ಹೆಂಗೆ ನಾವು ಅಂತ ಫೇಮಸ್ಸಾದ ರಚನಾ ಇಂದರ್ ಗೆ ಜನ್ಮದಿನದ ಸಂಭ್ರಮ; ಇದೀಗ ಅವರ ವಯಸ್ಸು ಎಷ್ಟು ಗೊತ್ತೆ, ಎಷ್ಟು ಚಿಕ್ಕವರು ಗೊತ್ತೆ??

82

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಹಲವಾರು ಕಂಟೆಂಟ್ ಓರಿಯಂಟೆಡ್ ಸಿನಿಮಾಗಳು ಕನ್ನಡ ಚಿತ್ರರಂಗದಲ್ಲಿ ಬಿಡುಗಡೆ ಆಗುತ್ತಿರುವುದು ಹಲವಾರು ಹೊಸ ಪ್ರತಿಭೆಗಳ ಗುರುತು ಪ್ರೇಕ್ಷಕರಿಗೆ ಆಗುವಂತೆ ದಾರಿಮಾಡಿಕೊಟ್ಟಿದೆ. ಎರಡು ವರ್ಷಗಳ ಹಿಂದಷ್ಟೇ ಬಿಡುಗಡೆಯಾಗಿರುವ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ಲವ್ ಮಾಕ್ಟೇಲ್ ಚಿತ್ರ ಕೂಡ ಇದಕ್ಕೆ ಹೊರತಾಗಿಲ್ಲ. ಬಹುತೇಕ ಎಲ್ಲಾ ಹೊಸ ಪ್ರತಿಭೆಗಳನ್ನು ಒಳಗೊಂಡಂತಹ ಈ ಚಿತ್ರ ಕನ್ನಡ ಚಿತ್ರರಂಗದಲ್ಲಿ ಸಂಚಲನವನ್ನು ಸೃಷ್ಟಿಸಿತು. ಚಿತ್ರಮಂದಿರಗಳಲ್ಲಿ ಕೂಡ ಕೊನೆಯ ಹಂತದಲ್ಲಿ ಉತ್ತಮ ಕಲೆಕ್ಷನ್ ಹಾಗೂ ಜನಪ್ರಿಯತೆಗೆ ಪಾತ್ರವಾಗಿತ್ತು.

ಡಿಜಿಟಲ್ ಪ್ಲಾಟ್ಫಾರ್ಮ್ ನಲ್ಲಿ ಕೂಡ ಕೇವಲ ಕನ್ನಡಿಗರನ್ನು ಮಾತ್ರವಲ್ಲದೆ ಪರಭಾಷಿಕ ಸಿನಿಮಾ ಪ್ರೇಕ್ಷಕರನ್ನು ಮೆಚ್ಚಿಸಲು ಕೂಡ ಯಶಸ್ವಿಯಾಗಿದೆ. ಇನ್ನೂ ಅದರ ಎರಡನೇ ಭಾಗ ಇತ್ತೀಚೆಗಷ್ಟೇ ಬಿಡುಗಡೆಯಾಗಿ ರುವುದು ಕೂಡ ನಿಮಗೆ ಗೊತ್ತಿದೆ. ಮೊದಲ ಭಾಗದಲ್ಲಿ ಹೆಂಗೆ ನಾವು ಎಂದು ಹೇಳುತ್ತಾ ಎಲ್ಲರ ಮನೆ ಗೆದ್ದಂತಹ ನಟಿ ರಚನಾ ಎಂದರೆ ರವರ ಬಗ್ಗೆ ನಿಮಗೆಲ್ಲಾ ತಿಳಿದಿರುವುದು ಸಹಜ. ಕೇವಲ ಸಣ್ಣ ಪಾತ್ರದಿಂದಲೇ ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು ನಟಿ ರಚನಾ ಇಂದರ್ ರವರು ಚಿತ್ರದ ಬಿಡುಗಡೆಯ ನಂತರ ದೊಡ್ಡಮಟ್ಟದ ಗುರುತನ್ನು ಪ್ರೇಕ್ಷಕರಿಂದ ಪಡೆದುಕೊಳ್ಳುತ್ತಾರೆ. ಇದಾದ ನಂತರ ಈಗಾಗಲೇ ಎರಡನೇ ಭಾಗದಲ್ಲಿ ಕೂಡ ನಟಿಸಿದ್ದರು ಹೆಚ್ಚಿನ ಸ್ಕ್ರೀನ್ ಸ್ಪೇಸ್ ದೊರಕಿಲ್ಲ ಎನ್ನುವುದು ಕೂಡ ಬೇಸರದ ವಿಚಾರ.

ಸದ್ಯಕ್ಕೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ತ್ರಿಬಲ್ ರೈಡಿಂಗ್ ಸಿನಿಮಾದಲ್ಲಿ ಕೂಡ ಮೂರು ನಾಯಕಿಯರಲ್ಲೊಬ್ಬರಾಗಿ ಕಾಣಿಸಿಕೊಂಡಿದ್ದಾರೆ. ರಚನಾ ಇಂದರ್ ರವರಿಗೆ ಕನ್ನಡ ಚಿತ್ರರಂಗದಲ್ಲಿ ಉಜ್ವಲವಾದ ಭವಿಷ್ಯ ಕಾಯುತ್ತಿದೆ ಎಂಬುದನ್ನು ಎಲ್ಲರೂ ಕೂಡ ಒಪ್ಪಿಕೊಳ್ಳಲೇಬೇಕು. ಸದ್ಯಕ್ಕೆ ರಚನಾ ಇಂದರ್ ರವರು ತಮ್ಮ ಜನ್ಮ ದಿನವನ್ನು ಸಂಭ್ರಮದಿಂದ ಆಚರಿಸಿಕೊಳ್ಳುತ್ತಿದ್ದಾರೆ. ಅವರ ವಯಸ್ಸಿನ ಕುರಿತಂತೆ ಕೂಡ ಎಲ್ಲರಿಗೂ ಕುತೂಹಲವಿದೆ. ಯಾಕೆಂದರೆ ಇಷ್ಟೊಂದು ಚಿಕ್ಕವಯಸ್ಸಿನಲ್ಲಿ ಇಷ್ಟೊಂದು ಸಾಧನೆ ಮಾಡಿದ್ದಾರೆ ಎಂದರೆ ಖಂಡಿತವಾಗಿಯೂ ಈ ಕುರಿತಂತೆ ಕುತೂಹಲ ಮೂಡುವುದು ಸಹಜ. ಹೌದು ಗೆಳೆಯರೆ ರಚನಾ ಇಂದರ್ ರವರಿಗೆ ಕೇವಲ 23 ವರ್ಷ ವಯಸ್ಸು. ಅವರ ಸಿನಿಮಾ ಜರ್ನಿ ಇನ್ನಷ್ಟು ದೊಡ್ಡ ಮಟ್ಟದ ಯಶಸ್ಸನ್ನು ಕಾಣಲಿ ಎಂದು ಹಾರೈಸೋಣ.