ವಯಸ್ಸು 46 ಆಗಿದ್ದರೂ ಕೂಡ ಸುಮನಾ ರಂಗನಾಥ್ 25ರ ಹರೆಯದ ಹುಡುಗಿಯಂತೆ ಕಾಣಲು ಕಾರಣವೇನು ಗೊತ್ತೇ?? ಅವರೇ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದಲ್ಲಿ ಅದೆಷ್ಟೇ ವಯಸ್ಸಾದರೂ ಕೂಡ ಚಿರಯುವತಿಯತೆ ಕಾಣುವಂತಳ ಹಲವಾರು ನಟಿಯರಿದ್ದಾರೆ. ಆದರೆ ನಾವು ಇಂದು ಹೇಳೋಕೆ ಹೊರಟಿರುವ ನಟಿಗೆ ಸರಿಸಾಟಿ ಯಾರು ಇಲ್ಲ ಎಂದು ನಿಸ್ಸಂಶಯವಾಗಿ ಹೇಳಬಹುದಾಗಿದೆ. ಹಲವಾರು ವರ್ಷಗಳಿಂದ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ಇವರ ಸೌಂದರ್ಯವನ್ನು ನೋಡಿದರೆ ಇವರ ವಯಸ್ಸನ್ನು ಲೆಕ್ಕಾಚಾರ ಹಾಕುವುದು ಕಷ್ಟವಾಗುತ್ತದೆ.
ನೀವು ಈಗಾಗಲೇ ಯಾರೆಂಬುದನ್ನು ಗೆಸ್ ಮಾಡಿರುತ್ತೀರಿ. ನಾವು ಮಾತನಾಡುತ್ತಿರುವುದು ಕನ್ನಡ ಸೇರಿದಂತೆ ಬಹು ಭಾಷೆಗಳಲ್ಲಿ ತಮ್ಮ ಜನಪ್ರಿಯತೆಯನ್ನು ಸೃಷ್ಟಿಸಿಕೊಂಡಿರುವ ನಟಿ ಸುಮನರಂಗನಾಥ್ ರವರ ಕುರಿತಂತೆ. ಇವರಿಗೆ ವಯಸ್ಸು 46 ಆಗಿದ್ದರೂ ಕೂಡ ನೋಡಲು 25ರ ಹರೆಯದ ಯುವತಿಯಂತೆ ಕಾಣಸಿಗುತ್ತಾರೆ. 1974 ರಲ್ಲಿ ಇವರ ಜನಿಸುತ್ತಾರೆ. ಮೊದಲಿಗೆ ಮಾಡೆಲ್ ಆಗಿ ಪರಿಚಿತರಾಗುತ್ತಾರೆ. 1989 ರಲ್ಲಿ ಚಿತ್ರರಂಗಕ್ಕೆ ಕಾಲಿಡುವ ಮೂಲಕ ತಮ್ಮ ಸಿನಿಮಾ ಜರ್ನಿ ಯನ್ನು ಪ್ರಾರಂಭಿಸುತ್ತಾರೆ.

ನಟಿ ಸುಮನ್ ರಂಗನಾಥ್ ರವರು ಚಿತ್ರರಂಗದಲ್ಲಿ ಪ್ರಮುಖವಾಗಿ ಮಿಂಚಿದ್ದು ಕನ್ನಡ ಭಾಷೆಯಲ್ಲಿ ಎಂದರೆ ತಪ್ಪಾಗಲಾರದು. ಕೇವಲ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೆ ತೆಲುಗು ಹಿಂದಿ ಭೋಜಪುರಿ ಭಾಷೆಗಳಲ್ಲಿಯ ಸಿನಿಮಾಗಳಲ್ಲಿ ಕೂಡ ಸುಮನ್ ರಂಗನಾಥ್ ನಟಿಸುವ ಮೂಲಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಅದರಲ್ಲೂ ಕನ್ನಡದಲ್ಲಿ ಅವರು ನಟಿಸಿರುವ ಇತ್ತೀಚಿನ ವರ್ಷಗಳ ಸೂಪರ್ ಹಿಟ್ ಸಿನಿಮಾಗಳೆಂದರೆ ಸಿದ್ಲಿಂಗು ಹಾಗೂ ದಂಡುಪಾಳ್ಯ.
ಇನ್ನು ಸುಮನ ರಂಗನಾಥ್ ರವರ ವೈವಾಹಿಕ ಜೀವನವನ್ನು ನೋಡುವುದಾದರೆ 2007 ರಲ್ಲಿ ಬಂಟಿ ವಾಲಿಯ ಎನ್ನುವ ನಿರ್ಮಾಪಕರನ್ನು ಮದುವೆಯಾಗುತ್ತಾರೆ. ನಂತರ ಪರಸ್ಪರ ವೈಮನಸ್ಸಿನಿಂದ ಆಗಿ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಳ್ಳುತ್ತಾರೆ. ಇತ್ತೀಚಿಗಷ್ಟೇ ಅಂದರೆ 2019 ರಲ್ಲಿ ಕೊಡಗಿನ ಕಾಫಿ ಎಸ್ಟೇಟ್ ಮಾಲೀಕರಾಗಿರುವ ಸಾಜನ್ ಚಿನ್ನಪ್ಪ ರವರನ್ನು ಮದುವೆಯಾಗಿ ಸುಖದಿಂದ ಸಂಸಾರ ನಡೆಸಿಕೊಂಡಿದ್ದಾರೆ.
