ನವೀನ್ ಕುಟುಂಬಕ್ಕೆ ಮಗನನ್ನು ಕಳೆದುಕೊಂಡ ಬೆನ್ನಲ್ಲೇ ಮತ್ತೊಂದು ಅಘಾತ??ಈ ಪರಿಸ್ಥಿತಿ ಯಾರಿಗೂ ಬೇಡ.
ನಮಸ್ಕಾರ ಸ್ನೇಹಿತರೇ ಜಾಗತಿಕವಾಗಿ ರಷ್ಯಾ ಹಾಗೂ ಉಕ್ರೇನ್ ದೇಶಗಳ ನಡುವಿನ ಕದನ ದೊಡ್ಡಮಟ್ಟದ ಕಂಟಕವನ್ನು ಸೃಷ್ಟಿ ಮಾಡಿದೆ. ಈ ಕಾರಣದಿಂದಾಗಿ ನಮ್ಮ ಭಾರತದೇಶ ಅದರಲ್ಲೂ ಕೂಡ ಕನ್ನಡಮೂಲದ ನವೀನ್ ಎನ್ನುವ ವಿದ್ಯಾರ್ಥಿ ಮರಣವನ್ನು ಹೊಂದಿರುವ ವಿಚಾರ ಈಗಾಗಲೇ ನಿಮಗೆಲ್ಲ ತಿಳಿದಿದೆ. 97% ಅಂಕವನ್ನು ಪಿಯುಸಿಯಲ್ಲಿ ಪಡೆದುಕೊಂಡರು ಸಹ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಕಾರಣದಿಂದಾಗಿ ಇಂತಹ ಪ್ರತಿಭಾವಂತ ವಿದ್ಯಾರ್ಥಿ ವೈದ್ಯಕೀಯ ಶಿಕ್ಷಣವನ್ನು ಪೂರೈಸಲು ಉಕ್ರೇನ್ ದೇಶಕ್ಕೆ ಹೋಗುವಂತಾಯಿತು. ಇದೇ ಕಾರಣಕ್ಕಾಗಿ ಇಂದು ಇಂತಹ ಪ್ರತಿಭಾನ್ವಿತ ನಮ್ಮ ಜೊತೆ ಇಲ್ಲ ಎಂದು ಹೇಳಬಹುದಾಗಿದೆ. ಇವುಗಳ ನಡುವೆ ಕೂಡ ನವೀನ ರವರ ಪೋಷಕರಿಗೆ ಹಾಗೂ ಸಹೋದರರಿಗೆ ಮತ್ತೊಂದು ದುಃಖಕರ ವಿಚಾರ ಎದುರಾಗಿದೆ.

ನಮ್ಮ ಭಾರತೀಯ ಶಿಕ್ಷಣ ವ್ಯವಸ್ಥೆಯಲ್ಲಿ ಇಷ್ಟೊಂದು ಅಂಕಗಳನ್ನು ಪಡೆದರು ಕೂಡ ವೈದ್ಯಕೀಯ ಶಿಕ್ಷಣವನ್ನು ಪೂರೈಸಲು ಕೋಟ್ಯಂತರ ರೂಪಾಯಿಗಳನ್ನು ಖರ್ಚು ಮಾಡಬೇಕಾಗಿತ್ತು. ಉಕ್ರೇನ್ ದೇಶದಲ್ಲಿ 25ರಿಂದ 30 ಲಕ್ಷ ರೂಪಾಯಿ ಒಳಗಡೆ ವೈದ್ಯಕೀಯ ಶಿಕ್ಷಣವನ್ನು ಪೂರೈಸುವ ಅವಕಾಶ ಇದ್ದ ಕಾರಣದಿಂದಾಗಿ ನವೀನ್ ಅಲ್ಲಿಯೇ ಶಿಕ್ಷಣವನ್ನು ಪೂರೈಸುವ ಆಸೆಯನ್ನು ವ್ಯಕ್ತಪಡಿಸಿದ್ದನು. ಇದರಿಂದಾಗಿ ನವೀನ ರವರ ತಂದೆ ಸಾಲಸೋಲ ಮಾಡಿ ಊರಿನಲ್ಲಿ ವೈದ್ಯಕೀಯ ಶಿಕ್ಷಣವನ್ನು ಕಲಿಯಲು ಕಳುಹಿಸಿಕೊಡುತ್ತಾರೆ. ತಂದೆ ಹಾಗೂ ಮನೆಯವರ ಆಸೆಯನ್ನು ಪೂರೈಸಲು ವೈದ್ಯಕೀಯ ಶಿಕ್ಷಣವನ್ನು ಕಲಿಯುತ್ತಿರುವ ಹೊತ್ತಲ್ಲೇ ನವೀನ್ ನಮ್ಮನ್ನೆಲ್ಲ ಬಿಟ್ಟು ಅಗಲಿದ್ದಾರೆ. ತಿನ್ನುವ ಸಾಮಾಗ್ರಿಯನ್ನು ತರಲು ಬಂಕರ್ ನಿಂದ ಹೊರಬಂದ ಹೊತ್ತಲ್ಲೇ ನವೀನ್ ಇನ್ನಿಲ್ಲವಾಗಿದ್ದ.
ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾಗಿ ರುವ ಬಸವರಾಜ ಬೊಮ್ಮಾಯಿ ಸೇರಿದಂತೆ ಹಲವಾರು ರಾಜಕೀಯ ಕ್ಷೇತ್ರದ ಮುಖಂಡರು ನವೀನ್ ರವರ ತಂದೆಯಾಗಿರುವ ಶೇಖರ್ ಅವರಿಗೆ ಮಗನನ್ನು ಕಳೆದುಕೊಂಡಿರುವ ಹೊತ್ತಿನಲ್ಲಿ ಸಾಂತ್ವನವನ್ನು ತುಂಬಿ ಕಂಬನಿಯನ್ನು ಮಿಡಿದಿದ್ದಾರೆ. ಈ ಸಂದರ್ಭದಲ್ಲಿ ಶೇಖರ್ ಅವರು ತಮ್ಮ ಮಗನಿಗೆ ಅಂತಹ ಪರಿಸ್ಥಿತಿ ಇನ್ಯಾವ ವಿದ್ಯಾರ್ಥಿಗಳಿಗೂ ಕೂಡ ಆಗದಿರಲಿ ಅವರನ್ನೆಲ್ಲ ಸುರಕ್ಷಿತವಾಗಿ ಕರೆತನ್ನಿ ಎನ್ನುವುದಾಗಿ ಪ್ರಧಾನಿ ಗಳಲ್ಲಿ ಕೋರಿಕೊಂಡಿದ್ದಾರೆ. ಅವರು ಹೇಳುವಂತೆ ನವೀನ್ ಸುರಕ್ಷಿತವಾಗಿ ಪೋಲೆಂಡ್ ರೊಮೇನಿಯಾ ಮೂಲಕ ಬರಬೇಕಿತ್ತಂತೆ. ಆದರೆ ಯಾರ ತಪ್ಪಿನಿಂದಾಗಿ ಆ ಬಂಕರ್ ನಲ್ಲಿ ಉಳಿಯುವಂತಾಯಿತು ಎಂದು ತಿಳಿಯುತ್ತಿಲ್ಲ ಎಂಬುದಾಗಿ ಹೇಳುತ್ತಿದ್ದಾರೆ. ಬಂಕರ್ ನಾ ಒಳಗೂ ಕೂಡ ಉಳಿಯಲಾಗದೇ ಹೊರಗೂ ಕೂಡ ಹೋಗಲಾರದೆ ತತ್ತರಿಸಿದ ಎಂಬುದಾಗಿ ಕೂಡಾ ದುಃಖತಪ್ತರಾಗಿ ಈ ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ.
ನವೀನ ತಂದೆ ಶೇಖರ್ ಗೌಡ ನನ್ನ ಮಗನ ಮರಣಕ್ಕೆ ನಮ್ಮ ದೇಶದ ಶಿಕ್ಷಣ ವ್ಯವಸ್ಥೆಯ ಕಾರಣ ಎಂಬುದಾಗಿ ಹಳಿಯುತ್ತಿದ್ದಾರೆ. ಮಗನನ್ನು ಕಳೆದುಕೊಂಡಿರುವ ದುಃಖದಲ್ಲಿದ್ದ ಪೋಷಕರಿಗೆ ಈಗ ಮತ್ತೊಂದು ದುಃಖ ಎದುರಾಗಿದೆ. ಕೊನೆಪಕ್ಷ ತಮ್ಮ ಮಗನ ಪಾರ್ಥಿವ ಶರೀರವನ್ನು ಆದರೂ ನೋಡುವ ತವಕವನ್ನು ಹೊಂದಿದ್ದರೂ ಆ ಮುಗ್ಧ ಪೋಷಕರು. ಈಗ ಈ ಕುರಿತಂತೆ ಮತ್ತೊಂದು ವಿಚಾರ ಬರಸಿಡಿಲಿನಂತೆ ಬಂದು ಅಪ್ಪಳಿಸಿದೆ.
