ರಾಮಾಚಾರಿಯಿಂದ ಕಲರ್ಸ್ ಟಿಆರ್ಪಿ ಬದಲು, ಬದಲಾದ ಲೆಕ್ಕಾಚಾರಗಳು, ಈ ವಾರದ ಟಾಪ್ ಕಾರ್ಯಕ್ರಮ ಹಾಗೂ ಧಾರಾವಾಹಿಗಳು ಯಾವ್ಯಾವು ಗೊತ್ತೇ?

454

ನಮಸ್ಕಾರ ಸ್ನೇಹಿತರೇ ಇತ್ತೀಚಿನ ಸಮಯಗಳಲ್ಲಿ ಕಿರುತೆರೆಯ ಚಾನೆಲ್ಗಳಲ್ಲಿ ಕುಟುಂಬ ಸಮೇತ ಹಾಕುವುದುಧಾರವಾಹಿ ಹಾಗೂ ವಿಶೇಷ ಕಾರ್ಯಕ್ರಮಗಳನ್ನು ನೋಡುವವರ ಸಂಖ್ಯೆ ಜಾಸ್ತಿಯಾಗಿದೆ. ಇಂದಿನ ವಿಚಾರದಲ್ಲಿ ನಾವು ಮಾತನಾಡಲು ಹೊರಟಿರುವುದು ಈ ವಾರದಲ್ಲಿ ಟಿ ಆರ್ ಪಿ ರೇಟಿಂಗ್ ವಿಚಾರದಲ್ಲಿ ಅಗ್ರ 5 ಸ್ಥಾನಗಳನ್ನು ಪಡೆದುಕೊಂಡಿರುವ ಧಾರವಾಹಿಗಳು ಯಾವುವು ಹಾಗೂ ವಿಶೇಷ ಕಾರ್ಯಕ್ರಮಗಳು ಯಾವುವು ಎಂಬುದರ ಕುರಿತಂತೆ.

ಇತ್ತೀಚಿಗಷ್ಟೇ ಆರಂಭವಾಗಿರುವ ಕಲರ್ಸ್ ಕನ್ನಡ ವಾಹಿನಿಯ ರಾಮಾಚಾರಿ ಧಾರಾವಾಹಿ ಪ್ರತಿ ವಾರದಿಂದ ವಾರಕ್ಕೆ ತನ್ನ ರೇಟಿಂಗ್ ಅನ್ನು ಹೆಚ್ಚಿಸಿಕೊಳ್ಳುತ್ತಿದೆ. ಈ ಬಾರಿ ರಾಮಾಚಾರಿ ಧಾರಾವಾಹಿ 6.6 ರೇಟಿಂಗ್ ಅನ್ನು ಪಡೆದುಕೊಂಡಿದೆ. ಟಾಪ್ 5 ಧಾರವಾಹಿಗಳಾದ ಪಟ್ಟಿಯಲ್ಲಿ ನೋಡುವುದಾದರೆ ಮೊದಲನೆ ಸ್ಥಾನದಲ್ಲಿ ಪುಟ್ಟಕ್ಕನ ಮಕ್ಕಳು ಎರಡನೇ ಸ್ಥಾನದಲ್ಲಿ ಗಟ್ಟಿಮೇಳ ಮೂರನೇ ಸ್ಥಾನದಲ್ಲಿ ಹಿಟ್ಲರ್ ಕಲ್ಯಾಣ ನಾಲ್ಕನೇ ಸ್ಥಾನದಲ್ಲಿ ಜೊತೆಯಲಿ ಹಾಗೂ 5ನೇ ಸ್ಥಾನದಲ್ಲಿ ಕಲರ್ಸ್ ಕನ್ನಡದ ಏಕಮಾತ್ರ ದಾರವಾಹಿ ರಾಮಾಚಾರಿ ಕಂಡುಬರುತ್ತದೆ. ಇನ್ನು ಈ ಬಾರಿಯ ಕಲರ್ಸ್ ಕನ್ನಡದ ನಂಬರ್ ವನ್ ಧಾರವಾಹಿಯಾಗಿ ಕೂಡ ರಾಮಾಚಾರಿ ಕಾಣಿಸಿಕೊಳ್ಳುತ್ತಿದೆ.

ವಿಶೇಷ ಕಾರ್ಯಕ್ರಮಗಳ ವಿಚಾರಕ್ಕೆ ಬರುವುದಾದರೆ ಎರಡು ಕಾರ್ಯಕ್ರಮಗಳು ಮೊದಲನೇ ಸ್ಥಾನಕ್ಕಾಗಿ ಹಗ್ಗಜಗ್ಗಾಟ ನಡೆಸುತ್ತಿವೆ. ಕಳೆದೆರಡು ವಾರಗಳಿಂದ ಕೆಲಸ ಕನ್ನಡವಾಹಿನಿಯ ಕಾರ್ಯಕ್ರಮ ವಾಗಿರುವ ಡ್ಯಾನ್ಸ್ ಚಾಂಪಿಯನ್ ಕಾರ್ಯಕ್ರಮ ಮೊದಲ ಸ್ಥಾನವನ್ನು ಅಲಂಕರಿಸಿತ್ತು. ಈ ಬಾರಿ ಗೋಲ್ಡನ್ ಸ್ಟಾರ್ ಗಣೇಶ್ ರವರ ಗೋಲ್ಡನ್ ಕಾರ್ಯಕ್ರಮ 5.2 ರೈಟಿಂಗ್ ಪಡೆಯುವ ಮೂಲಕ ಮೊದಲ ಸ್ಥಾನವನ್ನು ಅಲಂಕರಿಸಿದೆ. ಈ ಕಾರ್ಯಕ್ರಮಗಳಲ್ಲಿ ಸ್ಪರ್ಧೆಯನ್ನು ವುದು ಹೆಚ್ಚಾಗಿದ್ದು ಅದೇ ರೀತಿ ಮನರಂಜನೆಯ ಗುಣಮಟ್ಟವು ಕೂಡ ಹೆಚ್ಚಾಗಿದೆ ಎಂದು ಹೇಳಬಹುದಾಗಿದೆ. ಇವುಗಳಲ್ಲಿ ನಿಮ್ಮ ನೆಚ್ಚಿನ ಕಾರ್ಯಕ್ರಮ ಅಥವಾ ಧಾರವಾಹಿ ಯಾವುದು ಎಂಬುದನ್ನು ತಿಳಿಸಿ.