ಇನ್ನೂ ಲೇಖನಿಯ ಪ್ರಮುಖವಾಗಿರುವ ವಿಚಾರವೆಂದರೆ 46 ವರ್ಷದವರಾಗಿರುವ ಸುಮನ ರಂಗನಾಥ್ ನೋಡೋದಕ್ಕೆ ನಿಜಕ್ಕೂ ಅಷ್ಟು ಸುರಸುಂದರಿ ಆಗಿರುವುದು ಹೇಗೆ ಎಂಬ ಗೊಂದಲ. ಸುಮನ್ ರಂಗನಾಥ್ ಅವರನ್ನು ನೋಡಿ ಅವರು 46 ವರ್ಷದವರು ಎಂದು ಹೇಳಲು ನಿಜಕ್ಕೂ ಖಂಡಿತ ಯಾರಿಗೂ ಸಾಧ್ಯವಿಲ್ಲ. ಯಾಕೆಂದರೆ ಈ ವಯಸ್ಸಿನಲ್ಲಿ ಕೂಡ ತಮ್ಮ ಸೌಂದರ್ಯವನ್ನು ಸಂಭಾಳಿಸಿಕೊಂಡು ಬಂದಿದ್ದಾರೆ. ಈ ಕುರಿತಂತೆ ಸಂದರ್ಶನಕಾರರು ಒಬ್ಬರು ಸಂದರ್ಶನವೊಂದರಲ್ಲಿ ನಿಮ್ಮ ಸೌಂದರ್ಯದ ರಹಸ್ಯ ಏನು ಎಂಬುದರ ಕುರಿತಂತೆ ಕೇಳಿದ್ದಾರೆ. ಅದಕ್ಕೆ ಸ್ವತಃ ಸುಮನ ರಂಗನಾಥ್ ರವರೆ ಈ ಕುರಿತಂತೆ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಹಾಗಿದ್ದರೆ ಅವರು ಏನು ಹೇಳಿದ್ದಾರೆ ಎಂಬುದನ್ನು ತಿಳಿಯೋಣ ಬನ್ನಿ.

ಈ ಪ್ರಶ್ನೆಗೆ ಉತ್ತರ ನೀಡುತ್ತಾ ನಟಿ ಸುಮನ ರಂಗನಾಥ್ ನಾನು ಸರಿಯಾದ ಸಮಯಕ್ಕೆ ಊಟ ಮಾಡುತ್ತೇನೆ ಸರಿಯಾದ ಸಮಯಕ್ಕೆ ನಿದ್ದೆಯನ್ನು ತೆಗೆದುಕೊಳ್ಳುತ್ತೇನೆ ಇಷ್ಟು ಮಾತ್ರವಲ್ಲದೆ ನನ್ನ ಮನಸ್ಸಿನಲ್ಲಿ ಶಾಂತಿಯನ್ನು ಕಾಪಾಡಿ ಕೊಳ್ಳುತ್ತೇನೆ. ದೈಹಿಕ ಆರೋಗ್ಯಕ್ಕಾಗಿ ದೈನಂದಿನ ಯೋಗಾಭ್ಯಾಸವನ್ನು ಕೂಡ ಮಾಡುತ್ತೇನೆ. ಇದರಿಂದಾಗಿ ಆರೋಗ್ಯ ಹಾಗೂ ಮನಸ್ಸು ಎರಡು ಕೂಡ ರಿಲ್ಯಾಕ್ಸ್ ಮೂಡ್ ನಲ್ಲಿ ಇರುತ್ತದೆ. ಇದೇ ನನ್ನ ಸೌಂದರ್ಯದ ಹಿಂದಿನಗುಟ್ಟು ಆಗಿರಬಹುದು ಎಂಬುದಾಗಿ ಹೇಳಿದ್ದಾರೆ. ನೀವು ಸುಮನ ರಂಗನಾಥ್ ಸಿಸಿಎಲ್ ಸಂದರ್ಭದಲ್ಲಿ ಕರ್ನಾಟಕ ಬುಲ್ಡೋಜರ್ಸ್ ತಂಡದ ಪರವಾಗಿ ಸಪೋರ್ಟ್ ಮಾಡುತ್ತಿರುವುದನ್ನು ಕೂಡ ನೀವು ಹಲವಾರು ಬಾರಿ ನೋಡಿರಬಹುದಾಗಿದೆ. ಸುಮನ ರಂಗನಾಥ್ ರವರ ಸೌಂದರ್ಯ ಹಾಗೂ ನಟನೆಯ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.