ಬಿಗ್ ನ್ಯೂಸ್: ವಿವಿಧ ವಿವೊ ಕಂಪನಿಯ ಫೋನ್ ಗಳ ಮೇಲೆ ಬಾರಿ ಡಿಸ್ಕೌಂಟ್ ಘೋಷಣೆ ಮಾಡಿದ ಅಮೆಜಾನ್. ಯಾವೆಲ್ಲ ಫೋನ್ ಗಳ ಮೇಲೆ ಆಫರ್ ಇದೆ ಗೊತ್ತೇ??

48

ನಮಸ್ಕಾರ ಸ್ನೇಹಿತರೇ, ಇಂದು ಎಲ್ಲರ ಪರ್ಚೇಸಿಂಗ್ ತಾಣ ಆನ್ ಲೈನ್. ತಿನ್ನುವ ಆಹಾರದಿಂದ ಹಿಡಿದು ಉಡುವ ಬಟ್ಟೆ ಎಲೆಕ್ಟ್ರಾನಿಕ್ ವಸ್ತುಗಳು ಎಲ್ಲವನ್ನೂ ಆನ್ ಲೈನ್ ಮೂಲಕವೇ ಖರೀದಿ ಮಾಡುತ್ತೇವೆ. ಅದರಲ್ಲೂ ಅಮೆಜಾನ್, ಪ್ಲಿಪ್ ಕಾರ್ಟ್ ನಂಥ ಕಂಪನಿಗಳು ಗುಣಮಟ್ಟದ ವಸ್ತುಗಳನ್ನು ಒದಗಿಸುವಲ್ಲಿಯೂ ಹೆಸರು ಮಾಡಿವೆ. ನಾವಿಲ್ಲಿ ತಿಳಿಸುತ್ತಿರುವುದು ಅಮೇಜಾನ್ ನಲ್ಲಿ ಉತ್ತಮ ಆಫರ್ ಹೊಂದಿರುವ ವಿವೋ ಪೋನ್ ಗಳ ಬಗ್ಗೆ. ಬನ್ನಿ ಇನ್ನಷ್ಟು ಮಾಹಿತಿಗಳನ್ನು ತಿಳಿದುಕೊಳ್ಳೋಣ.

ಹೌದು ಅಮೆಜಾನ್ ತಾಣದಲ್ಲಿ ಸಾಕಷ್ಟು ಇ ಗ್ಯಾಜೆಟ್ ಗಳಲ್ಲಿ ಆಫರ್ ಗಳು ಸಿಗುತ್ತೆ. ಅದರಲ್ಲೂ ಸ್ಮಾರ್ಟ್ ಫೋನ್ ಗಳು ಮಾರುಕಟ್ಟೆಯಲ್ಲಿ ಬಿಡುಗಡೆಯಾಗುತ್ತಿದ್ದ ಹಾಗೆ ಅಮೆಜಾನ್ ನಲ್ಲಿ ಲಭ್ಯವಾಗುತ್ತವೆ. ಅದರಲ್ಲಿ ವಿವೋ ಕಂಪನಿಯೂ ಕೂಡ ತನ್ನ ಹೊಸ ಸ್ಮಾರ್ಟ್ ಫೋನ್ ಗಳನ್ನು ಅಮೆಜಾನ್ ನಲ್ಲಿ ಲಭ್ಯವಾಗುವಂತೆ ಮಾಡುತ್ತಿದೆ.

ಮೊದಲಿಗೆ ವಿವೋ ವಿ21ಇ ಸ್ಮಾರ್ಟ್‌ಫೋನ್‌ ಬಗ್ಗೆ ನೋಡೋಣ. ಇದು 2400 x 1080 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಹೊಂದಿದ್ದು 6.44 ಇಂಚಿನ ಅಮೋಲೆಡ್‌ ಡಿಸ್‌ಪ್ಲೇಯನ್ನು ಕೊಡುತ್ತದೆ. ಮೀಡಿಯಾಟೆಕ್ ಡೈಮೆನ್ಸಿಟಿ 700 ಎಸ್ ಒಸಿ ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದೆ. ಇದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 8ಜಿಬಿ ರಾಮ್ ಮತ್ತು 128ಜಿಬಿ ಇಂಟರ್‌ ಸ್ಟೋರೇಜ್‌ ಸಾಮರ್ಥ್ಯವನ್ನು ಹೊಂದಿದೆ. ಈ ಸ್ಮಾರ್ಟ್‌ಫೋನ್‌ 64ಎಂಪಿ ಸಾಮರ್ಥ್ಯದ ಪ್ರೈಮೆರಿ ಕ್ಯಾಮೆರಾ ಹೊಂದಿದೆ. ಅಲ್ಲದೆ 32ಎಂಪಿ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಇದರಲ್ಲಿದೆ. ವಿವೋ ಫೋನ್ 4000ಎಂಎಹೆಚ್ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದೆ.

