ಬಾಯಿ ಬಿಟ್ಟು ಹೇಳದೆ ಇದ್ದರೂ ಪ್ರತಿ ಮಹಿಳೆ ಮದುವೆಯಾದ ಬಳಿಕ ತನ್ನ ಗಂಡನಿಂದ ಈ 3 ವಿಚಾರಗಳನ್ನು ಬಯಸುತ್ತಾರೆ, ಯಾವ್ಯಾವು ಗೊತ್ತೇ??

19,343

ನಮಸ್ಕಾರ ಸ್ನೇಹಿತರೇ ನಮ್ಮ ಭಾರತೀಯ ಸಂಪ್ರದಾಯದಲ್ಲಿ ಮದುವೆಗೆ ಸಾಕಷ್ಟು ಮಹತ್ವ ಹಾಗೂ ಪವಿತ್ರವಾದಂತಹ ಸ್ಥಾನವಿದೆ. ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತದೆ ಎಂಬುದಾಗಿ ಕೂಡ ಎಲ್ಲರೂ ಹೇಳುತ್ತಾರೆ. ಹೀಗಾಗಿ ಮದುವೆಯೆನ್ನುವುದು ಎಲ್ಲದಕ್ಕಿಂತ ಪ್ರಮುಖವಾದಂತಹ ಪಾತ್ರವನ್ನು ಜೀವನದಲ್ಲಿ ವಹಿಸಿರುತ್ತದೆ.

ಇದಕ್ಕಾಗಿಯೇ ಮದುವೆ ಸಂದರ್ಭದಲ್ಲಿ ಸಪ್ತಪದಿಯನ್ನು ತುಳೆಯುತ್ತಾರೆ. ಯೌವ್ವನದಿಂದ ಪ್ರಾರಂಭವಾಗಿ 7 ಜನ್ಮಗಳ ವರೆಗೂ ಕೂಡ ಪರಸ್ಪರ ಸಂಗಾತಿಗಳಾಗಿ ಬಾಳೋಣ ಎನ್ನುವ ಶಪಥವನ್ನು ತೊಡುತ್ತಾರೆ. ಮದುವೆ ಎನ್ನುವುದು ಎರಡು ಮನಸ್ಸುಗಳನ್ನು ಒಂದೇ ಪರಿಸ್ಥಿತಿ ಹಾಗೂ ಭಾವನೆಯಲ್ಲಿ ಸುಖಸಂತೋಷದಿಂದ ಜೀವಿಸುವಂತೆ ಮಾಡುತ್ತದೆ.

ಮದುವೆಯಾದ ಮೇಲೆ ಪರಸ್ಪರ ಸಂಗತಿಗಳು ಪರಸ್ಪರ ಸುಖ ಕಷ್ಟಗಳನ್ನು ಅವರಿಗೆ ಏನು ಇಷ್ಟ ಏನು ಕಷ್ಟ ಎನ್ನುವುದನ್ನು ಕೂಡ ತಿಳಿದುಕೊಳ್ಳಲು ಪ್ರಯತ್ನಿಸುತ್ತಾರೆ. ಒಬ್ಬರಿಗೆ ಒಬ್ಬರು ಅನುಸರಿಸಿಕೊಂಡು ಹೊಂದಾಣಿಕೆಯಿಂದ ಬಾಳಿಕೊಂಡು ಹೋಗುವುದೇ ದಾಂಪತ್ಯ ಜೀವನವಾಗಿದೆ. ಇಂದಿನ ಲೇಖನಿಯಲ್ಲಿ ನಾವು ಮದುವೆಯಾದ ನಂತರ ಹೆಂಡತಿಗೆ ತನ್ನ ಸಂಗಾತಿಯಿಂದ ಹಲವಾರು ನಿರೀಕ್ಷೆಗಳಿರುತ್ತವೆ. ಆದರೆ ತಮ್ಮ ಇಚ್ಛೆಗಳ ಕುರಿತಂತೆ ತಮ್ಮ ಸಂಗಾತಿಗೆ ಬಾಯಿ ಬಿಟ್ಟು ಹೇಳುವುದಿಲ್ಲ. ಆದರೆ ಅದರಂತೆ ನಡೆಯಲಿ ಎನ್ನುವ ಇಚ್ಛೆಯನ್ನು ಹೊಂದಿರುತ್ತಾರೆ. ಹಾಗಿದ್ದರೆ ಅವುಗಳು ಯಾವುವು ಎಂಬುದನ್ನು ತಿಳಿಯೋಣ ಬನ್ನಿ.

