ಯಾರೇ ಕೇಳಿದರೂ ಪುನೀತ್ ಅವರು ಸಿನಿಮಾಗಳಲ್ಲಿ ಯಾಕೆ ಹಾಡುತ್ತಿದ್ದರು ಗೊತ್ತಾ; ಹಣಕ್ಕಾಗಿ ಅನ್ಕೊಂಡ್ರಾ?? ಪಾರ್ವತಮ್ಮ ರವರು ಅಂದು ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನು ಅಗಲಿ ಈಗಾಗಲೇ ತಿಂಗಳುಗಳೇ ಉರುಳಿದರೂ ಕೂಡ ಅವರ ವ್ಯಕ್ತಿತ್ವದ ಛಾಯೆ ಇನ್ನು ಕೂಡ ನಮ್ಮ ಮನಸ್ಸಿನಲ್ಲಿ ಆಳವಾಗಿ ಬೇರು ಬಿಟ್ಟಿದೆ. ಪುನೀತ್ ರಾಜಕುಮಾರ್ ರವರು ಹಲವಾರು ವಿಚಾರಗಳಿಗಾಗಿ ನಮಗೆ ಇಷ್ಟವಾಗುತ್ತಾರೆ. ಕನ್ನಡ ಚಿತ್ರರಂಗದ ಅಜಾತಶತ್ರು ಎಂದರೂ ಕೂಡ ತಪ್ಪಾಗಲಾರದು. ಎಲ್ಲಾ ನಟರೊಂದಿಗೆ ಸ್ನೇಹ ಸಂಬಂಧವನ್ನು ಹೊಂದಿರುವ ಏಕೈಕ ನಟ ಎಂದರೆ ಅದು ಪುನೀತ್ ರಾಜಕುಮಾರ್ ಅವರು ಮಾತ್ರ.
ಕೇವಲ ನಟರಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿ ಕೂಡ ಕನ್ನಡ ಚಿತ್ರರಂಗದ ಪ್ರತಿಭೆಗಳಿಗೆ ಅವಕಾಶವನ್ನು ಕೊಡಮಾಡುವ ಪುಣ್ಯದ ಕೆಲಸವನ್ನು ಮಾಡಿದ್ದರು ಈ ಪುಣ್ಯಾತ್ಮ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪುನೀತ್ ರಾಜಕುಮಾರ್ ಅವರು ಗಾಯಕನಾಗಿ ಕೂಡ ಕನ್ನಡ ಚಿತ್ರರಂಗದಲ್ಲಿ ಗಮನಾರ್ಹ ಸಾಧನೆ ಮಾಡಿರುವಂತಹ ನಟ. ಮೊದಲಿನಿಂದಲೂ ಕೂಡ ದೊಡ್ಡ ಮನೆಯಲ್ಲಿ ಅಣ್ಣಾವ್ರಿಂದ ಹಿಡಿದು ಇಲ್ಲಿಯವರೆಗೆ ಪುನೀತ್ ರಾಜಕುಮಾರ್ ಅವರು ಕೂಡ ಗಾಯನದ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿರುವಂತಹ ಕಲಾವಿದರಾಗಿದ್ದಾರೆ. ಈ ಕುರಿತಂತೆ ಯಾರಿಗೂ ಗೊತ್ತಿಲ್ಲದ ವಿಚಾರವೊಂದನ್ನು ಸ್ವತಹ ಪಾರ್ವತಮ್ಮನವರು ಈ ಹಿಂದೆ ಒಂದು ಸಮಯದಲ್ಲಿ ಸಂದರ್ಶನವೊಂದರಲ್ಲಿ ಬಿಚ್ಚಿಟ್ಟಿದ್ದರು.

ಹೌದು ಅಣ್ಣಾವ್ರಿಂದ ಹಿಡಿದು ಪುನೀತ್ ರಾಜಕುಮಾರ್ ರವರೆಗೆ ಎಲ್ಲರೂ ಕೂಡ ಸಿನಿಮಾಗಳಲ್ಲಿ ಹಾಡಿದ್ದಾರೆ. ನಿರ್ಮಾಪಕರು ಹಾಗೂ ನಿರ್ದೇಶಕರು ಕೂಡ ತಮ್ಮ ಸಿನಿಮಾಗಳಲ್ಲಿ ಪುನೀತ್ ರಾಜಕುಮಾರ್ ರವರ ವಾಯ್ಸ್ ಇದೆ ಎಂದರೆ ಖಂಡಿತವಾಗಿಯು ಸಿನಿಮಾಗೆ ಮೈಲೇಜ್ ಸಿಗುತ್ತದೆ ಎಂಬುದಾಗಿ ಭಾವಿಸುತ್ತಿದ್ದರು. ಹೀಗಾಗಿ ಎಲ್ಲರ ಸಿನಿಮಾದಲ್ಲಿ ಪುನೀತ್ ರಾಜಕುಮಾರ್ ಅವರು ಹಾಡಿ ಬರುತ್ತಿದ್ದರು. ಆದರೆ ಅದರಲ್ಲಿ ಬಂದಂತಹ ಹಣವನ್ನು ಮಾತ್ರ ತಾವು ಸ್ವಂತಕ್ಕಾಗಿ ಬಳಸಿಕೊಳ್ಳದೆ ಅನಾಥಾಶ್ರಮ ಹಾಗೂ ವೃದ್ಧಾಶ್ರಮ ಕ್ಕಾಗಿ ವಿನಿಯೋಗಿಸುತ್ತಿದ್ದರು. ಇದಕ್ಕಾಗಿ ಅವರನ್ನು ಬಂಗಾರದ ಮನುಷ್ಯ ಎಂಬುದಾಗಿ ಕರೆಯುತ್ತಿದ್ದರು. ಎಂತಹ ಒಳ್ಳೆಯ ಮನಸ್ಸಿನ ಪುನೀತ್ ರಾಜಕುಮಾರ್ ಅವರು ನಮ್ಮೊಂದಿಗೆ ಇಲ್ಲ ಎನ್ನುವುದೇ ವಿಷಾದನೀಯ.