ರಶ್ಮಿಕಾ, ಪೂಜಾ ಹೆಗ್ಡೆ ನಂತರ ಅಲ್ಲೂ ಅರ್ಜುನ್ ಜೊತೆ ನಟಿಸುವ ಅವಕಾಶ ಪಡೆದುಕೊಂಡ ಅಪ್ಪಟ ಕನ್ನಡತಿ, ಊಹಿಸದ ರೀತಿ ಅವಕಾಶ ಪಡೆದುಕೊಂಡವರು ಯಾರು ಗೊತ್ತೇ??

19,726

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ದಕ್ಷಿಣ ಭಾರತ ಚಿತ್ರರಂಗದಲ್ಲಿ ಸದ್ಯಕ್ಕೆ ಅತ್ಯಂತ ಹೆಚ್ಚು ಬೇಡಿಕೆಯಲ್ಲಿರುವ ನಟ ಎಂದರೆ ಅದು ಸ್ಟೈಲಿಷ್ ಸ್ಟಾರ್ ಅಲ್ಲು ಅರ್ಜುನ್. ಪುಷ್ಪ ಚಿತ್ರದ ನಂತರ ಎಲ್ಲರೂ ಅವರನ್ನು ಐಕಾನಿಕ್ ಸ್ಟಾರ್ ಎನ್ನುವುದಾಗಿ ಕರೆಯುತ್ತಿದ್ದಾರೆ. ಇನ್ನು ನಮ್ಮ ಕನ್ನಡ ಚಿತ್ರರಂಗದ ಹಲವಾರು ನಟಿಯರು ಕೂಡ ಈಗಾಗಲೇ ಅಲ್ಲು ಅರ್ಜುನ್ ರವರೊಂದಿಗೆ ನಟಿಸಿದ್ದಾರೆ. ಮೊದಲಿಗೆ ಅಲಾ ವೈಕುಂಠಪುರಮುಲೋ ಚಿತ್ರದ ಮೂಲಕ ಮಂಗಳೂರು ಮೂಲದ ಪೂಜಾ ಹೆಗ್ಡೆ ಅವರು ನಟಿಸಿದ್ದರು.

ಅಲಾ ವೈಕುಂಠಪುರಮುಲೋ ಚಿತ್ರ ಅಲ್ಲು ಅರ್ಜುನ್ ರವರಿಗೆ ಕಂಬ್ಯಾಕ್ ಚಿತ್ರವಾಗಿತ್ತು. ಬಾಕ್ಸಾಫೀಸ್ ನಲ್ಲಿ ಮಹೇಶ್ ಬಾಬುರವರ ಸರಿಲೇರು ನೀಕೆವ್ವರು ಚಿತ್ರವನ್ನು ಸೋಲಿಸಿತ್ತು. ನಂತರ ಇತ್ತೀಚೆಗಷ್ಟೇ ನಟಿ ರಶ್ಮಿಕಾ ಮಂದಣ್ಣ ನವರು ಅಲ್ಲು ಅರ್ಜುನ್ ಅವರ ಜೊತೆಗೆ ಪುಷ್ಪ ಚಿತ್ರದಲ್ಲಿ ನಟಿಸಿದ್ದರು. ಈ ಚಿತ್ರ ಪಂಚಭಾಷಾ ಚಿತ್ರವಾಗಿ ದೇಶ-ವಿದೇಶದ ಅಧ್ಯಂತ ಕೋಟಿ ಕೋಟಿ ರೂಪಾಯಿ ಕಲೆಕ್ಷನ್ ಬಾಚಿಕೊಂಡಿತು. ಒಟ್ಟಾರೆಯಾಗಿ ಹೇಳುವುದಾದರೆ ಅಲ್ಲು ಅರ್ಜುನ್ ರವರಿಗೆ ಕನ್ನಡದ ನಟಿಯರು ಎಂದರೆ ಲಕ್ಕಿ ಚಾರ್ಮ್ ಎಂದು ಹೇಳಬಹುದಾಗಿದೆ.

ಈಗ ಸಿಕ್ಕಿರುವ ಸುದ್ದಿಯ ಪ್ರಕಾರ ಮತ್ತೊಬ್ಬ ಕನ್ನಡ ಮೂಲದ ನಟಿ ಅಲ್ಲು ಅರ್ಜುನ್ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅವರು ಯಾರು ಎನ್ನುವುದನ್ನು ಮೊದಲು ತಿಳಿಯೋಣ ಬನ್ನಿ. ಹೌದು ಗೆಳೆಯರೇ ಅವರು ಇನ್ಯಾರು ಅಲ್ಲ ಗೋಲ್ಡನ್ ಸ್ಟಾರ್ ಗಣೇಶ್ ಅವರ ಮುಂಗಾರು ಮಳೆ 2 ಸಿನಿಮಾದ ಮೂಲಕ ನಟನಾ ಜಗತ್ತಿಗೆ ಪಾದಾರ್ಪಣೆ ಮಾಡಿದ ನಟಿ ನೇಹಾ ಶೆಟ್ಟಿ. ಇತ್ತೀಚಿಗೆ ಅವರು ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದು ಕೊಂಚ ಮಟ್ಟಿಗೆ ಕಡಿಮೆಯಾಗಿದೆ. ಅಲ್ಲು ಅರ್ಜುನ್ ರವರ ಜೊತೆಗೆ ಜೊಮ್ಯಾಟೋ ಜಾಹೀರಾತಿನಲ್ಲಿ ನಟಿಸಿದ್ದಾರೆ. ಈ ಧಾರವಾಹಿ ಈಗಾಗಲೇ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದೆ. ನೀವು ಕೂಡ ಈ ಜಾಹೀರಾತನ್ನು ನೋಡಿದ್ದರೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ನಿಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳಿ.