ವೈರಲ್ ಆಗುತ್ತಿದೆ ತಬು ಹೇಳಿಕೆ, ನಾಗಾರ್ಜುನ ಜೊತೆ ನಾನು ಅತ್ಯಮೂಲ್ಯವಾದ ಸಂಬಂಧ ಹೊಂದಿದ್ದೆ ಎಂದು ಹೇಳಿದ್ದು ಯಾಕೆ ಗೊತ್ತೇ??

406

ನಮಸ್ಕಾರ ಸ್ನೇಹಿತರೇ ತೆಲುಗು ಚಿತ್ರರಂಗದ ಸ್ಟಾರ್ ನಟನಾಗಿರುವ ನಾಗಾರ್ಜುನ ರವರ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. 80 ಹಾಗೂ 90ರ ದಶಕದಲ್ಲಿ ತೆಲುಗು ಚಿತ್ರರಂಗದ ಸ್ಟಾರ್ ಬಾಯ್ ಆಗಿ ಮಿಂಚಿ ಮೆರೆದವರು. ಇನ್ನು ಅಂದಿನ ಕಾಲದಲ್ಲಿ ನಾಗಾರ್ಜುನ ಹಾಗೂ ನಟಿ ಟಬು ರವರ ಕಾಂಬಿನೇಷನ್ ಸೂಪರ್ ಹಿಟ್ ಆಗಿತ್ತು. ಅವುಗಳಿಗೆ ಉತ್ತಮ ಉದಾಹರಣೆ ಎಂದರೆ ನಿನ್ನೆ ಪೆಳ್ಳಡತ ಆವಿಡೆ ಮಾ ಆವಡೆ ಸಿಸಿಂದ್ರಿ ಹೀಗೆ ಹತ್ತು ಹಲವಾರು ಸಿನಿಮಾಗಳು. ಇವರ ಕಾಂಬಿನೇಷನ್ ಎಷ್ಟರಮಟ್ಟಿಗೆ ಕ್ಲಿಕ್ ಆಗಿತ್ತು ಎಂದರೆ ಖಂಡಿತವಾಗಿ ಇವರಿಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿಗಳು ಕೂಡ ಅಂದಿನ ಕಾಲದಲ್ಲಿ ಹರಡಿದ್ದವು.

ತೆಲುಗು ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ನಟಿಯರಿಗೂ ಕೂಡ ನಾಗಾರ್ಜುನ ರವರ ಜೊತೆಗೆ ನಟಿಸುವುದು ಅತ್ಯಂತ ಇಷ್ಟವಾದ ಕಾರ್ಯವಾಗಿತ್ತು. ಹಲವಾರು ನಟಿಯರು ಅವರ ಮೇಲೆ ಪ್ರೀತಿಯಲ್ಲಿ ಬಿದ್ದಿದ್ದು ಕೂಡ ಇತ್ತು. ಆದರೆ ಅಂದಿನ ಕಾಲದಲ್ಲಿ ಟಬು ಅವರ ಜೊತೆಗೆ ನಾಗಾರ್ಜುನ ರವರ ಹೆಸರು ದೊಡ್ಡಮಟ್ಟದಲ್ಲಿ ಕೇಳಿಬಂದಿತ್ತು. ಅದಕ್ಕೆ ಹದಿನೈದು ವರ್ಷಗಳ ಹಿಂದೆ ಸಂದರ್ಶನವೊಂದರಲ್ಲಿ ಟಬು ರವರು ಮಾತನಾಡಿರುವ ವಿಡಿಯೋ ಈಗ ಇತ್ತೀಚಿನ ದಿನಗಳಲ್ಲಿ ವೈರಲ್ ಆಗುತ್ತಿದೆ.

ಹಲವಾರು ವರ್ಷಗಳ ಹಿಂದೆ ಹೋಗುವುದಾದರೆ ನಾಗಾರ್ಜುನ ಹಾಗೂ ಟಬು ರವರ ಕೆಮಿಸ್ಟ್ರಿ ಎನ್ನುವುದು ಪರದೆ ಮೇಲೆ ಎಲ್ಲಾ ಅಭಿಮಾನಿಗಳಿಗೂ ಇಷ್ಟವಾಗಿತ್ತು. ಪದೇ ಪದೇ ಸಿನಿಮಾಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಇವರಿಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಇದೇ ಕಾರಣಕ್ಕಾಗಿ ಪರಸ್ಪರ ಹತ್ತು ವರ್ಷಗಳ ಕಾಲ ಒಬ್ಬರನ್ನೊಬ್ಬರು ಡೇಟ್ ಮಾಡುತ್ತಾರೆ. ಅದಾಗಲೇ ನಾಗಾರ್ಜುನ ರವರು ಎರಡನೇ ಮದುವೆಯಾಗಿದ್ದರು. ಹತ್ತುವರ್ಷಗಳ ಡೇಟಿಂಗ್ ನಂತರವೂ ಕೂಡ ಎರಡನೇ ಹೆಂಡತಿಯನ್ನು ಬಿಟ್ಟು ಬರಲು ನಾಗಾರ್ಜುನ ಸಿದ್ಧರಾಗಿರಲಿಲ್ಲ ಎಂಬುದನ್ನು ತಿಳಿದ ಟಬು ಹಾಗೂ ನಾಗಾರ್ಜುನ ಇಬ್ಬರೂ ಕೂಡ ಬೇರೆಯಾಗುತ್ತಾರೆ ಎನ್ನುವ ಸುದ್ದಿ ಇದೆ. ಇದೇ ಕಾರಣಕ್ಕಾಗಿ ಟಬು ಇದುವರೆಗೂ ಕೂಡ ಮದುವೆಯಾಗದೆ ಹಾಗೇ ಉಳಿದುಕೊಂಡಿದ್ದಾರೆ ಎಂಬ ಗಾಳಿಸುದ್ದಿಗಳು ಕೂಡ ಹರಿದಾಡುತ್ತಲೇ ಇದೆ. ಆದರೆ ಹದಿನೈದು ವರ್ಷಗಳ ಹಿಂದೆ ಟಬುರವರು ಮಾತನಾಡಿರುವ ವಿಡಿಯೋ ಒಂದು ಈಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

