ಮತ್ತೊಂದು ಸ್ಪೆಷಲ್ ಫೋಟೋಶೂಟ್ ಮಾಡಿಸಿದ ಖ್ಯಾತ ನಟಿ ಅಮೂಲ್ಯ, ಫೋಟೋ ನೋಡಿ ಶುಭ ಹಾರೈಸಿದ ಅಭಿಮಾನಿಗಳು. ಹೇಗಿವೆ ಗೊತ್ತೇ??

419

ನಮಸ್ಕಾರ ಸ್ನೇಹಿತರೇ ನಟಿ ಅಮೂಲ್ಯ ಅವರು ಚಿಕ್ಕವಯಸ್ಸಿನಿಂದಲೂ ಕೂಡ ಕನ್ನಡ ಚಿತ್ರರಂಗದ ಸೂಪರ್ ಸ್ಟಾರ್ ಗಳಾದಂತಹ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರಂತಹ ನಟರೊಂದಿಗೆ ನಟಿಸಿಕೊಂಡು ಬಂದವರು. ಹದಿನಾಲ್ಕು ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆ ನಟಿಯಾಗಿ ಕಾರ್ಯನಿರ್ವಹಿಸಿದವರು. ಅತಿ ಚಿಕ್ಕ ವಯಸ್ಸಿನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಚೆಲುವಿನ ಚಿತ್ತಾರ ಚಿತ್ರದ ಮೂಲಕ ನಾಯಕ ನಟಿಯಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

ಒಂದಾದಮೇಲೊಂದರಂತೆ ಯಶಸ್ವಿ ಚಿತ್ರಗಳಲ್ಲಿ ನಟಿಸುತ್ತ ತಮ್ಮ ಬೇಡಿಕೆಯನ್ನು ಕೂಡ ಕನ್ನಡಚಿತ್ರರಂಗದಲ್ಲಿ ಹೆಚ್ಚಿಸಿಕೊಂಡಿದ್ದಾರೆ. ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ಕೂಡ ನಾಯಕಿಯಾಗಿ ತೆರೆಯನ್ನು ಹಂಚಿಕೊಂಡಿದ್ದಾರೆ. ಇನ್ನು ವೈವಾಹಿಕ ಜೀವನಕ್ಕೆ ಬರುವುದಾದರೆ ರಾಜಕೀಯ ಹಿನ್ನೆಲೆಯುಳ್ಳ ಜಗದೀಶ್ ಅವರನ್ನು ಮದುವೆಯಾಗಿದ್ದರು. ಹಲವಾರು ವರ್ಷಗಳ ದಾಂಪತ್ಯದ ನಂತರ ಕೊನೆಗೂ ಕೆಲವು ತಿಂಗಳ ಹಿಂದಷ್ಟೇ ನಟಿ ಅಮೂಲ್ಯ ರವರು ತಾವು ಗರ್ಭಿಣಿಯಾಗಿರುವ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇದೇ ಹಿನ್ನೆಲೆಯಲ್ಲಿ ಅವರ ಪತಿ ಆಗಿರುವ ಜಗದೀಶ್ ದವರು ಸೀಮಂತ ಶಾಸ್ತ್ರವನ್ನು ಮಾಡಿ ಇಡೀ ಕನ್ನಡ ಚಿತ್ರರಂಗವನ್ನು ಆಹ್ವಾನಿಸಿದ್ದರು. ಎಲ್ಲರೂ ಆಗಮಿಸಿ ಆಶೀರ್ವಾದ ಮಾಡಿರುವ ಫೋಟೋ ಹಾಗೂ ವಿಡಿಯೋಗಳು ನೀವು ಈಗಾಗಲೇ ನೋಡಿದ್ದೀರಿ. ಇನ್ನು ಇತ್ತೀಚಿಗಷ್ಟೇ ನಟಿ ಅಮೂಲ್ಯ ರವರ ಬೇಬಿ ಬಂಪ್ ಫೋಟೋಶೂಟ್ ಅನ್ನೋ ಅವರ ಪತಿ ಜಗದೀಶ್ ರವರು ಅರೇಂಜ್ ಮಾಡಿದ್ದರು. ಈ ಫೋಟೋದಲ್ಲಿ ತೂಗುಯ್ಯಾಲೆಯ ಮೇಲೆ ನೀಲಿ ಬಣ್ಣದ ಬಟ್ಟೆಯಲ್ಲಿ ನಟಿ ಅಮೂಲ್ಯ ರವರು ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಇದೆ ಬೇಸಿಗೆಯಲ್ಲಿ ಅಮೂಲ್ಯ ಹಾಗೂ ಜಗದೀಶ್ ದಂಪತಿಗಳು ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅಪ್ಪ ಅಮ್ಮ ಆಗ ಹೊರಟಿರುವ ಇವರಿಬ್ಬರಿಗೂ ನಮ್ಮೆಲ್ಲರ ಶುಭ ಹಾರೈಕೆ ಇರಲಿ.