ದೊರೆಸಾನಿ ಪ್ರತಿಮರಾವರಿಗೆ ಎಲ್ಲಿ ಹೋದರು ಅದೊಂದೇ ಸಮಯಸ್ಯೆಯಂತೆ, ಅದಕ್ಕಾಗಿಯೇ ಎಷ್ಟೆಲ್ಲ ಕಷ್ಟಪಟ್ಟು ಕೆಲಸ ಮಾಡುತ್ತಾರಂತೆ ಗೊತ್ತೇ??

612

ನಮಸ್ಕಾರ ಸ್ನೇಹಿತರೇ, ಇತ್ತೀಚಿಗೆ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಹೊಸ ಕಲಾವಿದರ ಸಂಖ್ಯೆ ಹೆಚ್ಚಾಗುತ್ತಿದು, ಒಬ್ಬೊಬ್ಬರೂ ಡಿಫರೆಂಟ್ ಕ್ಯಾರೆಕ್ಟರ್ ಹೊಂದಿರುತ್ತಾರೆ. ಹಾಗಾಗಿ ದಿನಕ್ಕೆ ಒಬ್ಬೊಬ್ಬರ ಬಗ್ಗೆ ಮಾತಾಡಿದ್ರೂ ವರ್ಷ ಸಾಕಾಗಲ್ಲ. ಇವತ್ತು ನಾವೊಂದು ಕ್ಯೂಟ್ ನಟಿಯ ಬಗ್ಗೆ ಹೇಳ್ತೀವಿ ಕೇಳಿ. ಆಕೆಗೆ ಆಕೆ ಸ್ವಲ್ಪ ಕುಳ್ಳಗಿದ್ದಾಳೆ ಎನ್ನೋದೆ ಸಮಸ್ಯೆಯಂತೆ. ಸ್ನೇಹಿತರೆ, ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ದೊರೆಸಾನಿ ಧಾರಾವಾಹಿಯನ್ನ ನೀವೂ ನೋಡಿರಬಹುದು. ತುಂಬಾನೇ ವಿಭಿನ್ನವಾಗಿ ಮೂಡಿ ಬರ್ತಾ ಇರೋ ಸೀರಿಯಲ್ ಇದು.

ಆನಂದ್ ಚಿಕ್ಕ ವಯಸ್ಸಿಗೇ ಕೋಟಿ ಸಂಪಾದನೆ ಮಾಡಿರುವ ಹುಡುಗ, ಅಪ್ಪ ಅಮ್ಮ ಯಾರೂ ಇಲ್ಲ. ಆದರೆ ಅವರಷ್ಟೇ ಪ್ರೀತಿ ಕೊಡುತ್ತಿರುವ ಮಿಡಲ್ ಕ್ಲಾಸ್ ಸ್ನೇಹಿತೆ ದೀಪಿಕಾನೇ ಆತನ ಜೀವ ಸಖಿ. ಆದರೆ ದೀಪಿಕಾ ತಂದೆ ಪುರುಷೋತ್ತಮ್ ಕೆಲಸ ಮಾಡುತ್ತಿರುವುದು ಆನಂದ್‌ ಕಂಪನಿಯಲ್ಲಿಯೇ ಎಂದು ಯಾರಿಗೂ ಗೊತ್ತಿಲ್ಲ. ಏಕೆಂದರೆ ದೀಪಿಕಾ ಸ್ನೇಹ ಉಳಿಸಿಕೊಳ್ಳಲು ಆನಂದ್ ನಾನೊಬ್ಬ ಬಡವ. ನನ್ನ ಬಳಿ ಕೆಲಸವಿಲ್ಲ ಎಂದು ಹೇಳಿಕೊಂಡು ಕಾರ್ ಡ್ರೈವಿಂಗ್ ಮಾಡುತ್ತಿರುತ್ತಾನೆ. ಪುರುಷೋತ್ತಮ್‌ಗೆ ಮೂರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ. ಈ ನಾಲ್ವರಲ್ಲಿ ಕಿರಿಯವಳೇ ಗೌತಮಿ ಕಾಲೇಜ್, ಎಕ್ಸಾಂ, ಸಿನಿಮಾ ಆಡಿಷನ್‌ ಅಂತ ಚಿಕ್ಕ ವಯಸ್ಸಿಗೆ ಸಖತ್ ಬ್ಯುಸಿಯಾಗಿರುವ ಹುಡುಗಿ. ಖಾಸಗಿ ಸಂದರ್ಶನದಲ್ಲಿ ಮೊದಲ ಬಾರಿ ತಮ್ಮ ಪರಿಚಯ ಮಾಡಿಕೊಂಡಿದ್ದಾರೆ.