2007 ರಲ್ಲಿ ಬಾಲಿವುಡ್ ಚಿತ್ರರಂಗದ ಖ್ಯಾತ ನಿರ್ದೇಶಕ ಹಾಗೂ ನಿರ್ಮಾಪಕ ನಾಗಿರುವ ಕರಣ್ ಜೋಹರ್ ಅವರು ನಡೆಸಿಕೊಡುವ ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಟಬು ಅವರು ಕೂಡ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಕರಣ್ ಜೋಹರ್ ರವರು ಟಬು ರವರಿಗೆ ನಾಗಾರ್ಜುನ ಕುರಿತಂತೆ ಪ್ರಶ್ನೆಯನ್ನು ಎಸೆದಿದ್ದರು. ಅದಕ್ಕೆ ಉತ್ತರಿಸುತ್ತಾ ಟಬು ರವರು ನನ್ನ ಹಾಗೂ ನಾಗಾರ್ಜುನ ರವರ ಸಂಬಂಧ ಸಾಕಷ್ಟು ಪವಿತ್ರವಾದದ್ದು. ಅದಕ್ಕೆ ಯಾವುದೇ ಲೇಬಲ್ ಇಲ್ಲ. ಆ ಸಂಬಂಧ ತೀರ ಹತ್ತಿರವಾಗಿದ್ದು ಹಾಗೂ ಅದನ್ನು ಯಾರೂ ಬದಲಾಯಿಸಲು ಸಾಧ್ಯವಿಲ್ಲ ಎಂಬುದಾಗಿ ಹೇಳಿದ್ದಾರೆ.

ಆ ಸಂದರ್ಭದಲ್ಲಿ ನಟಿ ಟಬು ರವರು ಹೈದರಾಬಾದಿಗೆ ಕೂಡ ಶಿಫ್ಟ್ ಆಗಿದ್ದರು. ಇದರ ಕುರಿತಂತೆ ಕೂಡ ಕರಣ್ ಜೋಹರ್ ಪ್ರಶ್ನೆ ಕೇಳುತ್ತಾರೆ. ಈ ಕುರಿತಂತೆ ಮಾಧ್ಯಮಗಳು ಗಾಸಿಪ್ ಮಾಡುತ್ತಲೇ ಇರುತ್ತಾರೆ. ನನಗೆ ಬಾಯ್ ಫ್ರೆಂಡ್ ಇದ್ದಾರೆ ಇಲ್ಲವೋ ಎನ್ನುವುದು ಮಾಧ್ಯಮಗಳಿಗೆ ಬೇಕಾಗಿರುವಂತಹ ವಿಚಾರ. ಬಾಯ್ ಫ್ರೆಂಡ್ ಗಳು ಬಂದು ಹೋಗಬಹುದು ಆದರೆ ನಾಗಾರ್ಜುನ್ ಯಾವಾಗಲೂ ಇದ್ದೇ ಇರುತ್ತಾರೆ ಎಂಬುದಾಗಿ ಹೇಳಿದ್ದರು.

ನಟಿ ಟಬು ರವರ ಕುರಿತಂತೆ ನಾಗಾರ್ಜುನ ರವರು ಕೂಡ ಪ್ರತಿಕ್ರಿಯಿಸಿದ್ದರು. ಟಬು ರವರ ಕುರಿತಂತೆ ಹೇಳುತ್ತಾ ಅವರು ನನ್ನ ಅತ್ಯದ್ಭುತ ಗೆಳತಿ. ಆವಾಗ ನನಗೆ 21 ವರ್ಷ ಅವರಿಗೆ 16 ವರ್ಷ ವಯಸ್ಸು. ಅವರ ಹೆಸರು ಹೇಳಿದಾಗಲೆಲ್ಲ ನನ್ನ ಮುಖದಲ್ಲಿ ನಗು ಖಂಡಿತವಾಗಿ ಮೂಡುತ್ತದೆ ಎಂಬುದಾಗಿ ತಮ್ಮ ವಿಶೇಷವಾದ ಗೆಳತಿ ಟಬು ರವರನ್ನು ನೆನಪಿಸಿಕೊಂಡಿದ್ದರು. ಈ ಗಾಸಿಪ್ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ಕಾಮೆಂಟ್ ಬಾಕ್ಸ್ ನಲ್ಲಿ ಶೇರ್ ಮಾಡಿಕೊಳ್ಳಿ.