ರಶ್ಮಿಕಾ ರವರನ್ನು ಮೀರಿಸಿ ನ್ಯಾಷನಲ್ ಕ್ರಶ್ ಆಗುವತ್ತ ಹೆಜ್ಜೆ ಇತ್ತ ಮತ್ತೊಬ್ಬರು ಅಪ್ಪಟ ಕನ್ನಡತಿ, ಕನ್ನಡ ಮರೆತ ರಶ್ಮಿಕಾಗೆ ಕನ್ನಡತಿ ಇಂದಲೇ ಶಾಕ್??

221

ನಮಸ್ಕಾರ ಸ್ನೇಹಿತರೇ ಸದ್ಯ ಸೋಶಿಯಲ್ ಮೀಡಿಯಾಗಳಲ್ಲಿ ಹೆಚ್ಚು ಸುದ್ದಿಯಾಗುತ್ತಿರುವುದು ನ್ಯಾಶನಲ್ ಕ್ರಶ್. ಎರಡು ವರ್ಷಗಳಿಂದ ಹಿಂದೆ ಕೇರಳದ ಹುಡುಗಿ ಕಣ್ಸನ್ನೆ ಮಾಡಿ ದಿನ ಬೆಳಗಾಗುವುದರಲ್ಲಿ ನ್ಯಾಶನಲ್ ಕ್ರಶ್ ಆಗಿದ್ದಳು. ಇನ್ನು ಕೆಲವೇ ದಿನಗಳ ಹಿಂದೆ ಕನ್ನಡತಿ, ಕೊಡಗಿನ ಕುವರಿ ರಶ್ಮಿಕಾ ಮಂದಣ್ಣರನ್ನು ಮೀಡಿಯಾಗಳು ನ್ಯಾಶನಲ್ ಕ್ರಶ್ ಎಂದು ಕರೆದಿದ್ದವು.

ಈಗ ರಶ್ಮಿಕಾ ಮಂದಣ್ಣನವರಿಗೆ ಸೆಡ್ಡು ಹೊಡೆದು, ಮತ್ತೊಬ್ಬ ಕನ್ನಡತಿ ಈಗ ಇಂಟರನೆಟ್ ನಲ್ಲಿ ವೈರಲ್ ಆಗುತ್ತಿದ್ದು, ನ್ಯಾಷನಲ್ ಕ್ರಶ್ ಎಂದು ಕರೆಸಿಕೊಳ್ಳುತ್ತಿದ್ದಾರೆ. ಅವರು ಯಾರು, ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ. ಆ ನಟಿಯ ಹೆಸರು ಆದ್ಯಾ ಆನಂದ್‌. ಇನ್ನು ಸಹ ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿಲ್ಲ. ಆದರೇ ನೆಟ್ ಫ್ಲಿಕ್ಸನಲ್ಲಿ ಪ್ರಸಾರವಾಗಿದ್ದ ಬಾಂಬೆ ಬೇಗಮ್ಸ್ ಎಂಬ ಸರಣಿಯಲ್ಲಿ ಅಭಿನಯಿಸಿ ಎಲ್ಲರ ಗಮನ ಸೆಳೆದಿದ್ದರು.

ಇದೀಗ ಅಮೇಜಾನ್ ಟಿವಿಯಲ್ಲಿ ಪ್ರಸಾರವಾಗುತ್ತಿರುವ ಕ್ರಷ್ಡ್ ಸೀರಿಸ್ ನಲ್ಲಿ ಮುಖ್ಯ ಪಾತ್ರ ನಿರ್ವಹಿಸುವ ಮೂಲಕ ಮತ್ತೊಮ್ಮೆ ಎಲ್ಲರ ಗಮನಸೆಳೆದಿದ್ದಾರೆ. ಜನ ಆದ್ಯಾ ಪಾತ್ರವನ್ನು ಮೆಚ್ಚಿಕೊಂಡಿದ್ದಾರೆ. ಹಾಗಾಗಿ ಅವರ ಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಸಂತಸ ಹಂಚಿಕೊಂಡಿರುವ ಆದ್ಯಾ, ಜನರ ಪ್ರೀತಿ ನನಗೆ ಬಹಳ ಖುಷಿ ತಂದಿದೆ. ನನಗೆ ಈ ಅವಕಾಶ ನೀಡಿರುವ ಅಮೇಜಾನ್ ಟಿವಿಗೆ ಧನ್ಯವಾದ ಹೇಳುತ್ತೇನೆ ಎಂದು ಹೇಳಿದರು. ಒಟ್ಟಿನಲ್ಲಿ ಕನ್ನಡತಿಯ ಪಟ್ಟವನ್ನು ಮತ್ತೊಬ್ಬ ಕನ್ನಡತಿ ಕಿತ್ತುಕೊಳ್ಳುತ್ತಿರುವುದು, ಕನ್ನಡಿಗರ ಪಾಲಿಗೆ ಒಳ್ಳೆಯ ಸುದ್ದಿ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.