ಇತ್ತೀಚಿಗೆ ಸಾಲು ಸಾಲು ಸಿನಿಮಾ ಸೋತರೂ ಕೂಡ ಕೀರ್ತಿ ಸುರೇಶ್ ಅವರಿಗೆ ಆಫರ್ ಹುಡುಕಿಕೊಂಡು ಹೋಗುತ್ತಿರುವುದು ಯಾಕೆ ಗೊತ್ತೇ??

77

ನಮಸ್ಕಾರ ಸ್ನೇಹಿತರೇ ನಮ್ಮ ದಕ್ಷಿಣ ಭಾರತ ಚಿತ್ರರಂಗದಲ್ಲಿ ಈಗಾಗಲೇ ಹಲವಾರು ಮಹಿಳಾ ಸೂಪರ್ ಸ್ಟಾರ್ ಗಳು ಕೂಡ ಇತ್ತೀಚಿನ ದಿನಗಳಲ್ಲಿ ಮುನ್ನೆಲೆಗೆ ಬಂದಿದ್ದಾರೆ. ಅವುಗಳಲ್ಲಿ ಇಂದು ನಾವು ಹೇಳಲು ಹೊರಟಿರುವ ನಟಿ ಕೂಡ ಒಬ್ಬರು ಎನ್ನುವುದು ಮತ್ತೊಂದು ಸಂತೋಷದ ವಿಚಾರ. ಹೌದು ನೀವು ಈಗಾಗಲೇ ಗೆಸ್ ಮಾಡಿರುತ್ತೀರಿ ನಾವು ಮಾತನಾಡುತ್ತಿರುವುದು ದಕ್ಷಿಣ ಭಾರತ ಚಿತ್ರರಂಗದ ಬಹುಬೇಡಿಕೆ ನಟಿಯಾಗಿರುವ ಕೀರ್ತಿ ಸುರೇಶ್ ರವರ ಕುರಿತಂತೆ. ನಟಿ ಕೀರ್ತಿ ಸುರೇಶ್ ರವರು ಒಬ್ಬ ಅತ್ಯದ್ಭುತ ನಟಿಯನ್ನು ಇದರಲ್ಲಿ ಯಾವುದೇ ಅನುಮಾನವಿಲ್ಲ.

ಈಗಾಗಲೇ ಇದಕ್ಕೆ ಹಲವಾರು ಸಿನಿಮಾಗಳ ಅವರ ನಟನೆಯೇ ಸಾಕ್ಷಿ ಎಂದು ಹೇಳಬಹುದಾಗಿದೆ. ಆದರೆ ಅವರ ನಟನೆಯ ಯಾವುದೇ ಸಿನಿಮಾಗಳು ಕೂಡ ಬಾಕ್ಸಾಫೀಸಿನಲ್ಲಿ ಅಷ್ಟೊಂದು ದೊಡ್ಡ ಮಟ್ಟದ ಗೆಲುವನ್ನು ಸಾಧಿಸುತ್ತಿಲ್ಲ. ಇದು ಕೂಡ ಎಲ್ಲರೂ ಒಪ್ಪಲೇಬೇಕಾದ ವಿಚಾರ. ಆದರೂ ಕೂಡ ನಿರ್ಮಾಪಕರು ಹಾಗೂ ನಿರ್ದೇಶಕರು ಕಾಲ್ ಶೀಟ್ ಗಾಗಿ ಅವರ ಬಳಿಗೆ ಬರುವುದು ಇನ್ನು ಕೂಡ ತಪ್ಪಿಲ್ಲ. ಇನ್ನು ಸೋಶಿಯಲ್ ಮೀಡಿಯಾ ಗಳಲ್ಲಿ ಕೂಡ ಇರ್ತಿ ಸುರೇಶ ರವರಿಗೆ ಕೋಟ್ಯಾಂತರ ಅಭಿಮಾನಿಗಳು ಇದ್ದಾರೆ. ಅವರ ಜನಪ್ರಿಯತೆ ಹಾಗೂ ಬೇಡಿಕೆ ಹಲವಾರು ಸೋಲುಗಳಿಂದಲೂ ಕೂಡ ಕಡಿಮೆಯಾಗಿಲ್ಲ. ಇಷ್ಟು ಮಾತ್ರವಲ್ಲದೆ ಮೆಗಾಸ್ಟಾರ್ ಚಿರಂಜೀವಿ ನಟನೆಯ ಭೋಲಾ ಶಂಕರ್ ನಲ್ಲಿ ಅವರ ತಂಗಿಯ ಪಾತ್ರಕ್ಕೆ ಕೂಡ ಆಯ್ಕೆಯಾಗಿದ್ದಾರೆ. ಇಷ್ಟೊಂದು ಸೋಲಿನ ನಡುವೆ ಕೂಡ ಅವರ ಜನಪ್ರಿಯತೆ ಹಾಗೂ ಅವರನ್ನು ತಮ್ಮ ಸಿನಿಮಾಗಳಿಗೆ ಸೈನ್ ಮಾಡಿಕೊಳ್ಳಲು ನಿರ್ಮಾಪಕರು ನಿರ್ದೇಶಕರು ಹಾತೊರೆಯುತ್ತಿರುವುದು ಯಾಕೆ ಗೊತ್ತಾ.

