ಅಪ್ಪು ಸರ್ ಗೆ ವಿಷ್ಣುವರ್ಧರವರ ಯಾವ ಸಿನಿಮಾ ಎಂದರೆ ಬಹಳ ಇಷ್ಟ ಅಂತೇ ಗೊತ್ತೇ?? ಅದೊಂದು ಸಿನಿಮಾ ಮೇಲೆ ಯಾಕಷ್ಟು ಪ್ರೀತಿ ಗೊತ್ತೇ??
ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡು ಇಷ್ಟು ತಿಂಗಳುಗಳು ಆಗಿದ್ದರೂ ಕೂಡ ಅವರು ಕನ್ನಡ ಚಿತ್ರರಂಗಕ್ಕೆ ನೀಡಿರುವಂತಹ ಕೊಡುಗೆಗಳು ಇಂದಿಗೂ ಕೂಡ ಅವರನ್ನು ಕನ್ನಡಿಗರ ಮನಸ್ಸಿನಲ್ಲಿ ಅಮರರಾಗಿ ಉಳಿದಿರುವಂತೆ ಮಾಡಿದೆ. ಕೇವಲ ಕನ್ನಡ ಚಿತ್ರರಂಗದಲ್ಲಿ ನಾಯಕನಟನಾಗಿ ಮಾತ್ರವಲ್ಲದೆ ನಿರ್ಮಾಪಕನಾಗಿ ತಮ್ಮ ಪಿಆರ್ ಕೆ ಪ್ರೊಡಕ್ಷನ್ಸ್ ಮೂಲಕ ಹಲವಾರು ಪ್ರತಿಭೆಗಳಿಗೆ ದಾರಿದೀಪವಾಗಿ ಕೂಡ ಸಹಾಯ ಮಾಡಿದ್ದಾರೆ. ಹಾಗಂತ ಸಿಕ್ಕ ಸಿಕ್ಕವರಿಗೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅವಕಾಶ ನೀಡಿಲ್ಲ.
ಕೇವಲ ಪ್ರತಿಭಾನ್ವಿತರಿಗೆ ಹಾಗೂ ಏನಾದರೂ ಸಾಧಿಸಿ ಸಾಧಿಸುತ್ತಾರೆ ಎನ್ನುವ ದೂರಾಲೋಚನೆಯನ್ನು ಹೊಂದಿರುವವರಿಗೆ ಮಾತ್ರ ಅವಕಾಶವನ್ನು ನೀಡಿ ಅವರ ಪ್ರತಿಭೆಗೆ ಬೇಕಾಗಿರುವಂತಹ ವೇದಿಕೆಯನ್ನು ಕಲ್ಪಿಸಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ಇಂತಹ ಪ್ರಯತ್ನವನ್ನು ಮಾಡಿರುವ ಕನ್ನಡದ ಏಕೈಕ ಸೂಪರ್ ಸ್ಟಾರ್ ಪುನೀತ್ ರಾಜಕುಮಾರ್ ರವರು ಎಂದರೆ ತಪ್ಪಾಗಲಾರದು. ಇದುವರೆಗೂ ತಮ್ಮ ಹೋಂ ಪ್ರೊಡಕ್ಷನ್ ನಲ್ಲಿ ಕೇವಲ ಹೊಸ ಪ್ರತಿಭೆಗಳಿಗೆ ಮಾತ್ರ ಅವಕಾಶವನ್ನು ನೀಡುವ ಮೂಲಕ ಕನ್ನಡ ಚಿತ್ರರಂಗ ಹೊಸ ದಿಶೆಯನ್ನು ಕಾಣುವಂತೆ ಮಾಡಿದ್ದಾರೆ. ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಮೊದಲಿನಿಂದಲೂ ಕೂಡ ಅಣ್ಣಾವ್ರ ಹಾಗೂ ಸಾಹಸಸಿಂಹ ವಿಷ್ಣುವರ್ಧನ್ ರವರ ಕುಟುಂಬ ಉತ್ತಮ ಬಾಂಧವ್ಯವನ್ನು ಹೊಂದಿತ್ತು.

ಮೂರನೇ ವ್ಯಕ್ತಿಗಳು ಹೊರಡಿಸಿರುವ ಕೆಲವೊಂದು ಗಾಳಿಸುದ್ದಿ ಗಳಿಂದಾಗಿ ಅವರಿಬ್ಬರ ನಡುವೆ ದ್ವೇ’ಷ ಇದೆ ಎನ್ನುವುದಾಗಿ ಕಲ್ಪಿಸಲಾಗಿತ್ತು. ಅದೇನೇ ಇರಲಿ ಚಿಕ್ಕವಯಸ್ಸಿನಿಂದಲೂ ಕೂಡ ಅಪೂರ್ವ ಅವರಿಗೆ ವಿಷ್ಣುವರ್ಧನ್ ರವರು ನೆಚ್ಚಿನ ನಟನಾಗಿದ್ದರು. ಅವರ ಒಂದು ಸಿನಿಮಾವನ್ನು ಅಪ್ಪು ರವರು ಸಾಕಷ್ಟು ಇಷ್ಟಪಟ್ಟಿದ್ದರು. ಹೌದು ಗೆಳೆಯರೇ ಆ ಚಿತ್ರ ಯಾವುದೆಂದರೆ ಸುನಿಲ್ ದೇಸಾಯಿ ನಿರ್ದೇಶನದ ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ನಿಷ್ಕರ್ಷ ಚಿತ್ರ. ಅಂದಿನ ಕಾಲಕ್ಕೆ ನಿಷ್ಕರ್ಷ ಚಿತ್ರ ವಿಭಿನ್ನ ಕಥಾಹಂದರವನ್ನು ಹೊಂದಿರುವ ಚಿತ್ರವಾಗಿತ್ತು. ಇಂತಹ ಚಿತ್ರಗಳು ಪದೇಪದೇ ಕನ್ನಡ ಚಿತ್ರರಂಗದಲ್ಲಿ ಮೂಡಿಬರಬೇಕು ಎನ್ನುವುದಾಗಿ ಕೂಡ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಅಭಿಪ್ರಾಯಪಟ್ಟಿದ್ದರಂತೆ. ಆದರೆ ಇಂದು ಕನ್ನಡ ಚಿತ್ರರಂಗ ಈ ಎರಡು ಮಾಣಿಕ್ಯಗಳನ್ನು ಕಳೆದುಕೊಂಡು ಬಡವಾಗಿದೆ ಎಂದು ಹೇಳಬಹುದಾಗಿದೆ.