ಮತ್ತೆ ಬಂದರು ಸತ್ಯ ಹುಡುಗಿ ಕ್ಯೂಟ್ ಬೆಡಗಿ ಜೆನಿಲಿಯಾ, 14 ವರ್ಷಗಳ ಬಳಿಕ ಕನ್ನಡಕ್ಕೆ ವಾಪಸ್ಸು ಬಂದಾಗ ಹೇಳಿದ್ದೇನು ಗೊತ್ತೇ??

83

ನಮಸ್ಕಾರ ಸ್ನೇಹಿತರೇ ಕೆಲವು ನಟಿಯರು ನಮ್ಮ ಚಿತ್ರರಂಗದಲ್ಲಿ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿ ಹೋದರು ಕೂಡ ಅವರ ಒಂದು ನಟನಾ ಪ್ರದರ್ಶನವೇ ಸಾಕು ಪ್ರೇಕ್ಷಕರಿಗೆ ಅವರನ್ನು ಹಲವಾರು ವರ್ಷಗಳ ಕಾಲ ನೆನಪಿಟ್ಟುಕೊಳ್ಳುವುದಕ್ಕೆ. ಅವರಲ್ಲಿ ಇಂದು ನಾವು ಮಾತನಾಡಲು ಹೊರಟಿರುವ ನಟಿ ಕೂಡ ಒಬ್ಬರು ಎಂದರೆ ಅತಿಶಯೋಕ್ತಿಯಲ್ಲ. ಹೌದು ಮಾತನಾಡುತ್ತಿರುವುದು ನಟಿ ಜೆನಿಲಿಯಾ ರವರ ಕುರಿತಂತೆ. 2000 ಇಸವಿಯ ಆಸುಪಾಸಿನಲ್ಲಿ ಜೆನಿಲಿಯಾ ಅವರು ದಕ್ಷಿಣ ಭಾರತ ಚಿತ್ರರಂಗದ ಟಾಪ್ ಮೋಸ್ಟ್ ನಟಿಯಾಗಿದ್ದರು.

ನಂತರ 2012 ರಲ್ಲಿ ರಿತೇಶ್ ದೇಶಮುಖ್ ರವರನ್ನು ಮದುವೆಯಾದ ನಂತರ ಚಿತ್ರರಂಗದಿಂದ ಕೊಂಚ ಮಟ್ಟಿಗೆ ದೂರವಾದರು ಎಂದು ಹೇಳಬಹುದಾಗಿದೆ. ಅದಕ್ಕೂ ಮುನ್ನ ಕನ್ನಡದಲ್ಲಿ ಕೂಡ ನಟಿಸಿ ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದರು. ಹೌದು ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಸತ್ಯ ಇಸ್ ಇನ್ ಲವ್ ಚಿತ್ರದಲ್ಲಿ ನಟಿಸಿದ್ದರು ಈ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸನ್ನು ಕೂಡ ಕಂಡಿತ್ತು. ಹೌದು ಗೆಳೆಯರೇ ಈಗ ಮತ್ತೆ 14 ವರ್ಷಗಳ ನಂತರ ಚಿತ್ರರಂಗಕ್ಕೆ ವಾಪಸ್ಸಾಗುತ್ತಿದ್ದಾರೆ ಅದು ಕೂಡ ಕನ್ನಡ ಚಿತ್ರರಂಗದ ಮೂಲಕ ಎನ್ನುವುದು ಮತ್ತೊಂದು ವಿಶೇಷವಾಗಿದೆ.

ಹೌದು ಗೆಳೆಯರೆ ಜನಾರ್ದನ ರೆಡ್ಡಿ ರವರ ಪುತ್ರನಾಗಿರುವ ಕಿರೀಟೀ ರವರ ಚೊಚ್ಚಲ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಜೆನಿಲಿಯಾ ರವರು ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆಯ ಮೇಲೆ ರಾಜಮೌಳಿ ಶಿವಣ್ಣ ಹಾಗೂ ರವಿಚಂದ್ರನ್ ರವರು ಕೂಡ ಇದ್ದರು. ಕಿರೀಟಿ ಯವರ ಕುರಿತಂತೆ ಮಾತನಾಡುತ್ತಾ ಹದಿನಾಲ್ಕು ವರ್ಷಗಳ ನಂತರ ನಾನು ಕನ್ನಡಕ್ಕೆ ವಾಪಸ್ ಆಗುತ್ತಿದ್ದೇನೆ. ನಿಮ್ಮ ಜೊತೆಗೆ ನಾನು ನಟನೆಗೆ ಮರಳುತ್ತಿದ್ದೇನೆ ಇಬ್ಬರು ಒಟ್ಟಿಗೆ ಚೆನ್ನಾಗಿ ನಡೆಸುವ ಎಂಬುದಾಗಿ ಜೆನಿಲಿಯಾ ರವರು ವೇದಿಕೆಯಲ್ಲಿ ಹೇಳುತ್ತಾರೆ. ಸಂಗೀತ ನಿರ್ದೇಶಕನಾಗಿ ದೇವಿಶ್ರೀ ಪ್ರಸಾದ್ ನಿರ್ಮಾಪಕರಾಗಿ ಸಾಯಿ ಕೊರಪತಿ ಹಾಗೂ ಬಾಹುಬಲಿ ಖ್ಯಾತಿಯ ರತ್ನವೇಲು ಕ್ಯಾಮೆರಾಮ್ಯಾನ್ ಆಗಿದ್ದಾರೆ. ನಿಜಕ್ಕೂ ಕೂಡ ಜನಾರ್ಧನರೆಡ್ಡಿ ರವರ ಪುತ್ರನಾಗಿರುವ ಕಿರೀಟಿ ರವರಿಗೆ ಇದೊಂದು ಡ್ರೀಮ್ ಡೆಬ್ಯೂ ಸಿನಿಮಾ ಆಗಲಿದೆ.