ಅದರ ಕುರಿತಂತೆ ಪರಿಪೂರ್ಣವಾಗಿ ತಿಳಿಸುತ್ತೇವೆ ಬನ್ನಿ. ಹೌದು ಯಾವುದೇ ರೀತಿಯ ಪಾತ್ರವನ್ನು ನಿರ್ವಹಿಸಬಲ್ಲ ಅಂತಹ ರಾಷ್ಟ್ರಪ್ರಶಸ್ತಿ ವಿಜೇತ ನಟಿ ಕೀರ್ತಿ ಸುರೇಶ್. ಮಹೇಶ್ ಬಾಬುರವರ ಜೊತೆಗಿನ ಸರ್ಕಾರು ವಾರಿ ಪಾಠ ಚಿತ್ರದ ಮೂಲಕ ಮತ್ತೆ ಗೆಲುವಿನ ಲಯಕ್ಕೆ ಮರಳಲಿದ್ದಾರೆ ಎನ್ನುವ ಕುರಿತಂತೆ ಹಲವಾರು ಸಿನಿಮಾ ನಿರ್ಮಾಪಕರು ಹಾಗೂ ನಿರ್ದೇಶಕರು ಕಾತರದಿಂದ ಕಾಯುತ್ತಿದ್ದಾರೆ. ಈ ಚಿತ್ರ ಖಂಡಿತವಾಗಿ ಕೀರ್ತಿ ಸುರೇಶ್ ರವರಿಗೆ ಮತ್ತೊಂದು ದೊಡ್ಡ ಮಟ್ಟದ ಜಯವನ್ನು ನೀಡುತ್ತದೆ ಎಂದು ಎಲ್ಲರ ನಂಬಿಕೆ. ಈಗಾಗಲೇ ಚಿತ್ರದ ಮೊದಲ ಹಾಡು ಆಗಿರುವ ಕಲಾವತಿ ಕೋಟ್ಯಾಂತರ ವೀಕ್ಷಣೆಗಳನ್ನು ಪಡೆದು ಯೂಟ್ಯೂಬ್ ನಲ್ಲಿ ಮುನ್ನುಗ್ಗುತ್ತಿದೆ. ಇದಕ್ಕಾಗಿ ಎಲ್ಲಾ ಹೊಸ ಸಿನಿಮಾಗಳ ನಿರ್ಮಾಪಕ-ನಿರ್ದೇಶಕರು ಕೀರ್ತಿ ಸುರೇಶ್ ರವರನ್ನು ತಮ್ಮ ಸಿನಿಮಾಗಳಲ್ಲಿ ನಟಿಸಲು ಆಹ್ವಾನಿಸುತ್ತಿದ್ದಾರೆ.