ಎಲ್ಲರಿಗಿಂತ ಅತಿ ಕಡಿಮೆ ಬೆಲೆಗೆ, ಅಂದರೆ 500 ಕ್ಕೂ ಕಡಿಮೆ ಬೆಲೆಗೆ ಸಿಗುವ ವೊಡಾಫೋನ್ ಪ್ಲಾನ್ ಗಳು ಹೇಗಿದೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಭಾರತದ ಎಲ್ಲಾ ಟೆಲಿಕಾಂ ಕಂಪನಿಗಳೂ ಕೂಡ ನಾಮುಂದು ತಾಮುಂದು ಅಂತ, ಒಬ್ಬರಿಗಿಂತ ಒಬ್ಬರು ಪೈಪೋಟಿ ದರದಲ್ಲಿ ಪ್ರಿಯೇಯ್ಡ್ ಪ್ಲ್ಯಾನ್ ಗಳನ್ನು ನೀಡುತ್ತಿದ್ದಾರೆ. ಇದರಲ್ಲಿ ಹಲವು ಯೋಜನೆಗಳು ಗ್ರಾಹಕರಿಗೆ ತುಂಬಾನೇ ಪ್ರಯೋಜನವಾಗಿವೆ. ಇದೀಗ ಸ್ವಲ್ಪ ಪೋಸ್ಟ್ ಪೇಯ್ಡ್ ಯೋಜನೆಗಳ ಬಗ್ಗೆ ನೋಡೋಣ. ವಡಾಫೋನ್ – ಐಡಿಯಾ 500 ರೂಪಾಯಿಗಿಂತಲೂ ಕಡಿಮೆದರದಲ್ಲಿ ಉತ್ತಮ ಪೋಸ್ಟ್ ಪೇಯ್ಡ್ ಪ್ಲ್ಯಾನ್ ಗಳನ್ನು ನೀಡುತ್ತಿದೆ. ಬನ್ನಿ ಈ ಬಗ್ಗೆ ಇನ್ನಷ್ಟು ಮಾಹಿತಿಯನ್ನ ನೋಡೋಣ.
ಮೊದಲನೆಯದಾಗಿ ವಿಐ ನ 399 ರೂ.ಗಳ ಪೋಸ್ಟ್‌ಪೇಯ್ಡ್ ಯೋಜನೆ. ಇದು 40ಜಿಬಿ ಡೇಟಾ ಮತ್ತು 200ಜಿಬಿ ಯ ಡೇಟಾ ರೋಲ್‌ಓವರ್ ಮಿತಿಯಾನ್ನು ತಿಂಗಲಿಗೆ ನೀಡುತ್ತದೆ. ಜೊತೆಗೆ 100 ಎಸ್ ಎಂ ಎಸ್ ಮತ್ತು ಅನಿಯಮಿತ ಧ್ವನಿ ಕರೆ, ವಿಐ ಮೂವಿಸ್ ಮತ್ತು ಟಿವಿಯ ಒಟಿಟಿ ಚಂದಾದಾರಿಕೆಯನ್ನು ಕೂಡ ನೀಡುತ್ತಿದೆ. ಇದು ಒಂದು ಬೇಸಿಕ್ ಯೋಜನೆಯಾಗಿದ್ದು, ಮೊಬೈಲ್ ನಲ್ಲಿ ಡೇಟಾ ಬಳಸುವವರಿಗೆ ಸೂಕ್ತವಾಗಿದೆ. ಅದುಬಿಟ್ಟು ಓಟಿಟಿ ವಿಷಯಕ್ಕೆ ಬಂದರೆ ಇದರಲ್ಲಿ ವಿಶೇಷವಾದ ಕೊಡುಗೆಗಳೇನು ಇಲ್ಲ.

ವಿಐ ನ 499 ರೂ ಪೋಸ್ಟ್‌ಪೇಯ್ಡ್ ಯೋಜನೆ. ಇದು ತಿಂಗಳಿಗೆ 75ಜಿಬಿ ಡೇಟಾ ಮತ್ತು 200ಜಿಬಿ ಯ ರೋಲ್‌ಓವರ್ ಮಿತಿಯನ್ನು ಹೊಂದಿದೆ. ಅಂದಹಾಗೆ ಈ ಯೋಜನೆಯಲ್ಲಿ ಅನೇಕ ಒಟಿಟಿ ಪ್ರಯೋಜನಗಳನ್ನು ನೀಡಲಾಗಿದೆ. 1499 ಮೌಲ್ಯದ ಅಮೆಜಾನ್ ಪ್ರೈಮ್ ಗೆ ಒಂದು ವರ್ಷಕ್ಕೆ ಉಚಿತ ಚಂದಾದಾರಿಕೆ, ಡಿಸ್ನಿ+ಹಾಟ್ ಸ್ಟಾರ್ ಮೊಬೈಲ್ ಮತ್ತು ವಿಐ ಮೂವಿಸ್ ಮತ್ತು ಟಿವಿ ಚಂದಾದಾರಿಕೆ ಉಚಿತ ಪ್ರವೇಶ. ಹಾಗೆಯೇ ಅನಿಯಮಿತ ಧ್ವನಿ ಕರೆಯೊಂದಿಗೆ ತಿಂಗಳಿಗೆ 100 ಎಸ್ ಎಂ ಎಸ್ಅನ್ನು ಕೂಡ ನೀಡುತ್ತದೆ.
ಇದರೊಂದಿಗೆ ವಿಐ ಪೋಸ್ಟ್ ಪೇಯ್ಡ್ ಕುಟುಂಬ ಯೋಜನೆಯನ್ನೂ ಕೂಡ ನೀಡುತ್ತಿದೆ. ಆದರೆ ಈ ಯೋಜನೆಗಳಲ್ಲಿ ಅಂದರೆ ತಿಂಗಳಿಗೆ ಕೇವಲ 100 ಎಸ್ ಎಂ ಎಸ್ ಸೌಲಭ್ಯ ಆತ್ರ ಇರುವುದು ಗ್ರಾಹಕರಿಗೆ ಬೇಸರದ ಸಂಗತಿ. ಇದನ್ನು ಹೆಚ್ಚಿಸಬೇಕು ಎಂಬುದು ನಮ್ಮ ಅಭಿಪ್ರಾಯ ಕೂಡ. ನೀವು ನಿಮಗೆ ಸ್ರೈ ಹೊಂದುವಂಥ ಕಡಿಮೆ ಬೆಲೆಯ ಪೋಸ್ಟ್ ಪೇಯ್ಡ್ ಪ್ಲ್ಯಾನ್ ಗಳನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ಇಲ್ಲಿದೆ.