ಸದಾ ಕೈಯಲ್ಲಿ ಹಿಡಿದಿರುವ ದುಬಾರಿ ಬ್ಯಾಗ್ ನಲ್ಲಿ,ಕಿರುತೆರೆಯ ನಟಿ ಕಾವ್ಯಾ ಗೌಡ ಏನೆಲ್ಲಾ ಇಟ್ಟಿರುತ್ತಾರೆ ಗೊತ್ತೇ?? ಅವರೇ ಹೇಳಿದ್ದಾರೆ.

172

ನಮಸ್ಕಾರ ಸ್ನೇಹಿತರೇ, ಕಿರುತೆರೆ ಜನಪ್ರಿಯ ನಟಿ ಕಾವ್ಯಾ ಗೌಡ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಹಲವಾರು ಸ್ಥಳಗಳಿಗೆ ಭೇಟಿ ನಿಡಿ ಎಂಜಾಯ್ ಮಾಡಿದ ಫೋಟೋ ವಿಡಿಯೋ ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಸದ್ಯ ಆಭರಣ ವಿನ್ಯಾಸ ತರಬೇತಿಯಲ್ಲಿ ಬ್ಯುಸಿಯಾಗಿರುವ ಕಾವ್ಯಾ ತಮ್ಮದೇ ಆದ ಯುಟ್ಯೂಬ್‌ ಚಾನೆಲ್ ನ್ನು ಆರಂಭಿಸಿದ್ದಾರೆ. ಈ ಹಿಂದಿನ ವಿಡಿಯೋ ಒಂದರಲ್ಲಿ ತನ್ನ ಮೊಬೈಲ್‌ನಲ್ಲಿ ಏನಿದೆ ಎಂಬುದನ್ನು ರಿವೀಲ್ ಮಾಡಿದ್ದು ವೈರಲ್ ಆಗಿತ್ತು.

ಸಾಮಾನ್ಯವಾಗಿ ಕಾವ್ಯಾ ಗೌಡ ಅವರ ಯಾವುದೇ ಫೋಟೊ ನೋಡಿ ಅವುಗಳಲ್ಲಿ ಅವರ ಕೈನಲ್ಲಿ ವಿಭಿನ್ನವಾದ ಬ್ಯಾಗ್‌ಗಳು ಇರುತ್ತವೆ. ಇವೆಲ್ಲಾ ಅಂದಾಜು 1 ಲಕ್ಷ ರೂಪಾಯಿಗೂ ಹೆಚ್ಚು ಬೆಲೆಯ ಬ್ಯಾಗ್‌ಗಳು. ‘ನಾನು ಏನೇ ಶೂಟಿಂಗ್ ಮಾಡಿದರೂ ಅಥವಾ ಜಾಹೀರಾತುಗಳಲ್ಲಿ ಕಾಣಿಸಿಕೊಂಡರೂ ಆ ಹಣದಲ್ಲಿ ಮೊದಲು ಖರೀದಿ ಮಾಡುವುದು ಬ್ಯಾಗ್‌ಗಳನ್ನು. ಎಂದು ಒಂದು ಬ್ಯಾಗ್ ಬಗ್ಗೆ ತಮ್ಮ ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ. ತಮ್ಮ ಕೈನಲ್ಲಿ ದೊಡ್ದದಾದ ಗುಚಿ ಬ್ಯಾಗ್ ಹಿಡಿದು ಅದರಲ್ಲಿ ಏನೆಲ್ಲಾ ವಸ್ತುಗಳನ್ನು, ಎಷ್ಟು ವಸ್ತುಗಳನ್ನು ಇಟ್ಟುಕೊಳ್ಳಬಹುದು ಎಂದು ತಿಳಿಸಿದ್ದಾರೆ.

ಕಾವ್ಯಾ ಗೌಡ ತಮ್ಮ ಬ್ಯಾಗ್ ನಲ್ಲಿ ಇಟ್ಟುಕೊಳ್ಳುವ ವಸ್ತುಗಳನ್ನು ಒಂದೊಂದಾಗೇ ತೆಗೆದು ತೋರಿಸುತ್ತಾ ವಿವರಿಸಿದ್ಡಾರೆ. ಮೊದಲನೆಯದಾಗಿ ಬುಕ್. ನನ್ನ ಆಸೆಗಳು ನನ್ನ ದಿನಚರಿಗಳನ್ನು ನಾನು ಈ ಬುಕ್‌ನಲ್ಲಿ ಬರೆಯುತ್ತೇನೆ ಎಂದು ಹೇಳಿ ಜೊತೆಗೆ ಒಂದು ಕಥೆ ಪುಸ್ತಕವನ್ನೂ ಇಟ್ಟುಕೊಂಡಿದ್ದಾರೆ. ಇನ್ನು ಪರ್ಸ್‌. ಕಾವ್ಯಾ ಗೌಡ ಅವರ ಪರ್ಸ್ ನಲ್ಲಿ ಕಾರ್ಡ್‌ಗಳು, ಸಾಯಿ ರಾಮ್ ಫೋಟೋ, ತನ್ನ ಅಕ್ಕನ ಜೊತೆ ತೆಗೆದುಕೊಂಡಿರುವ ಮೂರು ವರ್ಷದ ಹಿಂದಿರುವ ಫೋಟೋ ಇಟ್ಟುಕೊಂಡಿದ್ದಾರೆ. ಅಲ್ಲದೇ ಬೆಳ್ಳಿ ನಾಣ್ಯವನ್ನು ಇಟ್ಟುಕೊಂಡಿದ್ದಾರೆ. ಕಳೆದ 10 ವರ್ಷಗಳಿಂದ ಅವರ ಹತ್ತಿರ ಇದ್ಯಂತೆ ಈ ನಾಣ್ಯ. ಇದರ ಜೊತೆಗೆ ತಮ್ಮ ಬ್ಯಾಗ್ ನಲ್ಲಿ ಸದಾ ಜೊತೆಗಿಟ್ಟುಕೊಳ್ಳುವ ಸನ್‌ಗ್ಲಾಸ್‌, ಫೋನ್‌ ಮತ್ತು ಪವರ್ ಬ್ಯಾಂಕ್, ಗ್ಲೋ ಮಿಸ್ಟ್‌, ಹ್ಯಾಂಡ್ ಸ್ಯಾನಿಟೈಜರ್ ಮತ್ತು ಮಾಸ್ಕ್, ವೆಟ್‌ ಪೇಪರ್, ನೇಲ್ ರಿಮೂವರ್, ಬಿಂದಿ ಹೀಗೆ ಹಲವು ವಸ್ತುಗಳನ್ನು ತಮ್ಮ ಬ್ಯಾಗ್ ನಲ್ಲಿ ತುಂಬಿಸಿಕೊಂಡು ತಿರುಗಾಡುತ್ಟಾರೆ ಕಾವ್ಯಾ. ಸದ್ಯ ಅವರ ಈ ಬ್ಯಾಗ್ ವಿಡಿಯೋ ತುಂಬಾನೇ ಲಕ್ಸ್ ಗಿಟ್ಟಿಸಿಕೊಂಡಿದೆ.