ಬಿಗ್ ನ್ಯೂಸ್: ನಾನು ಗಂಡಸಾಗಿಯೇ ಹುಟ್ಟಬೇಕಾಗಿತ್ತು ಎಂದು ಷಾಕಿಂಗ್ ಹೇಳಿಕೆ ನೀಡಿದ ರಶ್ಮಿಕಾ, ಅಂತದ್ದು ಏನಾಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಸೋಶಿಯಲ್ ಮೀಡಿಯಾದಲ್ಲಿ ಒಂದಲ್ಲ ಒಂದು ದಿನ ಒಂದಲ್ಲ ಒಂದು ರೀತಿಯಲ್ಲಿ ರಶ್ಮಿಕ ಮಂದಣ್ಣ ಅವರ ಕುರಿತಂತೆ ಸುದ್ದಿಗಳು ಹರಿದಾಡುತ್ತಲೇ ಇರುತ್ತದೆ. ಇದೇ ಕಾರಣಕ್ಕಾಗಿ ಅವರನ್ನು ಇಡೀ ಭಾರತೀಯ ಚಿತ್ರರಂಗದ ಸಿನಿಮಾ ರಸಿಕರು ಗುರುತಿಸುವುದು. ಸದ್ಯಕ್ಕೆ ಅತ್ಯಂತ ಹೆಚ್ಚು ಸಂಭಾವನೆ ಹಾಗೂ ಬೇಡಿಕೆಯನ್ನು ಹೊಂದಿರುವ ನಟಿಯಾಗಿರುವ ರಶ್ಮಿಕ ಮಂದಣ್ಣ ನವರು ಮುಂದಿನ ದಿನಗಳಲ್ಲಿ ಹಲವಾರು ಬಿಗ್ ಬಜೆಟ್ ಹಾಗೂ ಸ್ಟಾರ್ ನಟರ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದರ ಕುರಿತಂತೆ ಈಗಾಗಲೇ ಖಾತ್ರಿಯಾಗಿದೆ.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ರಶ್ಮಿಕ ಮಂದಣ್ಣ ನವರು ಸುದ್ದಿಯಾಗುವುದು ವಿಜಯ್ ದೇವರಕೊಂಡ ರವರ ಜೊತೆಗಿನ ಪ್ರೇಮ ಸಂಬಂಧದ ಕುರಿತಂತೆ. ಈ ಕುರಿತಂತೆ ಇಬ್ಬರು ಅಧಿಕೃತವಾಗಿ ಹೇಳಿಕೊಂಡಿಲ್ಲವಾದರೂ ಕೂಡ ಅದಕ್ಕೆ ಪೂರಕವಾಗುವಂತೆ ನಡೆದುಕೊಳ್ಳುತ್ತಿದ್ದಾರೆ ಎನ್ನುವುದೇ ಇಲ್ಲಿ ಎಲ್ಲರೂ ಗಮನಿಸುತ್ತಿರುವ ಹಾಗೂ ಇದು ದೊಡ್ಡದಾಗಿ ಸದ್ದು ಮಾಡಲು ಕಾರಣವಾಗಿರುವ ವಿಚಾರ. ಇನ್ನು ಹಲವಾರು ವೈವಿಧ್ಯಮಯ ಗ್ಲಾಮರಸ್ ಬಟ್ಟೆಗಳನ್ನು ಹಾಕುವ ಮೂಲಕ ಹಾಗೂ ಕನ್ನಡ ಕರ್ನಾಟಕಕ್ಕೆ ನಿರ್ಲಕ್ಷ ಭಾವವನ್ನು ತೋರುವ ಮೂಲಕವೂ ಕೂಡ ಟೀಕೆಗೆ ಒಳಗಾಗಿ ಸುದ್ದಿಯಾಗುತ್ತಿದ್ದರು ರಶ್ಮಿಕ ಮಂದಣ್ಣ.

ಆದರೆ ಈಗ ಸುದ್ದಿಯಾಗುತ್ತಿರುವುದು ಅವರ ವಿಚಿತ್ರ ಹೇಳಿಕೆಯ ಕಾರಣದಿಂದಾಗಿ. ಹೌದು ಇತ್ತೀಚೆಗಷ್ಟೇ ರಶ್ಮಿಕ ಮಂದಣ್ಣ ಹಾಗೂ ಶರ್ವಾನಂದ ನಟನೆಯ ಅಡವಾಳ್ಳು ಮೀಕು ಜೋಹರ್ಲು ಸಿನಿಮಾದ ಪ್ರಿ ರಿಲೀಸ್ ಕಾರ್ಯಕ್ರಮ ನಡೆದಿತ್ತು. ಈ ಸಂದರ್ಭದಲ್ಲಿ ರಶ್ಮಿಕ ಮಂದಣ್ಣ ನಾನು ಮುಂದಿನ ಜನುಮದಲ್ಲಿ ಗಂಡಾಗಿ ಹುಟ್ಟಲು ಬಯಸುತ್ತೇನೆ. ಪುಷ್ಪ ಹಾಗೂ ಅಡವಾಳ್ಳು ಮೀಕು ಜೋಹರ್ಲು ನಂತಹ ಸಿನಿಮಾಗಳಲ್ಲಿ ನಾನು ವಿಭಿನ್ನ ಕಾಸ್ಟ್ಯೂಮ್ ಗಳನ್ನು ಹಾಕಿ ಸುಸ್ತಾಗಿದ್ದೇನೆ ಇದಕ್ಕಾಗಿ ನಾನು ಮುಂದಿನ ಜನ್ಮದಲ್ಲಿ ಗಂಡಾಗಿ ಹುಟ್ಟಲು ಇಷ್ಟಪಡುತ್ತೇನೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಇದಕ್ಕೆ ಅಲ್ಲಿದ್ದ ಹೆಂಗಳೆಯರು ಕೂಡ ಚಪ್ಪಾಳೆ ತಟ್ಟಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಯನ್ನು ನಮ್ಮೊಂದಿಗೆ ತಪ್ಪದೇ ಶೇರ್ ಮಾಡಿಕೊಳ್ಳಿ.