ಹೌದು ಕೊನೆಯಬಾರಿ ಮಗನ ಪಾರ್ಥಿವ ಶರೀರವನ್ನು ನೋಡುವ ಅವಕಾಶ ಸಿಗುತ್ತದೆ ಎಂಬುದಾಗಿ ಕಾದುಕುಳಿತಿದ್ದ ಪೋಷಕರಿಗೆ ಈಗ ಶಾ’ಕಿಂಗ್ ನ್ಯೂಸ್ ಒಂದು ಸಿಕ್ಕಿದೆ. ಈಗಾಗಲೇ ನವೀನ್ ಇರುವಂತಹ ಸ್ಥಳದಲ್ಲಿ ಸಿಲುಕಿಕೊಂಡಿರುವ ನೂರಾರು ಭಾರತೀಯ ವಿದ್ಯಾರ್ಥಿಗಳನ್ನು ಜೀವಂತವಾಗಿ ಕರೆತರುವುದೇ ದೊಡ್ಡ ಸಾಹಸದ ಕಾರ್ಯವಾಗಿದ್ದು ಇನ್ನು ಮರಣವನ್ನು ಹೊಂದಿರುವ ನವೀನ್ ರವರ ಪಾರ್ಥಿವ ಶರೀರವನ್ನು ತರುವುದು ಕಷ್ಟಕ್ಕೂ ಮಿಗಿಲಾದ ಕಾರ್ಯ ಎಂಬುದಾಗಿ ಕೇಳಿಬರುತ್ತಿದೆ. ಹೀಗಾಗಿ ನವೀನ ರವರ ಪಾರ್ಥಿವ ಶರೀರ ಭಾರತಕ್ಕೆ ಬರಲಿದೆ ಎಂಬ ವಿಚಾರ ಸದ್ಯದ ಮಟ್ಟಿಗೆ ಅತ್ಯಂತ ಕಷ್ಟಕರವಾದ ಕೆಲಸ ಎಂದು ಹೇಳಲಾಗುತ್ತಿದೆ.

ಇತ್ತ ನವೀನ್ ಮನೆಯಲ್ಲಿ ಸಂಬಂಧಿಕರು ಸ್ನೇಹಿತರು ಹಾಗೂ ಊರಿನವರು ನವೀನ್ ರವರ ಫೋಟೋದ ಮೇಲೆ ಪುಷ್ಪಾರ್ಚನೆ ಮಾಡಿ ಹೋಗುತ್ತಿರುವುದು ನಿಜಕ್ಕೂ ಕೂಡ ಕಣ್ಣೀರು ಉಮ್ಮಳಿಸಿ ಬರುವಂತೆ ಮಾಡುತ್ತಿತ್ತು. ಕಡಿಮೆ ಖರ್ಚಿನಲ್ಲಿ ಪದವಿ ಸಿಗುತ್ತದೆಂದು ಪರದೇಶಕ್ಕೆ ಕನಸುಗಳನ್ನು ಕಟ್ಟಿಕೊಂಡು ಓದಲು ಹೋಗಿ ಪ್ರಾಣವನ್ನು ಕಳೆದುಕೊಂಡಿರುವುದು ನಿಜಕ್ಕೂ ಕೂಡ ಬೇಸರದ ಸಂಗತಿ. ಅರಳುವ ಮೊದಲೇ ಪ್ರತಿಭಾವಂತ ನವೀನ್ ಮುದುಡಿ ಹೋಗಿರುವುದು ವಿಷಾದನೀಯ ವಿಚಾರ. ಒಂದು ಲೆಕ್ಕದಲ್ಲಿ ನಮ್ಮ ಭಾರತ ದೇಶದ ಶಿಕ್ಷಣ ವ್ಯವಸ್ಥೆಯ ಇದಕ್ಕೆ ಕಾರಣ ಎಂಬುದಾಗಿ ಹೇಳಲಾಗುತ್ತಿದೆ. ಜಾತಿ ಆಧಾರದಲ್ಲಿ ಸೀಟುಗಳನ್ನು ನೀಡುವ ಬದಲು ಪ್ರತಿಭಾವಂತರಿಗೆ ಮೊದಲ ಆದ್ಯತೆ ನೀಡುವುದು ಉತ್ತಮ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.