200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿರುವ ಅಂಬರೀಶ್ ರವರು ಪಡೆದಿರುವ ಸಂಭಾವನೆ ಎಷ್ಟು ಗೊತ್ತೇ?? ಸುಮಲತಾರವರು ಹೇಳಿದ್ದೇನು ಗೊತ್ತೇ??

1,851

ನಮಸ್ಕಾರ ಸ್ನೇಹಿತರೇ ಕನ್ನಡಚಿತ್ರರಂಗದಲ್ಲಿ ಕಲಿಯುಗದ ಕಾರಣ ಎಂದೇ ಖ್ಯಾತರಾಗಿರುವ ಅವರು ನಮ್ಮ ರೆಬೆಲ್ ಸ್ಟಾರ್ ಅಂಬರೀಶ್ ಅವರು. ಇಂದು ಅವರು ನಮ್ಮೊಂದಿಗೆ ಇಲ್ಲದೆ ಇರಬಹುದು ಆದರೆ ಅವರ ಉದಾರತನದ ಹಲವು ಉದಾಹರಣೆಗಳು ಇಂದಿಗೂ ಕೂಡ ಆಗಾಗ ಹಲವಾರು ಜನರಿಂದ ಕೇಳಿ ಬರುತ್ತದೆ. ರೆಬಲ್ ಸ್ಟಾರ್ ಅಂಬರೀಶ್ ರವರು ಕನ್ನಡ ಚಿತ್ರರಂಗದ ನಾಯಕನಾಗಿ ಹಲವಾರು ವರ್ಷಗಳಿಂದ ಕನ್ನಡ ಚಿತ್ರರಂಗವನ್ನು ಒಂದೊಳ್ಳೆ ದಾರಿಯ ಕಡೆಗೆ ಕರೆದುಕೊಂಡು ಹೋಗುತ್ತಿದ್ದರು. ಬರೋಬ್ಬರಿ ಇದುವರೆಗೂ 200ಕ್ಕೂ ಅಧಿಕ ಸಿನಿಮಾಗಳಲ್ಲಿ ಕಾಣಿಸಿಕೊಂಡರು.

ಭಾರತೀಯ ಚಿತ್ರರಂಗದ ಪ್ರತಿಯೊಂದು ಭಾಷೆಗಳಲ್ಲಿ ಕೂಡ ಸ್ಟಾರ್ ಸೆಲೆಬ್ರಿಟಿಗಳ ಸ್ನೇಹವನ್ನು ಹೊಂದಿರುವವರು. ಅಮಿತಾ ಬಚ್ಚನ್ ಶತ್ರುಘ್ನ ಸಿನ್ಹಾ ರಜನಿಕಾಂತ್ ಚಿರಂಜೀವಿ ಹೀಗೆ ಹೇಳುತ್ತ ಹೋದರೆ ಲಿಸ್ಟ್ ಬೆಳೆಯುತ್ತದೆ. ಸ್ನೇಹದ ಜೀವಂತ ಸಾಕ್ಷಿಯಾಗಿದ್ದವರು ರೆಬಲ್ ಸ್ಟಾರ್ ಅಂಬರೀಶ್. ಇತ್ತೀಚಿನ ಕಾರ್ಯಕ್ರಮವೊಂದರಲ್ಲಿ ಅವರ ಪತ್ನಿ ಆಗಿರುವ ಸುಮಲತಾ ಅಂಬರೀಶ್ ಅವರು 200 ಸಿನಿಮಾಗಳಲ್ಲಿ ನಟಿಸಿರುವ ಅಂಬರೀಶ್ರವರು ಪಡೆದಿರುವ ಸಂಭಾವನೆ ಎಷ್ಟು ಗೊತ್ತೆ ಎಂಬುದಾಗಿ ವಿವರಿಸಿದ್ದಾರೆ.

ಹೌದು ಗೆಳೆಯರೇ ಸುಮಲತಾ ಅಂಬರೀಶ್ ಅವರು ಹೇಳುವಂತೆ ಅಂಬರೀಶ್ ರವರು ಎಲ್ಲಿಯವರೆಗೆ 200ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದರೆ ಅದಕ್ಕೆ 50% ಸಿನಿಮಾಗಳಲ್ಲಿ ಕೂಡ ಸರಿಯಾದ ಸಂಭಾವನೆ ಪಡೆದುಕೊಂಡಿಲ್ಲ ಎಂಬುದಾಗಿ ಹೇಳಿದ್ದಾರೆ. ಕೇವಲ ಇಷ್ಟೇ ಯಾಕೆ ಕೆಲವೊಂದು ಸಿನಿಮಾಗಳಿಗೆ ನಿರ್ಮಾಪಕರಿಗೆ ಸಿನಿಮಾ ಮಾಡಲು ಹಣವನ್ನು ನೀಡಿ ನಿಮಗೆ ಯಾವಾಗ ಕೊಡುವ ಪರಿಸ್ಥಿತಿ ನಿರ್ಮಾಣವಾಗುತ್ತದೆ ಆವಾಗ ಕೊಡಿ ಎಂಬುದಾಗಿ ಹೇಳುತ್ತಿದ್ದರಂತೆ. ನಿಜಕ್ಕೂ ಕಲಿಯುಗದ ದಾನವೀರಶೂರಕರ್ಣ ಎಂದರೆ ಖಂಡಿತ ತಪ್ಪಾಗಲಾರದು. ಇಷ್ಟು ಮಾತ್ರವಲ್ಲದೆ ಅಣ್ಣಾವ್ರ ಕನಸಾಗಿರುವ ಕಲಾವಿದರ ಸಂಘದ ಭವನದ ನಿರ್ಮಾಣದ ಮುಖ್ಯ ರೂವಾರಿ ಕೂಡ ಅಂಬರೀಶ್ ರವರ ಆಗಿದ್ದರು. ಇಂದಿಗೂ ಕೂಡ ಕನ್ನಡಚಿತ್ರರಂಗ ಹಲವಾರು ಸಮಸ್ಯೆಗಳು ಉದ್ಭವವಾದಾಗ ಅಂಬರೀಶ್ ಅವರನ್ನು ಮಿಸ್ ಮಾಡಿಕೊಂಡಿರುವ ಅನುಭವವನ್ನು ಕಾಣುತ್ತದೆ. ಯಾಕೆಂದರೆ ಯಾವುದೇ ಸಮಸ್ಯೆ ಇರಲಿ ಕೇವಲ ಒಂದು ಮೀಟಿಂಗ್ ನಲ್ಲೇ ಅದನ್ನು ಪರಿಹರಿಸುವ ತಾಕತ್ತು ನಮ್ಮ ಮಂಡ್ಯದ ಗಂಡಿಗಿತ್ತು ಎಂದು ನೆನಪಿಸಿಕೊಳ್ಳಬಹುದಾಗಿದೆ.