ಇತ್ತೀಚಿಗಷ್ಟೇ ತಾಯಿಯಾದ ಪ್ರಿಯಾಂಕಾ ರವರು ತನ್ನ ಪುಟ್ಟ ಮಗುವಿಗಾಗಿ ಖರೀದಿ ಮಾಡಿರುವ ಮನೆಯ ಬೆಲೆ ಎಷ್ಟು ಕೋಟಿ ಗೊತ್ತೇ? ಇಪ್ಪತ್ತು ಮನೆ ಬರುತಿತ್ತು.

144

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಪ್ರಿಯಾಂಕ ಚೋಪ್ರಾ ರವರು ಈಗಾಗಲೇ ಅಮೆರಿಕ ಮೂಲದ ಹಾಲಿವುಡ್ ಚಿತ್ರದ ಪಾಪ್ ಗಾಯಕ ಹಾಗೂ ನಟನಾಗಿರುವ ನಿಕ್ ಜೋನಸ್ ಅವರನ್ನು ಮದುವೆಯಾಗಿದ್ದರು. ಇವರಿಬ್ಬರ ನಡುವೆ ಇದ್ದಂತಹ ಹತ್ತುವರ್ಷದ ಅಂತರದ ನಡುವೆಯೂ ಕೂಡ ಇವರಿಬ್ಬರ ನಡುವೆ ವಯಸ್ಸಿನ ಅಡ್ಡಿ ಎಂದೂ ಕೂಡ ಬಂದಿಲ್ಲ. ಇತ್ತೀಚಿಗಷ್ಟೇ ಪ್ರಿಯಾಂಕ ಹಾಗೂ ನಿಕ್ ಇಬ್ಬರೂ ಕೂಡ ಮಗುವಿಗೆ ಪೋಷಕರಾಗಿದ್ದಾರೆ.

ಯಾವುದೇ ಸುದ್ದಿ ಇಲ್ಲದೆ ಇಷ್ಟು ಬೇಗ ಹೇಗೆ ಮಗುವನ್ನು ಪಡೆದಿದ್ದಾರೆ ಎನ್ನುವುದರ ಕುರಿತಂತೆ ಎಲ್ಲರಿಗೂ ಗೊಂದಲ ಮೂಡಿತು. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿರುವುದನ್ನು ಇಬ್ಬರು ದಂಪತಿಗಳು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು ಇವರಿಗೆ ಅಭಿಮಾನಿಗಳು ಹಾಗೂ ಸೆಲೆಬ್ರಿಟಿಗಳಿಂದ ಶುಭಾಶಯಗಳ ಮಹಾಪೂರವೇ ಹರಿದುಬಂದಿತ್ತು. ಇನ್ನು ಮಗುವಿಗಾಗಿ ಹೊಸ ಉಡುಗೊರೆಯೊಂದನ್ನು ಕೂಡ ಸಿದ್ಧಪಡಿಸಿದ್ದರು. ನಿಮಗೆಲ್ಲ ಗೊತ್ತಿರೋ ಹಾಗೆ ಮಕ್ಕಳು ಉದ್ಯಾನವನದಲ್ಲಿ ಓಡಾಡಿಕೊಂಡಿರಲು ಹಾಗೂ ಆಟವಾಡಿಕೊಂಡಿರಲು ಇಷ್ಟಪಡುತ್ತಾರೆ.

ಇದಕ್ಕಾಗಿ ಇಬ್ಬರು ದಂಪತಿಗಳು ಕಳೆದ ವರ್ಷದ ಆಗಸ್ಟ್ ತಿಂಗಳಿನಲ್ಲಿ ಲಾಸ್ ಎಂಜಲೀಸ್ ನಲ್ಲಿರುವ ಮನೆಯೊಂದನ್ನು ಖರೀದಿಸಿದ್ದಾರೆ. ಮಗುವಿಗೆ ಒಳ್ಳೆಯ ವಾತಾವರಣ ಇರಬೇಕು ಎನ್ನುವ ಕಾರಣಕ್ಕಾಗಿ ಲಾಸ್ ಎಂಜಲೀಸ್ ನಲ್ಲಿರುವ ಈ ಮನೆಯನ್ನು ಖರೀದಿಸಿ ಅಭಿರುಚಿಗೆ ತಕ್ಕಂತೆ ಸಿದ್ಧಪಡಿಸಿದ್ದಾರೆ. ಇಬ್ಬರು ದಂಪತಿಗಳು ಕೂಡ ಈಗ ತಮ್ಮ ಮಗುವಿನೊಂದಿಗೆ ಇದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ಇನ್ನು ಈ ಮನೆಯನ್ನು ಬರೋಬ್ಬರಿ 149 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ್ದಾರೆ ಎಂದು ಕೇಳಿಬರುತ್ತಿದೆ. ಇಬ್ಬರು ದಂಪತಿಗಳು ಈಗ ಮಗುವಿನ ಲಾಲನೆ ಪಾಲನೆಯಲ್ಲಿ ತೊಡಗಿದ್ದಾರೆ ಎನ್ನುವುದಾಗಿ ಕೇಳಿಬರುತ್ತಿದೆ. ಎಲ್ಲಾ ಅಭಿಮಾನಿಗಳು ಪಿಗ್ಗಿ ದಂಪತಿಗಳ ಮಗುವಿನ ಫೋಟೋವನ್ನು ನೋಡಲು ಕಾತರರಾಗಿದ್ದಾರೆ.