ಕೊನೆಗೂ ಬಯಲಾಯ್ತು ಷಾಕಿಂಗ್ ವಿಚಾರ, ಸೋನು ಸೂದ್ ರವರು ಲೊಕ್ಡೌನ್ ಸಮಯದಲ್ಲಿ ಕೋಟಿ ಕೋಟಿ ಖರ್ಚು ಮಾಡಿದ ಹಣ ಹೇಗೆ ಬಂತು ಗೊತ್ತೇ??
ನಮಸ್ಕಾರ ಸ್ನೇಹಿತರೇ 2020 ಇಸವಿಯಲ್ಲಿ ನಡೆದಿರುವಂತಹ ಮಹಾಮಾರಿಯ ಘಟನೆ ಖಂಡಿತವಾಗಿಯೂ ಇಡೀ ವಿಶ್ವದ ಇತಿಹಾಸದಲ್ಲಿ ಅತ್ಯಂತ ಕರಾಳ ದಿನಗಳು ಎಂದರೆ ಖಂಡಿತವಾಗಿ ತಪ್ಪಾಗಲಾರದು. ಆದಿನ ಮುಂದೆಂದು ಕೂಡ ಬಾರದೇ ಇರಲಿ ಎನ್ನುವುದಾಗಿ ಎಲ್ಲರೂ ಹಾರೈಸುತ್ತಿದ್ದಾರೆ. ಈ ಸಂದರ್ಭದಲ್ಲಿ ಎಷ್ಟು ಜನ ಮರಣವನ್ನು ಹೊಂದಿದ್ದಾರೆ ಹಾಗೂ ಎಷ್ಟು ಜನ ತಮ್ಮ ಕುಟುಂಬಸ್ಥರನ್ನು ಕಳೆದುಕೊಂಡಿದ್ದಾರೆ ಎನ್ನುವುದು ನಿಮಗೆಲ್ಲಾ ಗೊತ್ತಿರುವ ವಿಚಾರವಾಗಿದೆ.
ಈ ಸಂದರ್ಭದಲ್ಲಿ ಕೆಲವರು ಜೀವವನ್ನು ಕಳೆದುಕೊಂಡರು ಅದೆಷ್ಟು ಲೆಕ್ಕವಿಲ್ಲದಷ್ಟು ದಿನ ಜೀವನವನ್ನೇ ಕಳೆದುಕೊಂಡಿದ್ದರು. ಕೆಲವರಿಗೆ ತಮ್ಮ ಊರಿಗೆ ಹೋಗಲು ಯಾವುದೇ ವಾಹನ ವ್ಯವಸ್ಥೆಗಳು ಇರಲಿಲ್ಲ. ಇನ್ನು ಕೆಲವರಿಗೆ ದುಡಿದು ತಿನ್ನಲು ಕೆಲಸ ಇರಲಿಲ್ಲ ಆರ್ಥಿಕವಾಗಿ ಕೂಡ ಕೆಲ ಮಟ್ಟವನ್ನು ತಲುಪಿದ್ದರು. ಈ ಸಂದರ್ಭದಲ್ಲಿ ಕಷ್ಟದಲ್ಲಿ ಇದ್ದಂತಹ ಪ್ರತಿಯೊಬ್ಬ ಭಾರತೀಯನಿಗೂ ಸಹಾಯಕ್ಕೆ ಬಂದಿದ್ದು ಬಾಲಿವುಡ್ ಚಿತ್ರರಂಗದ ಒಬ್ಬ ಸ್ಟಾರ್ ನಟ ಎಂದರೆ ಖಂಡಿತವಾಗಿ ತಪ್ಪಾಗಲಾರದು.