ಆಸೆಯನ್ನು ಪೂರೈಸುವುದು; ಯಾವತ್ತಾದರೂ ಹೆಂಡತಿ ಯಾವುದಾದರೂ ಆಸೆಯನ್ನು ನಿಮ್ಮ ಬಳಿ ಹೇಳಿಕೊಂಡರೆ ಅದನ್ನು ನಿರ್ಲಕ್ಷಿಸಬೇಡಿ. ಕೊನೆಪಕ್ಷ ಅದು ಎಷ್ಟೇ ಕಷ್ಟವಾದರೂ ಅದನ್ನು ಪೂರೈಸುವ ಪ್ರಯತ್ನವನ್ನಾದರೂ ಮಾಡಬೇಕು. ಆಗಲೇ ನಿಮ್ಮ ದಾಂಪತ್ಯ ಜೀವನದಲ್ಲಿ ನಿಮ್ಮ ಸಂಗಾತಿಗೆ ನಿಮ್ಮ ಕುರಿತಂತೆ ನಂಬಿಕೆ ಹಾಗೂ ವಿಶ್ವಾಸ ಪ್ರೀತಿಗಳು ಹೆಚ್ಚಾಗುತ್ತದೆ. ಒಂದು ದಾಂಪತ್ಯ ಜೀವನ ಚೆನ್ನಾಗಿರಬೇಕೆಂದರೆ ಇಬ್ಬರ ಬೇಡಿಕೆಗಳು ಕೂಡ ಪೂರ್ಣವಾಗಬೇಕು. ಹೀಗಾಗಿ ನಿಮ್ಮ ಹೆಂಡತಿ ಏನನ್ನಾದರೂ ಬಯಸಿದರೆ ಅದನ್ನು ತೆಗೆದು ಕೊಡುವ ಪ್ರಯತ್ನವನ್ನು ಮಾಡಲೇಬೇಕಾಗುತ್ತದೆ. ಇದರಿಂದಾಗಿ ನಿಮ್ಮ ದಾಂಪತ್ಯ ಜೀವನ ಎನ್ನುವುದು ದೀರ್ಘಕಾಲದವರೆಗೆ ಸುಖಶಾಂತಿ ನೆಮ್ಮದಿಯಿಂದ ಸಾಗುತ್ತದೆ.

ನಿಮ್ಮ ಸಂಗಾತಿಗೆ ಸಮಯ ನೀಡಿ; ಇಂದಿನ ಬ್ಯುಸಿ ದುನಿಯಾದಲ್ಲಿ ನಾವು ಕೇವಲ ಹಣವನ್ನು ಗಳಿಸುವ ಕಡೆಗೆ ಗಮನವನ್ನು ನೀಡುತ್ತಿದೆ. ನಮ್ಮ ಸಂಬಂಧಗಳಿಗೆ ಸಮಯ ಅಥವಾ ಗಮನವನ್ನು ನೀಡುವುದನ್ನು ನಾವು ಮರೆತೇಬಿಟ್ಟಿದ್ದೇವೆ. ಇದು ಸಂಬಂಧದಲ್ಲಿ ಬಿರುಕು ಮೂಡಲು ಕಾರಣವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ನಿಮ್ಮ ಸಂಗಾತಿಯನ್ನು ಆಗಾಗ ಬಿಡುವಿನ ಸಮಯ ಸಿಕ್ಕಾಗಲೆಲ್ಲ ವಿಶೇಷವಾದ ಸ್ಥಳಗಳಿಗೆ ಕರೆದುಕೊಂಡು ಹೋಗಿ ಅವರ ಮನಸ್ಸಿನಲ್ಲಿ ವಿಶೇಷ ಭಾವನೆ ಮೂಡಿಸುವಂತೆ ಮಾಡುವುದು ಪ್ರಮುಖವಾಗಿರುತ್ತದೆ. ಇದು ನಿಮ್ಮ ಸಂಬಂಧಕ್ಕೆ ಸಿಹಿಯನ್ನು ನೀಡುತ್ತದೆ. ಪ್ರತಿಯೊಬ್ಬ ಹೆಂಡತಿ ಕೂಡ ತನ್ನ ಗಂಡ ನನಗೆ ಸಮಯವನ್ನು ನೀಡಲಿ ಎಂಬುದಾಗಿ ಕಾಯುತ್ತಿರುತ್ತಾಳೆ. ಒಂದು ವೇಳೆ ಕನಿಷ್ಠಪಕ್ಷ ಈ ಅವಕಾಶ ಸಿಗದಿದ್ದರೆ ಆಕೆ ಕೋಪಗಳು ವುದರಲ್ಲಿ ಯಾವುದೇ ಅನುಮಾನವಿಲ್ಲ.