ವಿವೋ ವಿ21 5ಜಿ ಫೋನ್ 6.44-ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ, ಮೀಡಿಯಾಟೆಕ್ ಡೈಮೆನ್ಸಿಟಿ 800ಯು ಎಂಟಿ6853ವ್ ಪ್ರೊಸೆಸರ್‌ ಹೊಂದಿದ್ದು ಆಂಡ್ರಾಯ್ಡ್‌ 11 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಇನ್ನು ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 64ಮೆಗಾಪಿಕ್ಸೆಲ್‌ ಸೆನ್ಸಾರ್‌, ಎರಡನೇ ಕ್ಯಾಮೆರಾ 8 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 2 ಮೆಗಾಪಿಕ್ಸೆಲ್‌ ಸೆನ್ಸಾರ್‌ ಮ್ಯಾಕ್ರೋ ಲೆನ್ಸ್‌ ಅನ್ನು ಹೊಂದಿದ್ದು ಕ್ಯಾಮರಾ ಇಷ್ಟಪಡುವ ಗ್ರಾಹಕರಿಗೆ ಅತ್ಯುತ್ತಮ ಆಯ್ಕೆಯಾಗಿದೆ. 4000ಎಂಎಹೆಚ್ ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 33ವ್ಯಾ. ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ

ಇನ್ನು ವಿವೋ Y33s ಸ್ಮಾರ್ಟ್‌ಫೋನ್ ಕೂಡ ಅತ್ಯುತ್ತಮ ರೆಸಲ್ಯೂಶನ್ ಅಂದರೆ 2,408 x 1,080 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಇದು ಆಕ್ಟಾ ಕೋರ್ ಮೀಡಿಯಾ ಟೆಕ್ ಹಿಲಿಯೋ ಜಿ80 ಎಸ್ ಒ ಸಿ ಪ್ರೊಸೆಸರ್‌ ಅನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್ 8ಜಿಬಿ ರಾಮ್ ಮತ್ತು 128ಜಿಬಿ ಆಂತರಿಕ ಸ್ಟೋರೇಜ್‌ ನ್ನು ಹೊಂದಿದೆ ಅಲ್ಲದೇ ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸುವ ಅವಕಾಶ ಈ ಫೋನ್ ನಲ್ಲಿದೆ. ಇದೆ.

ಇನ್ನು ಕ್ಯಾಮರಾ ಬಗ್ಗೆ ಹೇಳುವುದಾದರೆ ಮುಖ್ಯ ಕ್ಯಾಮೆರಾವು 50 ಎಂಪಿ ಸೆನ್ಸಾರ್ ಹೊಂದಿದ್ದು ಸೆಕೆಂಡರಿ ಕ್ಯಾಮೆರಾವು 2 ಎಂಪಿ ಸೆನ್ಸಾರ್‌, ತೃತೀಯ ಕ್ಯಾಮೆರಾವು 2 ಎಂಪಿ ಸೆನ್ಸಾರ್‌ ಸಾಮರ್ಥ್ಯ ಹೊಂದಿದೆ.. ಇದರೊಂದಿಗೆ 16 ಎಂಪಿಯ ಸೆಲ್ಫಿ ಕ್ಯಾಮೆರಾ ಒಳಗೊಂಡಿದೆ. ಜೊತೆಗೆ 5,000 ಎಂಎ ಹೆಚ್ ಅತ್ಯುತ್ತಮ ವೇಗದ ಚಾರ್ಜಿಂಗ್ ಬ್ಯಾಟರಿ ಹೊಂದಿದೆ. ವಿವೋ ಎಕ್ಸ್60 ಮತ್ತು ವಿವೋ ವಾಯ್73 ಕೂಡ ಅತ್ಯುತ್ತಮ ಫೀಚರ್ಸ್ ಗಳನ್ನು ಹೊಂದಿದ್ದು ಕಡಿಮೆ ಬೆಲೆಯಲ್ಲಿ ಲಭ್ಯವಿವೆ. ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಫೀಚರ್ಸ್ ಗಳಿರುವ ವಿವೋ ಸ್ಮಾರ್ಟ್ ಫೋನ್ ಗಳನ್ನು ಅಮೆಜಾನ್ ನಲ್ಲಿ ಆಯ್ಕೆ ಮಾಡಿಕೊಳ್ಳಬಹುದಾಗಿದೆ.