ಸರಿಗಮಪ ಚಾಂಪಿಯನ್ ಶಿಪ್ ಗೆದ್ದ ತಂಡಕ್ಕೆ ಸಿಕ್ಕಿಲ್ಲ ಯಾವುದೇ ನಗದು ಬಹುಮಾನ; ಮೆಂಟರ್ ಗಳಿಗೂ ಇಲ್ಲ ಬಹುಮಾನದ ಹಣದ ಪಾಲು; ಯಾಕೆ ಗೊತ್ತೇ??

16,651

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಕನ್ನಡ ಕಿರುತೆರೆ ವಾಹಿನಿಯ ಕ್ಷೇತ್ರದಲ್ಲಿ ಎಲ್ಲಾ ವಾಹಿನಿಗಳನ್ನು ಹಿಂದಿಕ್ಕಿ ಮೊದಲನೇ ಸ್ಥಾನದಲ್ಲಿ ಮಿಂಚುತ್ತಿರುವ ವಾಹಿನಿ ಎಂದರೆ ಅದು ಜೀ ಕನ್ನಡ ವಾಹಿನಿ. ಜೀ ಕನ್ನಡ ವಾಹಿನಿ ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಜನಪ್ರಿಯ ಧಾರವಾಹಿಗಳನ್ನು ಹಾಗೂ ವಿಶೇಷ ಕಾರ್ಯಕ್ರಮಗಳನ್ನು ಕೂಡ ಪ್ರಸಾರ ಮಾಡುವಲ್ಲಿ ಮುಂಚೂಣಿಯಲ್ಲಿದೆ. ನಾಲ್ಕೈದು ತಿಂಗಳಿಂದ ಪ್ರಸಾರವಾಗುತ್ತಿದ್ದ ಸರಿಗಮಪ ಚಾಂಪಿಯನ್ ಶಿಪ್ ಕಾರ್ಯಕ್ರಮ ಈಗ ಮುಕ್ತಾಯವಾಗಿದ್ದು ವಿಜೇತರು ಯಾರು ಎನ್ನುವುದು ಕೂಡ ನಿಮಗೆ ತಿಳಿದಿದೆ. ಆದರೆ ಸುದ್ದಿಯಾಗುತ್ತಿರುವುದು ವಿಜೇತ ತಂಡಕ್ಕೆ ಬಹುಮಾನದ ಹಣವನ್ನು ಇನ್ನು ಕೂಡ ನೀಡಿಲ್ಲವಂತೆ. ಅದಕ್ಕೆ ಒಂದು ಕಾರಣ ಕೂಡ ಇದೆ ಹಾಗಿದ್ದರೆ ಏನದು ಎಂಬುದನ್ನು ತಿಳಿಯೋಣ.

ನಿಮಗೆಲ್ಲರಿಗೂ ತಿಳಿದಿರುವಂತೆ ಈ ಬಾರಿಯ ಸರಿಗಮಪ ಚಾಂಪಿಯನ್ ಶಿಪ್ ಫಾರ್ಮಾಟ್ ಅನ್ನು ಹೊಂದಿತ್ತು. ರಾಜೇಶ್ ಕೃಷ್ಣನ್ ಕನ್ನಡ ವಾಹಿನಿಗೆ ಹೋದ ಕಾರಣದಿಂದಾಗಿ ತೀರ್ಪುಗಾರರಾಗಿ ಅರ್ಜುನ್ ಜನ್ಯ ಹಾಗೂ ವಿಜಯಪ್ರಕಾಶ್ ಅವರನ್ನು ನೇಮಿಸಲಾಗಿತ್ತು. ನಿರೂಪಕಿಯಾಗಿ ಅನುಶ್ರೀ ಅವರೇ ಮುಂದುವರೆದಿದ್ದರು. ಮಹಾ ಗುರುಗಳಾಗಿ ಹಂಸಲೇಖರವರು ಕಾಣಿಸಿಕೊಂಡಿದ್ದರು. ಕನ್ನಡ ಚಿತ್ರರಂಗದ ಖ್ಯಾತ ಗಾಯಕರಾಗಿರುವ ನಂದಿತಾ ಹೇಮಂತ್ ಇಂದು ನಾಗರಾಜ್ ಲಕ್ಷ್ಮಿ ನಾಗರಾಜ್ ಸುಚೇತನ್ ಅನುರಾಧ ಭಟ್ ಹೀಗೆ ಆರು ಜನರ ತಂಡ ಗಳನ್ನು ನಿರ್ಮಿಸಿ ಹಿಂದಿನ ಸೀಸನ್ ಗಳಲ್ಲಿ ಹಾಡಿರುವ ಪ್ರತಿಭಾನ್ವಿತ ಗಾಯಕರ 36 ಜನಗಳ ಪೈಕಿಯಲ್ಲಿ ಪ್ರತಿ ತಂಡಕ್ಕೆ ಆರು ಗಾಯಕರು ಸಿಗುವಂತೆ ರಚಿಸಲಾಗಿತ್ತು. 15 ಮಂದಿ ಜ್ಯೂರಿ ಸದಸ್ಯರು ಕೂಡ ಇದ್ದರು.