ಪ್ರಾಮಾಣಿಕರಾಗಿರಬೇಕು; ಪ್ರತಿಯೊಬ್ಬ ಹೆಣ್ಣುಮಗಳು ಕೂಡ ತನ್ನ ಗಂಡ ತನ್ನೊಂದಿಗೆ ಪ್ರಾಮಾಣಿಕನಾಗಿ ಸಂಸಾರ ಮಾಡಿಕೊಂಡಿರಬೇಕು ಎನ್ನುವುದಾಗಿ ಬಯಸುತ್ತಾಳೆ. ಯಾವುದೇ ರಹಸ್ಯಗಳನ್ನು ಮುಚ್ಚಿಟ್ಟುಕೊಳ್ಳದೇ ಎಲ್ಲವನ್ನು ತನ್ನ ಬಳಿ ಶೇರ್ ಮಾಡಿಕೊಳ್ಳಬೇಕು ಎಂಬುದಾಗಿ ಕೂಡ ಅಪೇಕ್ಷಿಸುತ್ತಾಳೆ. ಒಂದು ವೇಳೆ ಗಂಡ ಈ ತರಹ ಮಾಡದೆ ಎಲ್ಲವನ್ನೂ ತನ್ನಲ್ಲಿ ಬಚ್ಚಿಟ್ಟುಕೊಂಡರೆ ಆತನ ಪ್ರಾಮಾಣಿಕತೆ ಮೇಲೆ ಹೆಂಡತಿಗೆ ಅನುಮಾನ ಮೂಡಲು ಪ್ರಾರಂಭವಾಗುತ್ತದೆ. ದಾಂಪತ್ಯ ಜೀವನ ಸುಖಕರವಾಗಿರಲಿ ಸಮಸ್ಯೆಗಳಿಲ್ಲದೆ ಹೋಗಬೇಕೆಂದರೆ ಗಂಡ ತನ್ನ ಹೆಂಡತಿಗೆ ಪ್ರತಿಯೊಂದು ರಹಸ್ಯ ಕಷ್ಟ-ಸುಖಗಳನ್ನು ತಿಳಿಸಲೇ ಬೇಕಾಗುತ್ತದೆ. ಒಂದೋ ಅದಕ್ಕೆ ಪರಿಹಾರ ಸಿಗಬಹುದು ಇಲ್ಲವೇ ಇಬ್ಬರು ಅದನ್ನು ಸಮಭಾಗಗಳಾಗಿ ಪಾಲು ಮಾಡಿಕೊಳ್ಳಬಹುದಾಗಿದೆ. ಇವಿಷ್ಟು ವಿಚಾರಗಳನ್ನು ಮದುವೆಯಾಗಿರುವ ಹೆಣ್ಣು ಮಗಳು ತನ್ನ ಗಂಡನಿಂದ ಅಪೇಕ್ಷಿಸುತ್ತಾಳೆ ಎಂದು ಹೇಳಬಹುದಾಗಿದೆ.