ತನ್ನ ಎರಡನೇ ಹೆಂಡತಿಯ ಮಗನ ಸೋಲಿಗೆ ಪಣತೊಟ್ಟಿರುವರೇ ನಾಗಾರ್ಜುನ?? ಮಗನ ಎಲ್ಲಾ ಸೋಲಿಗೆ ಅಪ್ಪನೇ ಕಾರಣವಂತೆ ನಡೆದದ್ದೇನು ಗೊತ್ತಾ??

12,489

ನಮಸ್ಕಾರ ಸ್ನೇಹಿತರೇ 90ರ ದಶಕದಲ್ಲಿ ಅಕ್ಕಿನೇನಿ ನಾಗಾರ್ಜುನ ಅವರ ಸಿನಿಮಾಗಳು ಎಂದರೆ ಪ್ರತಿಯೊಬ್ಬ ಪ್ರೇಕ್ಷಕರು ಕೂಡ ಅದರಲ್ಲೂ ಯುವಜನತೆ ಚಿತ್ರವನ್ನು ನೋಡಲು ಮುಗಿಬೀಳುತ್ತಿದ್ದರು. ನಮ್ಮ ಕರ್ನಾಟಕ ರಾಜ್ಯದಲ್ಲಿ ಕೂಡ ಅವರ ಸಿನಿಮಾಗಳು ಹೌಸ್ಫುಲ್ ಪ್ರದರ್ಶನಗಳನ್ನು ಕಾಣುತ್ತಿದ್ದವು. ಇನ್ನು ಈಗಲೂ ಕೂಡ ಅವರು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಹಾಗೂ ದೊಡ್ಡಮಟ್ಟದ ಹೆಸರನ್ನು ಸಂಪಾದಿಸುತ್ತಿದ್ದಾರೆ. ಇನ್ನು ಅವರ ಮಕ್ಕಳಾಗಿರುವ ನಾಗಚೈತನ್ಯ ಹಾಗೂ ಅಖಿಲ್ ಇಬ್ಬರು ಕೂಡ ಸಿನಿಮಾರಂಗದಲ್ಲಿ ಅವರ ನಂತರ ಅವರ ಲೆಗಸಿಯನ್ನು ಮುಂದುವರಿಸಿಕೊಂಡು ಬಂದಿದ್ದಾರೆ.

ನಾಗಚೈತನ್ಯ ರವರು ಕೊಂಚಮಟ್ಟಿಗೆ ತೆಲುಗು ಚಿತ್ರರಂಗದಲ್ಲಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡುವ ಮೂಲಕ ಚಾಲ್ತಿಯಲ್ಲಿದ್ದಾರೆ. ಆದರೆ ನಾಗಾರ್ಜುನ ರವರ ಎರಡನೇ ಮಗನಾಗಿರುವ ಅಖಿಲ ರವರ ಸಿನಿಮಾಗಳು ನಿರೀಕ್ಷಿತ ಮಟ್ಟದ ಪ್ರದರ್ಶನವನ್ನು ಕಾಣುತ್ತಿಲ್ಲ. ಮೊದಲ ಸಿನಿಮಾ ದಿಂದಲೂ ಕೂಡ ಅಖಿಲ್ ಅವರ ಸಿನಿಮಾಗಳು ನೀರಸ ಪ್ರದರ್ಶನವನ್ನು ಕಾಣುತ್ತಿವೆ. ಹೀಗಾಗಿ ಮಗನ ಕರಿಯರ್ ಕುರಿತಂತೆ ನಾಗಾರ್ಜುನ ಸಾಕಷ್ಟು ಚಿಂತಿತರಾದಂತೆ ಕಾಣುತ್ತದೆ. ಪರೋಕ್ಷವಾಗಿ ಮಗನ ಸೋಲಿಗೆ ತಂದೆ ನಾಗಾರ್ಜುನ್ ಅವರೇ ಕಾರಣ ಎಂಬಂತೆ ಕಾಣುತ್ತಿದೆ. ಅರೇ ಇದೇನು ತಂದೆ ತನ್ನ ಮಗನ ಸೋಲಿಗೆ ಯಾಕೆ ಅಪೇಕ್ಷೆ ಪಡಬೇಕು ಎನ್ನುವುದಾಗಿ ನೀವು ಕೇಳಬಹುದು. ಅದಕ್ಕೆ ನಾವು ಪರೋಕ್ಷವಾಗಿ ಎಂದು ಮೊದಲೇ ತಿಳಿಸಿದ್ದು.

ಹೌದು ಈಗಾಗಲೇ ಸೈರಾ ನರಸಿಂಹ ರೆಡ್ಡಿ ಖ್ಯಾತಿಯ ನಿರ್ದೇಶಕ ಸುರೇಂದರ್ ರೆಡ್ಡಿ ನಿರ್ದೇಶನದಲ್ಲಿ ಅಖಿಲ ರವರು ಏಜೆಂಟ್ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಈ ಚಿತ್ರದ ಹಲವಾರು ಭಾಗಗಳನ್ನು ಈಗಾಗಲೇ ಚಿತ್ರೀಕರಿಸಲಾಗಿದ್ದು ಅವುಗಳಲ್ಲಿ ಹಲವಾರು ಬದಲಾವಣೆಗಳನ್ನು ಮಾಡಲು ನಾಗಾರ್ಜುನ ರವರು ನಿರ್ದೇಶಕರಿಗೆ ಒತ್ತಾಯಿಸುತ್ತಿದ್ದಾರೆ. ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಸುರೇಂದ್ರ ರೆಡ್ಡಿ ರವರಿಗೆ ಚಿತ್ರದ ಕಥೆಯ ವಿಚಾರದಲ್ಲಿ ನಾಗಾರ್ಜುನ ರವರು ಮಾಡುತ್ತಿರುವ ಹಸ್ತಕ್ಷೇಪ ಇಷ್ಟವಾಗುತ್ತಿಲ್ಲ. ಹೀಗಾಗಿ ಚಿತ್ರವನ್ನು ಸ್ಥಗಿತಗೊಳಿಸಲಾಗಿದೆ. ಈ ಹಿಂದೆಯೂ ಕೂಡ ಅಖಿಲ್ ರವರ ಹಲವಾರು ಸಿನಿಮಾಗಳಿಗೆ ನಾಗಾರ್ಜುನ ರವರೆ ಹಲವಾರು ಸಲಹೆಗಳನ್ನು ನೀಡಿದ್ದರಂತೆ. ಆದರೆ ಅದ್ಯಾವುದೂ ಕೂಡ ಬಾಕ್ಸ್ ಆಫೀಸ್ನಲ್ಲಿ ಗೆದ್ದಿರಲಿಲ್ಲ. ಹೀಗಾಗಿ ಒಂದರ್ಥದಲ್ಲಿ ಮಗನ ಸೋಲಿಗೆ ತಂದೆಯ ಕಾರಣವಾಗುತ್ತಿದ್ದಾರೆ ಎಂಬುದಾಗಿ ಮಾತುಗಳು ಕೇಳಿಬರುತ್ತಿವೆ.