ಅವರು ಯಾರು ಎನ್ನುವುದು ನಿಮಗೆಲ್ಲಾ ಗೊತ್ತೇ ಇದೆ. ಹೌದು ನಾವು ಮಾತನಾಡುತ್ತಿರುವುದು ನಟ ಸೋನು ಸೂದ್ ರವರ ಕುರಿತಂತೆ. ಪಂಜಾಬ್ ದಕ್ಷಿಣ ಭಾರತ ಚಿತ್ರರಂಗ ಮಾತ್ರವಲ್ಲದೆ ಬಾಲಿವುಡ್ ಚಿತ್ರರಂಗದಲ್ಲಿ ಕೂಡ ಬೇಡಿಕೆಯಲ್ಲಿರುವ ನಟ ಸೋನು ಸೂದ್ ಅವರು ಲಕ್ಷಾಂತರ ಮಂದಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡಿದ್ದಾರೆ. ಲಾಕ್ ಡೌನ್ ಸಂದರ್ಭದಲ್ಲಿ ಪ್ರತಿಯೊಬ್ಬರ ಪಾಲಿಗೆ ಪ್ರಾಯಶಹ ದೇವರಾಗಿದ್ದರು. ವಿದೇಶದಲ್ಲಿದ್ದು ಭಾರತಕ್ಕೆ ಬರಲು ಯಾವುದೇ ಹಣಕಾಸಿನ ಆಧಾರವಿಲ್ಲದೆ ಪರದಾಡುತ್ತಿದ್ದ ಅದೆಷ್ಟೋ ಭಾರತೀಯರನ್ನು ಭಾರತಕ್ಕೆ ತಮ್ಮ ಸ್ವಂತ ಖರ್ಚಿನಲ್ಲಿ ಕರೆಸಿದ್ದರು. ಭಾರತದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಹೋಗಬೇಕಾದ ಅವರನ್ನು ಕೂಡ ತಾವೇ ಮುತುವರ್ಜಿವಹಿಸಿ ಕಳುಹಿಸಿಕೊಟ್ಟು ದೇವರಾಗಿದ್ದರು ನಟ ಸೋನು ಸೂದ್.

ತಮ್ಮ ಸ್ವಂತ ಖರ್ಚಿನಲ್ಲಿ ಟ್ರೈನ್ ಬಸ್ಸು ಫ್ಲೈಟ್ ಗಳ ಮೂಲಕ ಜನರಿಗೆ ಹೋಗಬೇಕಾದ ಜಾಗಕ್ಕೆ ತಲುಪಿಸಿದ್ದರು. ಆರೋಗ್ಯ ಸಮಸ್ಯೆ ಇದ್ದವರಿಗೆ ವೈದ್ಯಕೀಯ ನೆರವು ನೀಡಿದ್ದರು. ಆರ್ಥಿಕ ಸಮಸ್ಯೆ ಇದ್ದವರಿಗೆ ಹಣವನ್ನು ನೀಡಿದರು. ಹಸಿದವರಿಗೆ ಊಟೋಪಚಾರಗಳನ್ನು ಒದಗಿಸಿದರು. ಕೆಲಸ ಇಲ್ಲದವರಿಗೆ ಕೆಲಸವನ್ನು ಕೂಡ ಕೊಡಿಸಿದರು.
ಜನರು ಮತಚಲಾಯಿಸಿ ಆಯ್ಕೆಮಾಡುವ ಸರ್ಕಾರ ಇಷ್ಟು ಕೆಲಸ ಮಾಡುತ್ತಿತ್ತೋ ಇಲ್ಲವೋ ಗೊತ್ತಿಲ್ಲ ಆದರೆ ನಟ ಸೋನು ಸೂದ್ ರವರು ಮಾತ್ರ ಎಲ್ಲಾ ಬಗೆಯ ಜನರ ಕಷ್ಟಗಳಿಗೆ ಸ್ಪಂದಿಸಿ ತಮ್ಮ ಕೈಯಾರೆ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಅವರಿಗೆ ಸಹಾಯವನ್ನು ಮಾಡಿದರು. ಮಾಧ್ಯಮದವರು ಯಾಕೆ ನೀವು ಇಷ್ಟೊಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಜನರಿಗೆ ಸಹಾಯವನ್ನು ಮಾಡುತ್ತಿದ್ದೀರಿ ಎಂದು ಕೇಳಿದಾಗಲೆಲ್ಲ ಸೋನು ಸೂದ್ ರವರು ನಾನು ಕೂಡ ಇಂತಹ ಬಡ ಕುಟುಂಬದಲ್ಲಿ ಜನಿಸಿ ಬೆಳೆದು ಬಂದವನು ಇವರ ಕಷ್ಟ ಹಸಿವು ನನಗೆ ಅರ್ಥವಾಗುತ್ತದೆ ಅದಕ್ಕಾಗಿ ಸಹಾಯ ಮಾಡುತ್ತಿದ್ದೇನೆ ಎಂಬುದಾಗಿ ಹೇಳುತ್ತಾರೆ.
