ಅಮ್ಮ ತೀರಿಕೊಂಡ ನೋವಿನಲ್ಲೂ ಐದೇ ದಿನಕ್ಕೆ ಜನಾರ್ದನ ರೆಡ್ಡಿ ರವರ ಪುತ್ರ ಸಿನಿಮಾದ ಮುಹೂರ್ತಕ್ಕೆ ಬರಲು ಕಾರಣ ತಿಳಿಸಿದ ರವಿಚಂದ್ರನ್. ಏನಂತೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ ಸೆಲೆಬ್ರೆಟಿಗಳ ಅಥವಾ ಅವರ ಸಂಬಂಧಿಕರ ಮರಣದ ಸುದ್ದಿ ಹೆಚ್ಚಾಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಕೆಲವು ತಿಂಗಳುಗಳ ಹಿಂದಷ್ಟೇ ನಾವು ನಮ್ಮ ಹೆಚ್ಚಿನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಸೇರಿದಂತೆ ಹಲವಾರು ಸ್ಯಾಂಡಲ್ವುಡ್ ಹಾಗೂ ಭಾರತೀಯ ಚಿತ್ರರಂಗದ ಸೆಲೆಬ್ರಿಟಿಗಳನ್ನು ಕಳೆದುಕೊಂಡಿದ್ದೇವೆ.

ಈಗ ಅದೇ ಸಾಲಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ರವರ ತಾಯಿ ಹಾಗೂ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕರಾಗಿರುವ ವೀರಾಸ್ವಾಮಿಯವರ ಪತ್ನಿಯಾಗಿರುವ ಪಟ್ಟಾಲಮ್ಮ ರವರನ್ನು ಕಳೆದುಕೊಂಡಿದ್ದೇವೆ. ಹಿಂದೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಮರಣ ಹೊಂದಿದ ದಿನದಂದೇ ಕ್ರೇಜಿಸ್ಟಾರ್ ರವಿಚಂದ್ರನ್ ರವರ ತಾಯಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಸೇರಿಸಲಾಗಿತ್ತಂತೆ. ಆದರೆ ಅವರಿಗೆ ದೇವರು ಹೆಚ್ಚಿನ ಸಮಯವನ್ನು ನೀಡಿಲ್ಲ ಎಂಬುದು ನಿಜಕ್ಕೂ ವಿಷಾದನೀಯ ವಿಚಾರ. ಅಮ್ಮ ಎಂದರೆ ಪ್ರಾಣವನ್ನೇ ಬಿಡುತ್ತಿದ್ದರು ಕ್ರೇಜಿಸ್ಟಾರ್ ರವಿಚಂದ್ರನ್ ರವರು. ಅನಾರೋಗ್ಯಕ್ಕೆ ತುತ್ತಾದ ದಿನದಿಂದಲೂ ಕೂಡ ತಮ್ಮ ಮನೆಯಲ್ಲಿಯೇ ಮಗುವಿನಂತೆ ಸಾಕುತ್ತಿದ್ದರು. ಆದರೆ ಈಗ ಅವರನ್ನು ಕಳೆದುಕೊಂಡಿರುವುದು ಜಂಘಾಬಲವೇ ಉಡುಗಿ ದಂತಾಗಿದೆ.
ಅದೇನೇ ಇರಲಿ ಅಮ್ಮನನ್ನು ಕಳೆದುಕೊಂಡ 5ನೇ ದಿನಕ್ಕೆ ಜನಾರ್ದನರೆಡ್ಡಿ ಅವರ ಪುತ್ರರಾಗಿರುವ ಕಿರೀಟಿ ರವರ ಮೊದಲ ಚಿತ್ರದ ಲಾಂಚ್ ಕಾರ್ಯಕ್ರಮಕ್ಕೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಅತಿಥಿಯಾಗಿ ಆಗಮಿಸಿದ್ದರು. ಈ ಕುರಿತಂತೆ ಹಲವಾರು ಜನರಿಗೆ ಹಲವಾರು ಗೊಂದಲಗಳು ಮೂಡಬಹುದು ಅದನ್ನೆಲ್ಲ ಅವರೇ ಸ್ವತಃ ಖುದ್ದಾಗಿ ತಿಳಿಗೊಳಿಸಿದ್ದಾರೆ. ಹೌದು ಇದೇ ವೇದಿಕೆಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ರವರು ಅಮ್ಮ ಮರಣ ಹೊಂದಿದ ಐದನೇ ದಿನಕ್ಕೆ ನಾನು ಬಂದಿದ್ದೇನೆ ಎಂಬುದಾಗಿ ನೀವು ಆಲೋಚಿಸುತ್ತಿರಬಹುದು ನಾನು ಬಂದಿರುವುದಕ್ಕೆ ಪ್ರಮುಖ ಕಾರಣ ಚಿತ್ರದ ನಿರ್ಮಾಪಕರಾಗಿರುವ ಸಾಯಿ ಕೊರಪತಿ ಹಾಗೂ ಚಿತ್ರತಂಡ ಎಂಬುದಾಗಿ ಹೇಳಿದ್ದಾರೆ. ಹೌದು ಚಿತ್ರತಂಡ ಬರಲೇಬೇಕು ಎನ್ನುವುದಾಗಿ ಕೋರಿಕೊಂಡಿದ್ದ ಕ್ಕಾಗಿ ಕ್ರೇಜಿಸ್ಟಾರ್ ರವಿಚಂದ್ರನ್ ರವರ ಬಂದು ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.