ನಟನೊಬ್ಬನ ಕರಾಳ ಮುಖವನ್ನು ತೆರೆದಿಟ್ಟ ಸೂರ್ಯವಂಶ ನಟಿ ಇಶಾ ಕೋಪಿಕರ್, ನಟನ ಬೇಡಿಕೆಗೆ ಒಪ್ಪದೇ ಇದ್ದಾಗ ನಡೆದ್ದಡೇನು ಗೊತ್ತೇ??
ನಮಸ್ಕಾರ ಸ್ನೇಹಿತರೆ, ಈ ನಡುವೆ ಅನೇಕ ನಟಿಯರು ತಮ್ಮ ಜೀವನದಲ್ಲಿ ತಾವು ಎದುರಿಸಿದ ಕಷ್ಟಗಳನ್ನು ಮಾಧ್ಯಮಗಳ ಮುಂದೆ ಬಹಿರಂಗವಾಗಿ ಹೇಳುತ್ತಿದ್ದಾರೆ. ಕಾಸ್ಟಿಂಗ್ ಕೌಚ್‌ನಿಂದಾಗಿ ಎಷ್ಟು ತೊಂದರೆ ಅನುಭವಿಸಿದ್ದೇವೆ ಎಂದು ವಿವರಿಸುತ್ತಿದ್ದಾರೆ. ಅಂತೆಯೇ ಬಾಲಿವುಡ್ ನಟಿ ಇಶಾ ಕೋಪಿಕರ್ ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ತಮ್ಮ ಅನುಭವಗಳನ್ನು ತೆರೆದಿಟ್ಟಿದ್ದಾರೆ. ತನ್ನ ವೃತ್ತಿಜೀವನದ ಆರಂಭದಲ್ಲಿ ತಾನು ಎದುರಿಸಿದ ಕಹಿ ಅನುಭವವನ್ನು ಅವರು ಬಹಿರಂಗಪಡಿಸಿದ್ದಾರೆ.
ಚಂದ್ರಲೇಖಾ ಚಿತ್ರದಲ್ಲಿ ಅಕ್ಕಿನೇನಿ ನಾಗಾರ್ಜುನ ಜೊತೆ ನಟಿಸಿದ್ದ ಇಶಾ ಕೊಪ್ಪಿಕರ್ ಕೂಡ ಕಾಸ್ಟಿಂಗ್ ಕೌಚ್ ಗೆ ಬಲಿಯಾದವರೆ. 90ರ ದಶಕದಲ್ಲಿ ಬಾಲಿವುಡ್‌ನಲ್ಲಿ ಮಿಂಚಿದ್ದ ಈ ಬ್ಯೂಟಿ ಸ್ಟಾರ್ ಸದ್ಯ ವೆಬ್ ಸೀರೀಸ್ ನಲಿ ಬ್ಯುಸಿಯಾಗಿದ್ದಾರೆ. ಈ ಸಂದರ್ಭದಲ್ಲಿ ಇಶಾ ತಮ್ಮ ಚಿತ್ರರಂಗದ ಆರಂಭದಲ್ಲಿ ಎದುರಿಸಿದ ಕಹಿ ಅನುಭವಗಳನ್ನು ನೆನಪಿಸಿಕೊಂಡರು.

’ನಮ್ಮ ಕುಟುಂಬದ ಬಹುತೇಕರು ವೈದ್ಯರು. ಆದರೆ ನನ್ನ ಕಾಲೇಜು ದಿನಗಳಲ್ಲಿ ನಾನು ಪಾಕೆಟ್ ಮನಿಗಾಗಿ ಮಾಡೆಲಿಂಗ್ ಮಾಡುತ್ತಿದ್ದೆ. ಅದೇ ಸಮಯದಲ್ಲಿ ಸಿನಿಮಾ ಅವಕಾಶಗಳೂ ಕೂಡ ಬರಲು ಶುರುವಾಯ್ತು. ಈಗಷ್ಟೇ ವೃತ್ತಿ ಜೀವನಕ್ಕೆ ತೆರೆದುಕೊಳ್ಳುತ್ತಿದ್ದ ನನಗೆ ನಿರ್ಮಾಪಕರೊಬ್ಬರಿಂದ ನನಗೆ ಕರೆ ಬಂತು. ‘ನಾವು ನಿರ್ಮಿಸುತ್ತಿರುವ ಚಿತ್ರದಲ್ಲಿ ನಿಮ್ಮನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದೇವೆ. ನೀವು ನಮ್ಮ ನಾಯಕನಿಗೆ ನೀವು ತುಂಬಾ ಇಷ್ಟ೦ವಾಗಿದ್ದೀರಿ. ಸಾಧ್ಯವಾದರೆ ಒಮ್ಮೆ ಅವರನ್ನು ಒಬ್ಬರೇ ಹೋಗಿ ಭೇಟಿ ಮಾಡಿ’ ಎಂದರು.
ಆದರೆ ಯಾಕೆ ಹೀಗೆ ಒಬ್ಬಳೇ ಬರ ಹೇಳುತ್ತಿದ್ದಾರೆ ಎಂದು ಅನುಮಾನಗೊಂಡು ಹಿರೋಗೆ ಕರೆ ಮಾಡಿದರೆ ಆತನೂ ಒಬ್ಬಳೇ ಬರುವಂತೆ ಹೇಳಿದ. ಇದರಿಂದ ಅವರ ಉದ್ದೇಶ ಅರ್ಥವಾಗಿ ಆ ಜಾಗಕ್ಕೆ ಇಶಾ ಹೋಗಿಲ್ಲ. ತನು ಹೋಗದೇ ಇರುವ ಕಾರಣದಿಂದ ಚಿತ್ರದಿಂದ ತನ್ನನ್ನು ತೆಗೆದು ಹಾಕಿದ್ದರು ಎಂದು ಇಶಾ ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಆದ್ರೆ ಇಶಾ ಹೇಳಿದ ಘಟನೆಯ ಹಿರೋ ಯಾರು ಅನ್ನೋದು ಮತ್ರ ಬಹಿರಂಗವಾಗಿಲ್ಲ.ಇಶಾ ಕೋಪಿಕರ್ ‘ಏಕ್ ಥಾ ದಿಲ್ ಏಕ್ ಏಕ್ ಥಾ ಧಡ್ಕನ್’ ಸಿನಿಮಾದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟರು. ಆ ನಂತರ ಬಿಟೌನ್‌ನಲ್ಲಿ ಜನಪ್ರಿಯತೆ ಗಳಿಸಿ, ಬ್ಯಾಕ್ ಟು ಬ್ಯಾಕ್ ಅವಕಾಶಗಳನ್ನು ಪಡೆದುಕೊಂಡರು. ಅವಕಾಶ ಸಿಕ್ಕಾಗ ಟಾಲಿವುಡ್ ಗೂ ಎಂಟ್ರಿಕೊಟ್ಟು ‘ಚಂದ್ರಲೇಖ’ ಸಿನಿಮಾದಲ್ಲಿ ನಾಗಾರ್ಜುನ ಅವರ ಜೋಡಿಯಗಿ ನಟಿಸಿ ತೆಲುಗು ಪ್ರೇಕ್ಷಕರಿಗೂ ಹತ್ತಿರವಾದರು.