ಇದ್ದಕ್ಕಿದ್ದ ಹಾಗೆ ಆಫರ್ ಗಳು ಹುಡುಕಿಕೊಂಡು ಬರುತ್ತಿದ್ದರೂ ಕೂಡ ಬಾಲಿವುಡ್ ಬಿಡಲು ನಿರ್ಧಾರ ಮಾಡಿದ ಪೂಜಾ, ಪಾಪ ಯಾಕಂತೆ ಗೊತ್ತೇ??

669

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕ ಮೂಲದಿಂದ ಪರಭಾಷೆಗಳಿಗೆ ಹಲವಾರು ನಟ-ನಟಿಯರು ಹೋಗಿ ನಟಿಸಿ ಯಶಸ್ವಿ ಜೀವನವನ್ನು ನಡೆಸುತ್ತಿರುವುದನ್ನು ನೀವು ಕಣ್ಣಾರೆ ನೋಡಿದ್ದೀರಿ. ಇನ್ನು ಇಂದು ನಾವು ಮಾತನಾಡಲು ಹೋಗುತ್ತಿರುವುದು ಕೂಡ ನಟಿ ಪೂಜಾ ಹೆಗ್ಡೆ ರವರ ಕುರಿತಂತೆ. ನಟಿ ಪೂಜಾ ಹೆಗ್ಡೆ ರವರು ಕೂಡ ಇದೇ ಸಾಲಿಗೆ ಸೇರುತ್ತಾರೆ. ಕರಾವಳಿ ಮೂಲದವರಾಗಿದ್ದ ರು ಕೂಡ ಇವರು ಈಗ ಮಿಂಚುತ್ತಿರುವುದು ತೆಲುಗು ಹಿಂದಿ ತಮಿಳು ಚಿತ್ರರಂಗದಲ್ಲಿ.

ಅದರಲ್ಲೂ ಇವರು ಸಿನಿಮಾ ಜಗತ್ತಿಗೆ ಪಾದರ್ಪಣೆ ಮಾಡಿದ್ದು ಬಾಲಿವುಡ್ ಚಿತ್ರರಂಗದ ಸ್ಟಾರ್ ನಾಯಕ ಹೃತಿಕ್ ರೋಷನ್ ನಾಯಕ ನಟನಾಗಿ ನಟಿಸಿರುವ ಮೊಹೆಂಜೋದಾರೋ ಚಿತ್ರದಲ್ಲಿ. ಆದರೆ ಮೊದಲ ಚಿತ್ರ ಹೇಳಿಕೊಳ್ಳುವಷ್ಟು ಕೈಹಿಡಿಯಲಿಲ್ಲ. ಆದರೂ ಪೂಜಾ ಹೆಗಡೆ ಬಾಲಿವುಡ್ ಚಿತ್ರರಂಗದಲ್ಲಿ ದೊಡ್ಡ ಮಟ್ಟದಲ್ಲಿ ಹೆಸರನ್ನು ಮಾಡಿ ಸ್ಟಾರ್ ನಟಿಯಾಗಿ ಕಾಣಿಸಿಕೊಳ್ಳುತ್ತಾರೆ ಎಂಬುದಾಗಿ ಎಲ್ಲರೂ ಭಾವಿಸಿದ್ದರು. ಆದರೆ ಹೌಸ್ ಫುಲ್ 4 ಸಿನಿಮಾದಲ್ಲಿ ನಟಿಸಿದ ನಂತರ ಮತ್ತೆ ಬಾಲಿವುಡ್ ಚಿತ್ರರಂಗಕ್ಕೆ ಕಾಲಿಡದೆ ತೆಲುಗು ಚಿತ್ರರಂಗಕ್ಕೆ ಸೀಮಿತವಾಗಿರುವಂತೆ ಇದ್ದಾರೆ ನಟಿ ಪೂಜಾ ಹೆಗ್ಡೆ. ಹಾಗೆ ಇದಕ್ಕೆ ಕಾರಣವೇನು ಎಂಬುದನ್ನು ತಿಳಿಯೋಣ ಬನ್ನಿ.

ಬಾಲಿವುಡ್ ಚಿತ್ರರಂಗಕ್ಕೆ ಹೋಲಿಸಿದರೆ ಪೂಜಾ ಹೆಗ್ಡೆ ರವರ ಜನಪ್ರಿಯತೆಯನ್ನು ವುದು ತೆಲುಗು ಚಿತ್ರರಂಗದಲ್ಲಿ ಸಾಕಷ್ಟು ಹೆಚ್ಚಾಗಿದೆ. ಅದರಲ್ಲೂ ಇತ್ತೀಚಿಗೆ ತಮಿಳು ಚಿತ್ರರಂಗದ ತಲಪತಿ ಎಂದೇ ಖ್ಯಾತರಾಗಿರುವ ವಿಜಯ್ ರವರ ಬೀಸ್ಟ್ ಸಿನಿಮಾದಲ್ಲಿ ಕೂಡ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಅರವಿಂದ ಸಮೇತ ವೀರ ರಾಘವ ಮಹರ್ಷಿ ಅಲಾ ವೈಕುಂಠಪುರಮ್ಲೋ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಭಾಸ್ ಅವರೊಂದಿಗಿನ ರಾಧೇಶ್ಯಾಮ್ ಚಿತ್ರ ಕೂಡ ಇದೇ ತಿಂಗಳಿನಲ್ಲಿ ಬಿಡುಗಡೆಯಾಗಲಿದೆ. ಇದರ ಕುರಿತಂತೆ ಮಾತನಾಡುತ್ತಾ ಪೂಜಾ ಹೆಗ್ಡೆ ರವರು ತೆಲುಗಿನ ಇಂಡಸ್ಟ್ರಿಯವರು ನನಗೆ ಹೆಚ್ಚಿನ ಪ್ರೀತಿ ಹಾಗೂ ಗೌರವಗಳನ್ನು ನೀಡಿದರು ಇದಕ್ಕಾಗಿ ನಾನು ಹಿಂದಿಯಲ್ಲಿ ಉಳಿಯಲು ಆಗಿಲ್ಲ ಎಂಬುದಾಗಿ ಪ್ರತಿಕ್ರಿಯಿಸಿದ್ದಾರೆ.