ಗೌತಮಿ ಪಾತ್ರ ನಿಭಾಯಿಸುತ್ತಿರುವ ಪ್ರತಿಮಾ, ತನನ್ನನು ಮೊದಲು ಟಿವಿ ಪರದೆಯ ಮೇಲೆ ಎಲ್ಲರೂ ಮೆಚ್ಚಿಕೊಂಡಿದ್ದಕ್ಕೆ ಖುಷಿಯಾಗಿದ್ದಾರೆ. ಅವರ ಮನೆಯವರ ಫೂಲ್ ಸಪೋರ್ಟ್ ಅವರಿಗೆದೆ. ಇನ್ನು ಅವರ ಸ್ನೇಹಿತರೂ ಕೂಡ ನೀನು ಬಹಳ ಚೆನ್ನಾಗಿ ಕಾಣಿಸುತ್ತಿ, ಈ ಧಾರಾವಾಹಿಯಲ್ಲಿ ಎಂದು ಶಬ್ಭಾಷ್ ಎಂದಿದ್ದಾರಂತೆ. ಇನ್ನು ತಾನು ಕುಳ್ಳಿ ಅಂತ ಎಲ್ಲರೂ ಛೇಡಿಸುತ್ತಾರೆ ಎಂದಿರುವ ಪ್ರತಿಮಾ ಪ್ರಥಮ ಪಿಯೂಸಿ ವಿದ್ಯಾರ್ಥಿನಿ. ಆದ್ರೆ ಎಲ್ಲರೂ 7 ನೇ ಕ್ಲಾಸ್ ನೀನು ಎಂದು ತಮಾಷೆ ಆಡ್ತಾರಂತೆ. ಹಾಗಾಗಿ ಸ್ವಿಮ್ಮಿಂಗ್, ಸ್ಕಿಪ್ಪಿಂಗ್ ಅಂತ ಉದ್ದ ಆಗಲು ಹೊರಟಿದ್ದಾಳೆ ಪುಟ್ಟ ಪ್ರತಿಮಾ. ಇನ್ನು ಪ್ರತಿಮಾಗೆ ಕಾಲೇಜ್ ಗೂ ಹೋಗಿ ನಟನೆಯನ್ನೂ ಮಾಡುವುದಕ್ಕೆ ಕಷ್ಟ ಎನಿಸಿದ್ದರೂ ಅವರ ಅಕ್ಕ ದಿವ್ಯಾಳ ಸಹಾಯದಿಂದ ಎಲ್ಲವನ್ನೂ ಮ್ಯಾನೇಜ್ ಮಾಡಲು ಸಾಧ್ಯವಾಯಿತಂತೆ. ಹಾಗೆಯೇ ಇದೀಗ ಅಪ್ಪ ಅಮ್ಮನ ಹತ್ರ ಪಾಕೇಟ್ ಮನಿ ಇಸ್ಕೋತಿಲ್ಲ, ಸ್ವಂತ ಹಣದಲ್ಲಿಯೇ ಖರ್ಚು ನಿಭಾಯಿಸುತ್ತೇನೆ ಅನ್ನೋ ತೃಪ್ತಿ ಇದೆ ಪ್ರತಿಮಾ ಮುಖದಲ್ಲಿ!