನೀಡಲಾಗುತ್ತಿದೆ ಎಂಬ ಆರೋಪವೂ ಕೂಡ ಕೇಳಿ ಬರುತ್ತಿದೆ.

ಈಗಾಗಲೇ ಈ ವಿಚಾರ ಅತಿರೇಕ ಎನ್ನಿಸುವಂತಹ ಹಲವಾರು ಘಟನೆಗಳು ಕೂಡ ಕಾರ್ಯಕ್ರಮದಲ್ಲಿ ಇದುವರೆಗೂ ನಡೆದಿದೆ. ನಾವಿಬ್ಬರು ಮದುವೆ ಆದಂತಹ ಯಾವುದು ನೆನಪುಗಳು ಕೂಡ ನಮ್ಮಲ್ಲಿ ಇಲ್ಲ ನಮ್ಮ ಬಳಿ ಹಣ ಕೂಡ ಇರಲಿಲ್ಲ ಎಂಬುದಾಗಿ ಸಂಜನಾ ಒಮ್ಮೆ ಹೇಳಿದ್ದರು. ಅದಕ್ಕೆ ನೆಹಾ ಕಕ್ಕರ್ ಹಾಗೂ ರೋಹನ್ ಪ್ರೀತ್ ರವರ ಸಮ್ಮುಖದಲ್ಲಿ ಮತ್ತೆ ವೇದಿಕೆಯಲ್ಲಿ ಮದುವೆಯನ್ನು ಕೂಡ ಮಾಡಿಸಲಾಗಿತ್ತು. ಮಗು ಮಲಗಬೇಕು ಎನ್ನುವ ಕಾರಣಕ್ಕಾಗಿ ತೊಟ್ಟಿಲನ್ನು ಕೂಡ ತರಿಸಲಾಗಿತ್ತು. ಇಷ್ಟೇ ಏಕೆ ಇಲ್ಲಿವರೆಗೆ ನಮಗೆ ವಿಮಾನ ಅಥವಾ ಹೆಲಿಕಾಪ್ಟರ್ ಹತ್ತಿಲ್ಲ ಎಂದು ಹೇಳಿದ್ದಕ್ಕಾಗಿ ಖ್ಯಾತ ಗಾಯಕ ಕುಮಾರ್ ಸಾನು ರವರು ಇಬ್ಬರಿಗೂ ಹೆಲಿಕಾಪ್ಟರ್ ರೈಡ್ ಮಾಡಿಸಿದ್ದರು. ಇದನ್ನು ಟಿವಿ ಯ ಜನಪ್ರಿಯತೆಯನ್ನು ಹೆಚ್ಚಿಸುವುದಕ್ಕಾಗಿ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಿ ತೋರಿಸಲಾಗಿತ್ತು.

ಇದು ಇಷ್ಟಕ್ಕೆ ಮಾತ್ರ ನಿಲ್ಲದೆ ನಟಿ ಮಧು ಅವರು ಕಾರ್ಯಕ್ರಮಕ್ಕೆ ಬಂದಿದ್ದಾಗ ಸಂಜನಾ ರವರಿಗೆ ದುಬಾರಿ ಬೆಲೆಯ ಸೀರೆಯನ್ನು ಕೂಡ ನೀಡಿದ್ದರೂ ಅವರು ಅದನ್ನು ಹುಟ್ಟಿಕೊಂಡು ಬಂದಾಗ ಅವರ ಪತಿ ನೀಡಿದಂತಹ ಪ್ರತಿಕ್ರಿಯೆಯನ್ನು ಕೂಡ ರಿಯಾಕ್ಷನ್ ಗಳನ್ನು ರೆಕಾರ್ಡ್ ಮಾಡಿ ಪ್ರಸಾರ ಮಾಡಲಾಗಿದೆ. ಊರ್ಮಿಳಾ ಹಾಗೂ ನಟ ಧರ್ಮೇಂದ್ರ ಬಂದಾಗಲೂ ಕೂಡ ದುಬಾರಿ ಆಟಿಕೆಗಳನ್ನು ಸಂಜನಾ ರವರ ಮಗುವಿಗೆ ತಂದು ನೀಡಿದ್ದರು. ಹಿಂದಿಯ ಟೆಲಿವಿಜನ್ ಜನಪ್ರಿಯ ಧಾರಾವಾಹಿಗಳಲ್ಲಿ ಒಂದಾಗಿರುವ ಮಿಠಾಯಿ ಧಾರವಾಹಿಯ ಟೈಟಲ್ ಟ್ರ್ಯಾಕ್ ಅನ್ನು ಕೂಡ ಅವರಿಂದ ಹಾಡಿಸಲಾಗಿತ್ತು.

ಇದರಿಂದಾಗಿ ಕಾರ್ಯಕ್ರಮದ ವೀಕ್ಷಕರಲ್ಲಿ ಅಸಮಾಧಾನ ಮೂಡಿದ್ದು, ಬಡತನಕ್ಕೆ ಕನಿಕರ ಪಡಬೇಕು ನಿಜ ಆದರೆ ಬೇರೆ ಪ್ರತಿಭೆಗಳಿಗೆ ಇದರಿಂದ ತೊಂದರೆಯಾಗುತ್ತಿದೆ ಹಾಗೂ ಉಳಿದವರ ಪ್ರತಿಭೆಯನ್ನು ಯಾರು ಕೂಡ ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ಇದು ಕಾರ್ಯಕ್ರಮದಲ್ಲಿ ಬೇರೆ ಎಲ್ಲಾ ಪ್ರತಿಭೆಗಳಿಗೆ ಅನ್ಯಾಯ ಆಗುತ್ತಿದೆ ಎನ್ನುವ ಕೂಗನ್ನು ಹೊರಡಿಸಿದೆ. ನಿಮಗೂ ಕೂಡ ಇದು ಸರಿ ಎಂದು ಅನಿಸಿದರೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಅಭಿಪ್ರಾಯಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.