ಮೊದಲ ಬಾರಿಗೆ ಮಾವನ ಮನೆಗೆ ಬಂದ ರಣವೀರ್, ಅಲ್ಲಿ ತಿಂದಿದ್ದೇನು ಗೊತ್ತೇ?? ಅಡುಗೆ ರುಚಿಗೆ ನೋಡಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಚಿತ್ರರಂಗದ ಸೆಲೆಬ್ರಿಟಿಗಳು ಸದಾ ಕಾಲ ಚಿತ್ರೀಕರಣದಲ್ಲಿ ಬ್ಯುಸಿಯಾಗಿರುತ್ತಾರೆ. ಒಂದು ವೇಳೆ ಚಿತ್ರೀಕರಣದಿಂದ ಬಿಡುವು ಸಿಕ್ಕಿದರೆ ಮಾಲ್ಡಿವ್ಸ್ ಕಡೆಗೆ ವೆಕೇಶನ್ ಗಾಗಿ ಓಡಿ ಹೋಗುವುದು ನೋಡಿರುತ್ತೀರಿ. ಇಂದು ನಾವು ಹೇಳಹೊರಟಿರುವ ಸೆಲೆಬ್ರಿಟಿ ಕೂಡ ಬಿಡುವಿನ ಸಮಯದಲ್ಲಿ ಎಲ್ಲಿ ಹೋಗಿದ್ದಾರೆ ಎಂಬುದನ್ನು ತಿಳಿಸುತ್ತೇವೆ ಬನ್ನಿ.
ಹೌದು ನಾವು ಮಾತನಾಡುತ್ತಿರುವುದು ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರಾಗಿರುವ ರಣವೀರ್ ಸಿಂಗ್ ರವರ ಕುರಿತಂತೆ. ರಣವೀರ್ ಸಿಂಗ್ ತಮ್ಮ ಚಿತ್ರವಿಚಿತ್ರ ಫ್ಯಾಶನ್ ಸ್ಟೈಲ್ ಗಾಗಿ ಹಾಗೂ ಅಸಾಧಾರಣ ನಟನೆಗಾಗಿ ಜನಪ್ರಿಯರಾಗಿದ್ದಾರೆ. ಇನ್ನು ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಅವರು ಮದುವೆಯಾಗಿರುವುದು ನಮ್ಮ ಕನ್ನಡದ ಕುವರಿ ಆಗಿರುವ ದೀಪಿಕಾ ಪಡುಕೋಣೆ ಅವರನ್ನು. ಇತ್ತೀಚಿಗಷ್ಟೇ 83 ಚಿತ್ರದ ಪ್ರಮೋಷನ್ ಗಾಗಿ ಕೂಡ ರಣವೀರ್ ಸಿಂಗ್ ಅವರು ಬೆಂಗಳೂರಿಗೆ ಬಂದಿದ್ದು ನಾವು ಇಲ್ಲಿ ನೆನಪಿಸಿಕೊಳ್ಳಬಹುದಾಗಿದೆ. ಈಗ ಚಿತ್ರೀಕರಣದಿಂದ ಬಿಡುವು ಮಾಡಿಕೊಂಡು ರಣವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ದಂಪತಿಗಳಿಬ್ಬರು ಕೂಡ ದೀಪಿಕಾ ಪಡುಕೋಣೆ ಅವರ ತವರು ಮನೆಯಾಗಿರುವ ಬೆಂಗಳೂರಿಗೆ ಬಂದಿದ್ದಾರೆ.

ಹೌದು ರಣವೀರ್ ಸಿಂಗ್ ತಮ್ಮ ಮಾವ ಪ್ರಕಾಶ್ ಪಡುಕೋಣೆ ರವರ ಮನೆಗೆ ಬಂದಿರುವುದು ಹಾಗೂ ಇಲ್ಲಿ ಹಲವಾರು ಸಿಹಿತಿನಿಸುಗಳನ್ನು ಎಂಜಾಯ್ ಮಾಡುತ್ತಿರುವುದು ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ತಿಳಿದುಬರುತ್ತದೆ. ಅದೊಂದು ಸಿಹಿ ಪದಾರ್ಥವನ್ನು ಬಹುವಾಗಿ ಮೆಚ್ಚಿಕೊಂಡು ತಮ್ಮ ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಹೌದು ದಕ್ಷಿಣ ಭಾರತದ ಸಿಹಿ ಖಾದ್ಯಗಳಲ್ಲಿ ಜನಪ್ರಿಯವಾಗಿರುವ ಚಿರೋಟಿ ಯನ್ನು ಬಾದಾಮಿ ಹಾಲಿನೊಂದಿಗೆ ಮಿಶ್ರಣ ಮಾಡಿಕೊಂಡು ತಿಂದು ಇದರ ಸವಿಯನ್ನು ಬಹುವಾಗಿ ಮೆಚ್ಚಿಕೊಂಡಿದ್ದಾರೆ ನಟ ರಣವೀರ್ ಸಿಂಗ್. ಈ ಕುರಿತಂತೆ ಸೋಶಿಯಲ್ ಮೀಡಿಯಾದಲ್ಲಿ ಕೂಡ ಹಂಚಿಕೊಂಡಿದ್ದು ಎಲ್ಲರಿಗೆ ರಣವೀರ್ ಸಿಂಗ್ ಆಹಾರ ಪ್ರಿಯ ಎಂಬುದು ಕೂಡ ತಿಳಿದುಬಂದಿದೆ. ರಣವೀರ್ ಸಿಂಗ್ ರವರ ಕುರಿತಂತೆ ನಿಮಗಿರುವಂತಹ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೇ ಶೇರ್ ಮಾಡಿಕೊಳ್ಳಿ.