ನಾಲ್ಕೈದು ತಿಂಗಳ ಸಂಗೀತಸುಧೆಯ ಪಯಣದ ನಂತರ ಮೂರನೇ ಸ್ಥಾನವನ್ನು ಇಂದು ನಾಗರಾಜ್ ತಂಡ ಪಡೆದುಕೊಂಡಿತ್ತು. ಇಂದು ನಾಗರಾಜರವರ ತಂಡಕ್ಕೆ ಟ್ರೋಫಿ ಹಾಗೂ ಸ್ಪಾನ್ಸರ್ ಗಳ ಉಡುಗೊರೆಯನ್ನು ಕೂಡ ನೀಡಲಾಗಿತ್ತು. ಗಾಯಕ ಶ್ರೀಹರ್ಷ ರವರಿಗೆ ಸಿಂಗರ್ ಆಫ್ ದ ಸೀಸನ್ ಪ್ರಶಸ್ತಿಯ ರೂಪವಾಗಿ ಮಾರುತಿ ಸಿಲೋರಿಯ ಕಾರನ್ನು ಕೂಡ ಉಡುಗೊರೆಯಾಗಿ ನೀಡಲಾಗಿತ್ತು. ಕಂಬದ ರಂಗಯ್ಯ ರವರಿಗೆ ಎಂಟರ್ಟೈನರ್ ಆಫ್ ದ ಸೀಸನ್ ಪ್ರಶಸ್ತಿಯನ್ನು ನೀಡಿ ಎರಡು ಲಕ್ಷ ರೂಪಾಯಿ ನಗದು ಬಹುಮಾನವನ್ನು ಕೂಡ ನೀಡಿ ಸನ್ಮಾನಿಸಲಾಗಿತ್ತು.

ಟಾಪ್ 2 ಸ್ಥಾನಗಳಿಗಾಗಿ ನಂದಿತಾ ಹಾಗೂ ಅನುರಾಧ ಭಟ್ ರವರ ತಂಡಗಳ ನಡುವೆ ಪೈಪೋಟಿ ಏರ್ಪಟ್ಟಿತ್ತು. ಕೊನೆಯ ದಿನದ ಹಾಡಿನ ಆಧಾರದಿಂದ ಆಗಿ ಅನುರಾಧ ಭಟ್ ಅವರ ತಂಡ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು. ಎರಡನೇ ಸ್ಥಾನ ದವರಿಗೂ ಕೂಡ ಕಾರ್ಯಕ್ರಮದಿಂದ ಹಲವಾರು ಬಹುಮಾನಗಳು ಇದ್ದವು. ಎರಡನೇ ಸ್ಥಾನವನ್ನು ಪಡೆದ ಅನುರಾಧ ಭಟ್ ಅವರ ತಂಡಕ್ಕೆ 20 ಲಕ್ಷ ರೂಪಾಯಿಗಳ ನಗದು ಬಹುಮಾನವನ್ನು ನೀಡಲಾಯಿತು. ನಗದು ಬಹುಮಾನವನ್ನು ಕೇವಲ ಕಂಠದಲ್ಲಿರುವ ಗಾಯಕರು ಮಾತ್ರ ಹಂಚಿಕೊಳ್ಳ ಬೇಕಾಗಿತ್ತು. ತಂಡದ ಮೆಂಟರ್ ಆಗಿರುವ ಅನುರಾಧಾ ಭಟ್ ರವರಿಗೆ ಟ್ರೋಫಿಯನ್ನು ನೀಡಲಾಗಿದೆ.

