ಇನ್ನೇನು ಶುರುವಾಗಲಿರುವ ಕನ್ನಡ ಬಿಗ್ ಬಾಸ್ ಗೆ ಹಿರಿಯ ನಟಿ ವಿಭಾಗದಲ್ಲಿ ಎಂಟ್ರಿ ಕೊಡಲಿರುವ ನಟಿ ಯಾರಂತೆ ಗೊತ್ತೇ?? ಶ್ರುತಿ ರವರಂತೆ ಕಮಲ್ ಮಾಡಲಿದ್ದಾರೆಯೇ??
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಕಿರುತೆರೆಯ ಕ್ಷೇತ್ರವನ್ನು ಗಮನಿಸಿದಾಗ ಒಂದು ಲೆಕ್ಕದಲ್ಲಿ ವಿಶೇಷ ಕಾರ್ಯಕ್ರಮಗಳಿಗೆ ಭದ್ರ ಬುನಾದಿಯನ್ನು ಹಾಕಿಕೊಟ್ಟಿದ್ದು ಕನ್ನಡ ಕಿರುತೆರೆ ಕ್ಷೇತ್ರದ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋ ಆಗಿರುವ ಬಿಗ್ಬಾಸ್ ಎಂದರೆ ಖಂಡಿತವಾಗಿ ತಪ್ಪಾಗಲಾರದು. ಬಿಗ್ ಬಾಸ್ ಕಾರ್ಯಕ್ರಮದ ಯಶಸ್ಸನ್ನು ನೋಡಿ ಹಲವಾರು ರಿಯಾಲಿಟಿ ಶೋ ಕಾರ್ಯಕ್ರಮಗಳು ಪ್ರಸಾರವಾಗಲು ಪ್ರಾರಂಭವಾಗಿದೆ.

ಇನ್ನು ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮ ಅತ್ಯಂತ ಶೀಘ್ರದಲ್ಲೇ ಪ್ರಸಾರವಾಗುವ ಅಂತಹ ಎಲ್ಲಾ ಸಾಧ್ಯತೆಗಳು ಕೂಡ ಕಾಣುತ್ತಿದ್ದು ಇದಕ್ಕಾಗಿ ತೆರೆಮರೆಯ ಕೆಲಸಗಳು ಈಗಾಗಲೇ ಪ್ರಾರಂಭವಾಗಿದೆ ಎಂಬ ಸುದ್ದಿಗಳು ಕೇಳಿಬರುತ್ತಿವೆ. ಬಿಗ್ ಬಾಸ್ ನಲ್ಲಿ ಹಲವಾರು ಕ್ಷೇತ್ರಗಳಿಂದ ವಿವಿಧ ಸಾಧಕರನ್ನು ಕರೆತಂದು ಸ್ಪರ್ಧಿಗಳನ್ನು ಆಗಿ ಮಾಡಲಾಗುತ್ತದೆ ಎಂಬುದು ನಮಗೆಲ್ಲ ತಿಳಿದಿರುವ ವಿಚಾರವಾಗಿದೆ. ಇನ್ನು ಪ್ರತಿಯೊಂದು ಬಿಗ್ ಬಾಸ್ ಸೀಸನ್ ನಲ್ಲಿ ಚಿತ್ರರಂಗದ ಹಿರಿಯ ನಟಿಯರನ್ನು ಕೂಡ ಸ್ಪರ್ಧಾಳುಗಳನ್ನು ಆಗಿ ಆಯ್ಕೆ ಮಾಡಿಕೊಳ್ಳುತ್ತಾರೆ. ಈ ಹಿಂದೆ ಒಂದು ಬಾರಿ ಕನ್ನಡ ಚಿತ್ರರಂಗದ ಹಿರಿಯ ನಟಿ ಆಗಿರುವ ಶ್ರುತಿ ರವರು ಕೂಡ ಆಯ್ಕೆಯಾಗಿದ್ದರು.
ಅವರು ಭಾಗವಹಿಸಿದಂತಹ ಬಿಗ್ ಬಾಸ್ ಸೀಸನ್ ನಲ್ಲಿ ವಿನ್ನರ್ ಆಗಿ ಕೂಡ ಹೊರಹೊಮ್ಮಿದ್ದರು. ಇನ್ನು ಈ ಬಾರಿ ಮುಂಬರುವ ಬಿಗ್ ಬಾಸ್ ನಲ್ಲಿ ಕೂಡ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ನಟಿಯನ್ನು ಆಯ್ಕೆ ಮಾಡಲಾಗುತ್ತದೆ ಎಂಬ ಸುದ್ದಿ ಹರಿದಾಡುತ್ತಿದೆ. ಹೌದು ಅವರು ಇನ್ಯಾರು ಅಲ್ಲ ನಮ್ಮೆಲ್ಲರ ನೆಚ್ಚಿನ ನಟಿ ತಾರಾ ಅವರು. ನಟಿ ತಾರಾ ಅವರು ಈಗಾಗಲೇ ಹಲವಾರು ಕಾರ್ಯಕ್ರಮಗಳ ತೀರ್ಪುಗಾರರಾಗಿ ಕೂಡ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಪ್ರಸಾರವಾಗುತ್ತಿರುವ ನಮ್ಮಮ್ಮ ಸೂಪರ್ ಸ್ಟಾರ್ ಕಾರ್ಯಕ್ರಮದಲ್ಲಿ ಕೂಡ ತೀರ್ಪುಗಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನಟಿ ತಾರಾ ರವರು ಬಿಗ್ ಬಾಸ್ ಮನೆಗೆ ಕಾಲಿಟ್ಟರೆ ಖಂಡಿತವಾಗಿಯೂ ಮನರಂಜನೆ ಮಟ್ಟಿಗೆ ಯಾವುದೇ ಕೊರತೆ ಎದ್ದು ಕಾಣುವುದಿಲ್ಲ ಅನ್ನೋದಂತೂ ಕನ್ಫರ್ಮ್.