ಪೂಜಾ ಹೆಗ್ಡೆ ಜೊತೆ ಡಾನ್ಸ್ ಮಾಡುವಾಗ ಸಲ್ಮಾನ್ ಖಾನ್ ಮಾಡಿದ್ದೇನು ಗೊತ್ತೇ?? ಎಲ್ಲರಿಗೂ ತಿಳಿದ ಮೇಲೆ ಬಾರಿ ಮುಜುಗರಕ್ಕೆ ಒಳಗಾದ ಸಲ್ಮಾನ್.
ನಮಸ್ಕಾರ ಸ್ನೇಹಿತರೇ ಬಾಲಿವುಡ್ ಚಿತ್ರರಂಗದ ಮೆಗಾಸ್ಟಾರ್ ಸಲ್ಮಾನ್ ಖಾನ್ ರವರು ಹಲವಾರು ವಿಚಾರಗಳಿಗಾಗಿ ಫೇಮಸ್ ಎನ್ನುವುದು ನಿಮಗೆಲ್ಲಾ ಗೊತ್ತಿದೆ. ಇವರನ್ನು ಬಾಲಿವುಡ್ ಚಿತ್ರರಂಗದ ಬ್ಯಾಡ್ ಬಾಯ್ ಹಾಗೂ ಮೆಗಾಸ್ಟಾರ್ 2 ಹೆಸರಿನಿಂದಲೂ ಕೂಡ ಕರೆಯುತ್ತಾರೆ. ಒಂದು ಕಾಲದಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಸಾಕಷ್ಟು ಕೆಟ್ಟ ವಿಚಾರಗಳಿಗಾಗಿ ಸುದ್ದಿಯಾಗಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ತಮ್ಮ ಬೀಯಿಂಗ್ ಹ್ಯೂಮನ್ ಟ್ರಸ್ಟ್ ಮೂಲಕ ಬಡ ಜನರಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಸುದ್ದಿಯಾಗುತ್ತಿದ್ದಾರೆ.
ಲೋಕ ಡೌನ್ ಸಂದರ್ಭದಲ್ಲಿ ಕೂಡ ಬಡಜನರಿಗೆ ಆಹಾರ ಪದಾರ್ಥಗಳನ್ನು ವಿತರಿಸುವಂತಹ ಕಾರ್ಯವನ್ನು ಮಾಡಿದ್ದರು. ಇನ್ನು ಇತ್ತೀಚಿಗಷ್ಟೇ ದುಬೈನಲ್ಲಿ ನಡೆದಿರುವಂತಹ ಕಾರ್ಯಕ್ರಮ ವೊಂದರ ಮೂಲಕವೂ ಕೂಡ ಸಾಕಷ್ಟು ಸುದ್ದಿಗೆ ಒಳಗಾಗಿದ್ದಾರೆ. ಆಗಾಗ ಸಲ್ಮಾನ್ ಖಾನ್ ರವರು ತಮ್ಮ ತಂಡದೊಂದಿಗೆ ದುಬೈನ ಲೈವ್ ಕಾರ್ಯಕ್ರಮಗಳಲ್ಲಿ ಪರ್ಫಾರ್ಮೆನ್ಸ್ ನೀಡಿ ಬರುತ್ತಾರೆ. ಈ ಸಮಯದಲ್ಲಿ ಕೂಡ ನಟಿ ಪೂಜಾ ಹೆಗಡೆ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ದುಬೈನ ಕಾರ್ಯಕ್ರಮಕ್ಕೆ ಹಾಜರಾಗಿದ್ದರು. ಈ ಸಂದರ್ಭದಲ್ಲಿ ಅಲ್ಲಿ ನಡೆದಂತಹ ಒಂದು ಘಟನೆಯಿಂದಾಗಿ ಸಲ್ಮಾನ್ ಖಾನ್ ರವರು ಮುಜುಗರಕ್ಕೆ ಈಡಾಗಿದ್ದಾರೆ. ಈಗಾಗಲೇ ಈ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಸಲ್ಮಾನ್ ಖಾನ್ ರವರು ಟ್ರೋಲ್ ಗೆ ಒಳಗಾಗಿದ್ದಾರೆ.

ಹೌದು ಸಲ್ಮಾನ್ ಖಾನ್ ರವರ ಕಿಕ್ ಚಿತ್ರದ ಪ್ರಸಿದ್ಧ ಸಾಂಗ್ ಆಗಿರುವ ಜುಮ್ಮೆ ಕಿ ರಾತ್ ಹೈ ಸಾಂಗ್ನಲ್ಲಿ ಕೊನೆಗೆ ನಾಯಕನಟಿ ಹಿಂಬದಿಯ ವಸ್ತ್ರದ ಅಂಚನ್ನು ಕಚ್ಚಿ ಹಿಡಿದು ನೃತ್ಯ ಮಾಡಬೇಕಾಗುತ್ತದೆ. ಆದರೆ ದುಬೈನಲ್ಲಿ ನಡೆದ ಕಾರ್ಯಕ್ರಮದ ಸಂದರ್ಭದಲ್ಲಿ ಪೂಜಾ ಹೆಗ್ಡೆ ಇದ್ಯಾವುದರ ಅರಿವೇ ಇಲ್ಲದಂತೆ ತಮ್ಮ ಪಾಡಿಗೆ ಹೊರಟುಹೋಗುತ್ತಿದ್ದರು. ಇಲ್ಲಿ ಸಲ್ಮಾನ್ ಖಾನ್ ರವರು ಪೂಜಾ ರವರ ಹಿಂಬದಿಯ ಬಟ್ಟೆ ಅಂಚನ್ನು ಹಿಡಿಯಲು ಒದ್ದಾಡುತ್ತಿದ್ದರು ಹಾಗೂ ಇದರಿಂದ ಅವರು ಮುಜುಗರಕ್ಕೆ ಒಳಗಾಗಿದ್ದು ಕಂಡುಬಂದಿತ್ತು. ಈ ವಿಡಿಯೋ ಈಗ ಎಲ್ಲರ ಹಾಸ್ಯಕ್ಕೆ ಒಳಗಾಗಿದೆ.