ಸೋನು ಸೂದ್ ರವರು ಲಾಕ್ ಡೌನ್ ನಲ್ಲಿ ಜನರಿಗೆ ಮಾಡಿರುವಂತಹ ಸೇವೆಗೆ ಭಾರತದ ಅತ್ಯುನ್ನತ ಪ್ರಶಸ್ತಿಯಾಗಿರುವ ಭಾರತ ರತ್ನ ನೀಡಿದರೂ ಕೂಡ ಕಡಿಮೆಯೇ. ಒಬ್ಬ ಸೆಲೆಬ್ರಿಟಿ ಆಗಿದ್ದರೂ ಕೂಡ ಜನರ ನಡುವೆ ರಾತ್ರಿ-ಹಗಲೆನ್ನದೆ ಅವರ ಸೇವೆಯಲ್ಲಿ ತೊಡಗಿದ್ದವರು ಸೋನು ಸೂದ್. ಇನ್ನು ಇಷ್ಟೊಂದು ಕೋಟ್ಯಾಂತರ ರೂಪಾಯಿ ಖರ್ಚು ಮಾಡಲು ಸೋನು ಸೂದ್ ರವರಿಗೆ ಹಣದ ಮೂಲ ಯಾವುದು ಎಂದು ಎಲ್ಲರ ಅನುಮಾನವಾಗಿದೆ. ಅದಕ್ಕೆ ಕೂಡ ನಾವು ನಿಮಗೆ ಉತ್ತರ ಹೇಳುತ್ತೇವೆ ಬನ್ನಿ.

ಹೌದು ಬಹುತೇಕ ನಟ ಸೋನು ಸೂದ್ ರವರೇ ತಮ್ಮ ಜೇಬಿನಿಂದ ಖರ್ಚು ಮಾಡಿದ್ದಾರೆ. ಇಷ್ಟು ಮಾತ್ರವಲ್ಲದೆ ಕೆಲವೊಂದು ಕೆಲಸಗಳನ್ನು ಸಮಾಜದ ಹಲವಾರು ಗಣ್ಯ ಸಮಾಜಸೇವಕರ ಬಳಿ ಹೇಳಿ ಜನರಿಗೆ ಸಹಾಯ ಮಾಡುವಂತೆ ಕೇಳಿಕೊಳ್ಳುತ್ತಾರೆ. ಅವರು ಕೂಡ ಸಹಾಯ ಮಾಡುತ್ತಾರೆ. ಆದರೂ ಕೂಡ ಬಹುಮುಖ್ಯ ಪಾಲು ಸೋನು ಸೂದ್ ರವರದ್ದೇ ಆಗಿದೆ. ಅದೇನೇ ಇರಲಿ ನಿಸ್ವಾರ್ಥ ಮನೋಭಾವದಿಂದ ಇಷ್ಟೊಂದು ಸೇವಾ ಕೆಲಸಗಳನ್ನು ಮಾಡಿರುವಂತಹ ಸೋನು ಸೂದ್ ರವರಿಗೆ ಕೇವಲ ಭಾರತ ಮಾತ್ರವಲ್ಲದೆ ವಿದೇಶಗಳಿಂದಲೂ ಕೂಡ ಇಂದಿಗೂ ಮೆಚ್ಚುಗೆಯ ಮಾತುಗಳು ಬರುತ್ತಲೇ ಇದೆ. ದೇವರು ಅವರಿಗೆ ಇನ್ನಷ್ಟು ಯಶಸ್ಸು ಹಾಗೂ ಐಶ್ವರ್ಯ ಹಾಗೂ ಇನ್ನೊಬ್ಬರಿಗೆ ಸಹಾಯ ಮಾಡುವಂತಹ ನಿಸ್ವಾರ್ಥ ಮನೋಭಾವವನ್ನು ನೀಡಲಿ ಎಂದು ಹಾರೈಸೋಣ.