ಇನ್ನು ಕಾರ್ಯಕ್ರಮದಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿರುವ ನಂದಿತ ರವರ ತಂಡಕ್ಕೆ ಯಾವುದೇ ನಗದು ಬಹುಮಾನ ದೊರಕಿಲ್ಲ. ಹೌದು ನಗದು ಬಹುಮಾನದ ಬದಲಾಗಿ 30 ಲಕ್ಷ ರೂಪಾಯಿ ಬೆಲೆ ಬಾಳುವ ಭೂಮಿಯನ್ನು ಮದ್ದೂರು ಬಳಿ ಆರು ಅಭ್ಯರ್ಥಿಗಳ ಹೆಸರಿನಲ್ಲಿ ನೀಡಲಾಗಿದೆ. ಇದರಲ್ಲಿ ಮೆಂಟರ್ ನಂದಿತಾ ರವರಿಗೆ ಯಾವುದೇ ಪಾಲು ಇರುವುದಿಲ್ಲ. ನಂದಿತಾ ರವರಿಗೆ ಪುಣ್ಯಕ್ಷೇತ್ರವಾಗಿರುವ ಶೃಂಗೇರಿಯ ಆಶೀರ್ವಾದವನ್ನು ಹೊಂದಿರುವ ವೀಣೆಯ ಮಾದರಿಯ ಪ್ರಶಸ್ತಿಯನ್ನು ನೀಡಲಾಗಿದೆ. ಇಷ್ಟು ಮಾತ್ರವಲ್ಲದೆ ಬೇರೆ ಮೂಲಗಳಿಂದಲೂ ಕೂಡ ನಗದು ಬಹುಮಾನಗಳು ದೊರಕಿವೆ.

ಆರು ತಂಡದ ಪ್ರತಿಯೊಬ್ಬ ಮೆಂಟರ್ ಗಳಿಗೂ ಕೂಡ ಜೀ ಕನ್ನಡ ವಾಹಿನಿ ವಾರದ ಸಂಭಾವನೆ ನೀಡಿದೆ. ವಾರದ ಸಂಭಾವನೆಯನ್ನು ಒಟ್ಟು ಲೆಕ್ಕಚಾರ ಹಾಕಿದರೆ ಖಂಡಿತವಾಗಿ ಇದು ಹತ್ತರಿಂದ ಹದಿನೈದು ಲಕ್ಷ ರೂಪಾಯಿವರೆಗೆ ತಲುಪಬಹುದಾಗಿದೆ ಎಂಬುದಾಗಿ ಲೆಕ್ಕಾಚಾರ ಹಾಕಲಾಗಿದೆ. ಇದನ್ನು ಹೊರತುಪಡಿಸಿ ಮೆಂಟರ್ ಗಳಿಗೆ ಬೇರೆ ಯಾವುದೇ ಬಹುಮಾನವನ್ನು ನೀಡಲಾಗಿಲ್ಲ ಎಂಬುದಾಗಿ ಸ್ಪಷ್ಟವಾಗಿದೆ. ಈ ಕಾರ್ಯಕ್ರಮದ ನಂತರ ಸದ್ಯದಲ್ಲೇ ಎಲ್ಲರೂ ನಿರೀಕ್ಷೆಯಿಂದ ಕಾಯುತ್ತಿರುವ ಡ್ರಾಮಾ ಜೂನಿಯರ್ಸ್ ಕಾರ್ಯಕ್ರಮ ಅತಿ ಶೀಘ್ರದಲ್ಲೇ ಪ್ರಸಾರವಾಗಲಿದೆ ಎಂಬ ಸುದ್ದಿಗಳು ಕೂಡ ಹರಿದಾಡುತ್ತಿವೆ. ನೀವು ಕೂಡ ಈ ಕಾರ್ಯಕ್ರಮಕ್ಕಾಗಿ ಕಾಯುತ್ತಿದ್ದೀರಾ ಎಂಬುದಾದರೆ ತಪ್ಪದೆ ಕಾಮೆಂಟ್ ಬಾಕ್ಸ್ ಮೂಲಕ ಹಂಚಿಕೊಳ್ಳಿ.